ತಮಿಳುನಾಡು ರಾಜಕೀಯಕ್ಕೆ ಹೊಸ ತಿರುವು? ಸೂಪರ್ ಸ್ಟಾರ್ ರಜನಿಕಾಂತ್ ಹೊಸಪಕ್ಷ ಸ್ಥಾಪನೆ?

ತಮಿಳುನಾಡಿನ ರಾಜಕೀಯ ಬಿಕ್ಕಟ್ಟಿನ ನಡುವೆಯೇ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಎಂಟ್ರಿ ನೀಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ನಡುವೆ ...
ರಜನಿಕಾಂತ್
ರಜನಿಕಾಂತ್
Updated on: 

ಚೆನ್ನೈ: ತಮಿಳುನಾಡಿನ ರಾಜಕೀಯ ಬಿಕ್ಕಟ್ಟಿನ ನಡುವೆಯೇ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಎಂಟ್ರಿ ನೀಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.  ಇದರ ನಡುವೆ ರಜನಿಕಾಂತ್ ಆರ್ ಎಸ್ ಎಸ್ ಮುಖಂಡ ಎಸ್ ಗುರುಮೂರ್ತಿ ಅವರನ್ನು ಭೇಟಿ ಮಾಡಿರುವುದು ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.

ಇಂಡಿಯಾ ಟುಡೇ ವರದ ಪ್ರಕಾರ ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರು ಹೊಸ ಪಕ್ಷ ಸ್ಥಾಪಿಸುವ ಮೂಲಕ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂದು ಹೇಳಲಾಗಿದೆ,

ತಮಿಳರ ಆರಾಧ್ಯಮೂರ್ತಿಯಾಗಿರುವ ರಜನಿಕಾಂತ್‌ ಅವರ ರಾಜಕೀಯ ಪ್ರವೇಶಕ್ಕೆ ಇದು ಸಕಾಲ ಎಂಬ ಅಭಿಪ್ರಾಯ ಕೇಳಿಬರುತ್ತಿದ್ದು, ಭಾರತೀಯ ಜನತಾ ಪಕ್ಷ ಅವರ ಬೆಂಗಾವಲಿಗೆ ನಿಂತಿದೆ ಎಂಬ ವದಂತಿಗಳಿವೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡ ಎಸ್‌. ಗುರುಮೂರ್ತಿ ಅವರು ರಜನಿಗೆ ಇಂಥ ಸಲಹೆಯನ್ನು ನೀಡಿದ್ದಾರೆ ಎನ್ನಲಾಗುತ್ತಿದೆ.

ರಜನೀಕಾಂತ್ ಅವರನ್ನು ಮುಂದಿಟ್ಟುಕೊಂಡು ತಮಿಳುನಾಡಲ್ಲಿ ಪಕ್ಷ ಸಂಘಟಿಸಲು ಬಿಜೆಪಿ ಹವಣಿಸುತ್ತಿದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ರಾಜಕೀಯಕ್ಕೆ ಎಂಟ್ರಿ ನೀಡುವ ಸಂಬಂಧ ರಜನೀಕಾಂತ್ ಅವರು ಅಧಿಕೃತವಾಗಿ ಪ್ರಕಟಿಸಬೇಕಾಗಿದೆ.

ರಜನಿಕಾಂತ್‌ ರಾಜಕೀಯ ಪ್ರವೇಶದ ಸುದ್ದಿ ಹುಟ್ಟಿಕೊಳ್ಳುತ್ತಿದ್ದಂತೆಯೇ ಎಲ್ಲೆಡೆ ಚರ್ಚೆ, ವಾದ-ಪ್ರತಿವಾದಗಳು ಹುಟ್ಟಿಕೊಂಡಿವೆ. ಅಮಿತಾಭ್‌ ಬಚ್ಚನ್‌ರಂಥ ಹಿರಿಯರು ರಾಜಕೀಯ ಪ್ರವೇಶಿಸದಂತೆ ಸಲಹೆ ನೀಡಿದ್ದಾರೆ,  1980ರ ದಶಕದಲ್ಲಿ ಕಾಂಗ್ರೆಸ್‌ ಟಿಕೆಟ್‌ನಲ್ಲಿ ಅಲಹಾಬಾದ್‌ ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ರಾಜೀವ್‌ ಮರಣಾನಂತರ ಗಾಂಧಿ ಕುಟುಂಬದ ಜತೆ ಸಂಬಂಧ ಹಳಸಿದ ಬಳಿಕ ಅವರು ಅಮರ್‌ ಸಿಂಗ್‌ ಸ್ನೇಹದ ಮೂಲಕ ಸಮಾಜವಾದಿ ಪಾರ್ಟಿ ಸೇರಿದ್ದರು. ಬಳಿಕ ಕಿರಿಕಿರಿ ಅನುಭವಿಸಿ ಹೊರಬಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com