ನಟಿ ಮೇಲೆ ಲೈಂಗಿಕ ಕಿರುಕುಳ; ಮಾಧ್ಯಮಗಳ ವಿರುದ್ಧ ಮಲಯಾಳಂ ಚಿತ್ರರಂಗ ಕಿಡಿ!

ನಟಿಯ ಮೇಲಿನ ಲೈಂಗಿಕ ಕಿರುಕುಳ ಪ್ರಕರಣವನ್ನು ವಿಜೃಂಭಿಸಿ ವರದಿ ಮಾಡುವ ಮೂಲಕ ಆಕೆಯ ಭವಿಷ್ಯದ ಮೇಲೆ ಕತ್ತಲೆ ಮೂಡುವಂತೆ ಮಾಡುತ್ತಿವೆ ಎಂದು ಮಲಯಾಳಂ ಚಿತ್ರರಂಗ ಮಾಧ್ಯಮಗಳ ವಿರುದ್ಧ ಕಿಡಿಕಾರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಕೊಚ್ಚಿ: ನಟಿಯ ಮೇಲಿನ ಲೈಂಗಿಕ ಕಿರುಕುಳ ಪ್ರಕರಣವನ್ನು ವಿಜೃಂಭಿಸಿ ವರದಿ ಮಾಡುವ ಮೂಲಕ ಆಕೆಯ ಭವಿಷ್ಯದ ಮೇಲೆ ಕತ್ತಲೆ ಮೂಡುವಂತೆ ಮಾಡುತ್ತಿವೆ ಎಂದು ಮಲಯಾಳಂ ಚಿತ್ರರಂಗ ಮಾಧ್ಯಮಗಳ ವಿರುದ್ಧ  ಕಿಡಿಕಾರಿದೆ.

ನಟಿ ಭಾವನಾ ಅಪಹರಣ ಪ್ರಕರಣವನ್ನು ಮಾಧ್ಯಮಗಳು ವಿಜೃಂಭಿಸಿ ವರದಿ ಮಾಡುತ್ತಿರುವುದನ್ನು ಮಲಯಾಳಂ ಚಿತ್ರರಂಗ ಭಾರಿ ವಿರೋಧ ವ್ಯಕ್ತಪಡಿಸಿದೆ. ಟಿಆರ್ ಪಿ ಮತ್ತು ಪತ್ರಿಕೆಗಳ ಪ್ರಸರಣ ಹೆಚ್ಚಿಸಿಕೊಳ್ಳಲು ಸಾಕಷ್ಚು  ದಾರಿಗಳಿವೆ. ಇಲ್ಲಿ ಓರ್ವ ಹೆಣ್ಣುಮಗಳ ಜೀವನ ಅಡಕವಾಗಿದ್ದು, ನಾವು ಮಾಡುವ ಒಂದು ದುಡುಕಿನಿಂದಾಗಿ ಆಕೆಯ ಭವಿಷ್ಯವೇ ಅಂಧಕಾರಕ್ಕೆ ಹೋಗುತ್ತದೆ. ಹೀಗಾಗಿ ಈ ಬಗ್ಗೆ ಹೆಚ್ಚಿನ ಪ್ರಚಾರ ಬೇಡ ಎಂದು ನಟರು ಮನವಿ  ಮಾಡಿದ್ದಾರೆ.

ಅಂತೆಯೇ ಚಾರ್ಲಿ ಖ್ಯಾತಿ ಸಲ್ಮಾನ್ ದುಲ್ಖರ್ ಕೂಡ ಘಟನೆಯನ್ನು ಖಂಡಿಸಿದ್ದು, ಗೋಮುಖ ಧರಿಸಿ ನಮ್ಮ ನಿಮ್ಮ ಹಿಂದೆ ಅವಿತಿರುವ ಇಂತಹವರಿಗೆ ಕಠಿಣ ಶಿಕ್ಷೆಯಾಗಬೇಕು. ಪ್ರತಿಯೊಬ್ಬರ ಮನೆಯಲ್ಲೂ ಹೆಣ್ಣುಮಕ್ಕಳಿರುತ್ತಾರೆ  ಎಂಬುದನ್ನು ಮರೆಯಬಾರದು ಎಂದು ಅವರು ಹೇಳಿದ್ದಾರೆ. ಇಷ್ಟೇ ಅಲ್ಲದೆ ನಟಿಯರಾದ ಲಕ್ಷ್ಮೀ ರೈ, ಮೀರಾ ನಂದನ್, ನಟ ಟೊವಿನೋ ಥಾಮಸ್, ಭಾಮಾ ಕೂಡ ಘಟನೆ ಕುರಿತಂತೆ ಕಿಡಿಕಾರಿದ್ದಾರೆ.

