ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರದಲ್ಲಿ ನಟಿಸಿರುವ ಮಲಯಾಳಂ ನಟಿ ಅಮಲಾ ಪೌಲ್ ಬೆಂಗಳೂರು ನನಗೆ ಲಾಸ್ ವೇಗಾಸ್ ಇದ್ದಂತೆ ಎಂದು ಹೇಳಿದ್ದಾರೆ.
ಸರಣಿ ಚಿತ್ರಗಳಲ್ಲಿ ನಟಿಸುತ್ತಿರುವ ಅಮಲಾ ಪೌಲ್ ಹೆಬ್ಬುಲಿ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದ್ದಾರೆ. ಚಿತ್ರದ ಕುರಿತಂತೆ ತಮ್ಮ ಮನದಾಳದ ಮಾತುಗಳನ್ನು ಅಮಲಾ ಅನಾವರಣ ಮಾಡಿದ್ದಾರೆ.
ನಿರ್ದೇಶಕರಾದ ಎಸ್ ಕೃಷ್ಣ ಅವರು ಚಿತ್ರದ ಕುರಿತಂತೆ ನನಗೆ ಮೇಲ್ ಮಾಡಿದ್ದರು. ಚಿತ್ರದಲ್ಲಿ ನನ್ನ ಪಾತ್ರದ ಮಹತ್ವವನ್ನು ತಿಳಿಸಿದ್ದರು. ಚಿತ್ರಕಥೆಯನ್ನು ಓದುತ್ತಿದ್ದಂತೆ ನಾನು ಈ ಚಿತ್ರದಲ್ಲಿ ನಟಿಸಲು ಸಿದ್ಧಳಾದೆ ಎಂದರು.
ಕನ್ನಡ ಚಿತ್ರಗಳಲ್ಲಿ ನಟಿಸಲು ಮತ್ತೊಂದು ಕಾರಣ ಎಂದರೇ ಬೆಂಗಳೂರಿನಲ್ಲಿ ಅಮಲಾ ಪೌಲ್ ಅವರ ಆತ್ಮೀಯ ಸ್ನೇಹಿತರು ನೆಲೆಸಿದ್ದಾರೆ. ಹೀಗಾಗಿ ಪದೇ ಪದೇ ನಾನು ಬೆಂಗಳೂರಿಗೆ ಬಂದು ಹೋಗುತ್ತಿದೆ. ನನಗೆ ಬೆಂಗಳೂರು ಲಾಸ್ ವೇಗಾಸ್ ಇದ್ದಂತೆ. ಕೇರಳದ
ಕಾನ್ವೆಂಟ್ ಶಾಲೆಯಲ್ಲಿ ನಾನು ವಿದ್ಯಾಭ್ಯಾಸ ಮಾಡಿದ್ದು, ರಜೆ ದಿನಗಳಲ್ಲಿ ನಾನು ಬೆಂಗಳೂರಿಗೆ ಬರುತ್ತಿದೆ. ಹೀಗಾಗಿ ನನ್ನ ಕೆಲ ಸ್ನೇಹಿತರಿಗೆ ನಾನು ಕನ್ನಡದ ಚಿತ್ರದಲ್ಲಿ ಅಭಿನಯಿಸಬೇಕೆಂಬ ಆಸೆ ಇತ್ತು ಎಂದು ಹೇಳಿದ್ದಾರೆ.