ಇತ್ತೀಚೆಗೆ ಚಿತ್ರವೊಂದರ ಚಿತ್ರೀಕರಣ ಮುಗಿಸಿ ಎರ್ನಾಕುಲಂ ಮಾರ್ಗವಾಗಿ ಕೊಚ್ಚಿನ್ ಆಗಮಿಸುತ್ತಿದ್ದ ನಟಿ ಭಾವನಾ ಅವರ ಕಾರು ಚಾಲಕ ಮಾರ್ಟಿನ್ ಮಾರ್ಗ ಮಧ್ಯೆ ಅಪಘಾತ ಮಾಡಿದ್ದಾನೆ. ಈ ವೇಳೆ ಏನಾಯಿತು ಎಂದು ನಟಿ  ಕೆಳಗಿಳಿದಾಗ ಹೊರಗೆ ಇದ್ದ ದುಷ್ಕರ್ಮಿಗಳು ಕಾರು ಹತ್ತಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಅಲ್ಲದೆ ಮಾರ್ಗಮಧ್ಯೆ ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾರೆ. ಬಳಿಕ ಸ್ಥಳೀಯ ನಿವಾಸಿಯಾದ ನಿರ್ದೇಶಕರ ನೆರವು ಪಡೆದ ನಟಿ  ಭಾವನಾ ದುಷ್ಕರ್ಮಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ಬೆಳಕಿಗೆ ಬಂದ ದಿನವೇ ಭಾವನಾ ಅವರ ಕಾರು ಚಾಲಕ ಮಾರ್ಟಿನ್ ರನ್ನು ಬಂಧಿಸಿದ್ದ ಪೊಲೀಸರು ಬಳಿಕ ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿ  ಎಂಬಾತನನ್ನು ನಿನ್ನೆ ಬಂಧಿಸಿದ್ದಾರೆ. ಪ್ರಸ್ತುತ ಪ್ರಕರಣ ಸಂಬಂಧ ಒಟ್ಟು ಮೂವರನ್ನು ಬಂಧಿಸಲಾಗಿದ್ದು ಇತರೆ ನಾಲ್ಕು ಮಂದಿ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ.

ನಟಿಯ ಫೋಟೋಗಳ ತೆಗೆದು ಬ್ಲಾಕ್ ಮೇಲ್ ಮಾಡಲು ಮುಂದಾಗಿದ್ದ ದುಷ್ಕರ್ಮಿಗಳು
ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸುನಿ ನಟಿ ಭಾವನಾ ಅವರ ಮಾಜಿ ಕಾರು ಚಾಲಕನಾಗಿದ್ದನಂತೆ. ಈತನೇ ನಟಿಯ ಬೆತ್ತಲೆ ಚಿತ್ರಗಳನ್ನು ತೆಗೆದು ಅವುಗಳನ್ನಿಟ್ಟುಕೊಂಡು ಬೆದರಿಕೆ ಹಾಕುವ ಯೋಜನೆ ರೂಪಿಸಿದ್ದನಂತೆ.  ಇದೇ ಕಾರಣಕ್ಕೆ ನಟಿ ಭಾವನಾ ಅವರ ಅಪಹರಣ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿನ್ನೆ ಬಂಧಿತನಾಗಿದ್ದ ಚಾಲಕ ಮಾರ್ಟಿನ್ ನೀಡಿರುವ ಹೇಳಿಕೆಯಂತೆ, ಸುನಿ ನಟಿಯರ ಅಪಹರಣಕ್ಕೆ ಯೋಜನೆ ರೂಪಿಸಿದ್ದ.  ಅವರನ್ನು ಅಪಹರಣ ಮಾಡಿ ಫೋಟೋಗಳನ್ನು ತೆಗೆದರೆ ಅವರು ಪೊಲೀಸರಿಗೆ ದೂರು ನೀಡುವುದಿಲ್ಲ ಎಂದು ಹೇಳಿದ್ದ. ಹೀಗಾಗಿ ನಿನ್ನೆ ಭಾವನಾ ಅವರನ್ನು ಕರೆತರುವಾಗ ಸುನಿಗೆ ಎಸ್ ಎಂಎಸ್ ಮೂಲಕ ಮಾಹಿತಿ ನೀಡಿದ್ದೆ. ಈ ವೇಳೆ ಅಪಘಾತದ ನಾಟಕವಾಡಿದ್ದೆ.  ಮುಸುಕುಧಾರಿಯಾಗಿ ಬಂದ ಸುನಿ ಕಾರು ಹತ್ತಿದ್ದ ಎಂದು ಮಾರ್ಟಿನ್ ಹೇಳಿಕೆ ನೀಡಿದ್ದಾನೆ.

ಮತ್ತೋರ್ವ ಪ್ರಮುಖ ನಟಿಯ ಅಪಹರಣಕ್ಕೂ ಯೋಜನೆ ರೂಪಿಸಿದ್ದ ದುಷ್ಕರ್ಮಿಗಳು
ಕೇವಲ ನಟಿ ಭಾವನಾ ಅಷ್ಟೇ ಅಲ್ಲೇ ದಕ್ಷಿಣ ಭಾರತದ ಮತ್ತೋರ್ವ ಪ್ರಮುಖ ನಟಿಯ ಅಪಹರಣಕ್ಕೂ ಸುನಿ ಮತ್ತು ಗ್ಯಾಂಗ್ ಯೋಜನೆ ರೂಪಿಸಿದ್ದರಂತೆ. ಹೆಸರು ಹೇಳಲಿಚ್ಛಿಸದ ಪೊಲೀಸರು ನಟಿಗೆ ಈಗಾಗಲೇ ಮದುವೆಯಾಗಿದ್ದು,  ಅವರು ವಿವಿಧ ಚಿತ್ರಗಳಲ್ಲಿ ನಟಿಸಿದ್ದಾರೆ ಎಂದು ಮಾತ್ರ ಹೇಳಿದ್ದಾರೆ.

ಪ್ರಸ್ತುತ ಎರ್ನಾಕುಲಂ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ವ್ಯಾಪಕ ತನಿಖೆ ನಡೆಸುತ್ತಿದ್ದಾರೆ.

ಈ ಬಗ್ಗೆ ಫೇಸ್ ಬುಕ್ ಸಾಮಾಜಿಕ ಜಾಲತಾಣಗಳಲ್ಲಿ ನಟರು ಪ್ರತಿಕ್ರಿಯೆ ನೀಡಿದ್ದು, ಲೈಂಗಿಕ ಕಿರುಕುಳ ಪ್ರಕರಣವನ್ನು ಮಾಧ್ಯಮಗಳಲ್ಲಿ ಸೆನ್ಸೇಷನ್ ಸುದ್ದಿ ಎಂಬಂತೆ ಬಿತ್ತರ ಮಾಡಲಾಗುತ್ತಿದೆ. ವರದಿ ನೀಡುವ ಬರದಲ್ಲಿ  ತಪ್ಪುತಪ್ಪಾಗಿ ಮಾಹಿತಿ ನೀಡಲಾಗುತ್ತಿದೆ. ಇದು ತಮ್ಮ ಮನಸ್ಸಿಗೆ ಅತೀವ ನೋವನ್ನುಂಟು ಮಾಡಿದ್ದು, ಯಾರೇ ಆಗಲಿ ಮತ್ತೊಬ್ಬರ ಸ್ಥಾನದಲ್ಲಿ ನಿಂತು ಆಲೋಚಿಸಿದರೆ ಅವರ ನೋವು ಅರ್ಥವಾಗುತ್ತದೆ. ಮಹಿಳೆ ಮೇಲಿನ  ದೌರ್ಜನ್ಯವನ್ನು ತಾವು ಕಟು ಶಬ್ದಗಳಿಂದ ಖಂಡಿಸುತ್ತಿದ್ದು, ಕೂಡಲೇ ದುಷ್ಕರ್ಮಿಗಳಿಗೆ ಗರಿಷ್ಠ ಪ್ರಮಾಣದ ಶಿಕ್ಷೆ ನೀಡಬೇಕು ಎಂದು ಖ್ಯಾತ ನಟ ಪೃಥ್ವಿರಾಜ್ ಫೇಸ್ ಬುಕ್ ನಲ್ಲಿ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com