ಹೆಬ್ಬುಲಿ ಘರ್ಜನೆಗೆ ಸ್ಯಾಂಡಲ್ವುಡ್ ದಾಖಲೆಗಳು ಧೂಳಿಪಟ!

ಸುದೀಪ್ ನಟನೆಯ ಹೆಬ್ಬುಲಿ ಚಿತ್ರ ರಾಜ್ಯಾದ್ಯಂತ ಭರ್ಜರಿಯಾಗಿ ಮುನ್ನುಗುತ್ತಿದ್ದು ಸ್ಯಾಂಡಲ್ವುಡ್ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಲಿದೆ...
ಸುದೀಪ್
ಸುದೀಪ್
Updated on: 
ಬೆಂಗಳೂರು: ಸುದೀಪ್ ನಟನೆಯ ಹೆಬ್ಬುಲಿ ಚಿತ್ರ ರಾಜ್ಯಾದ್ಯಂತ ಭರ್ಜರಿಯಾಗಿ ಮುನ್ನುಗುತ್ತಿದ್ದು ಸ್ಯಾಂಡಲ್ವುಡ್ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಲಿದೆ. 
ಹೆಬ್ಬುಲಿ ಚಿತ್ರದ ವಿತರಕರಾದ ಜಾಕ್ ಮಂಜು ಅವರ ಲೆಕ್ಕಚಾರದ ಪ್ರಕಾರ ಹೆಬ್ಬಲಿ ಚಿತ್ರ ಮೂರೇ ದಿನಕ್ಕೆ 22ರಿಂದ 24 ಕೋಟಿ ಕಲೆಕ್ಷನ್ ಮಾಡಿದೆಯಂತೆ. ಹೆಬ್ಬುಲಿ ಚಿತ್ರ ದಾಖಲೆ 425ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು. ರಾಜ್ಯದ ಎಲ್ಲಾ ಜಿಲ್ಲೆಯ ಒಟ್ಟು 146 ಚಿತ್ರಮಂದಿರಗಳ ಕಡೆಯಿಂದ 20 ಕೋಟಿಗೂ ಹೆಚ್ಚು ಕಲೆಕ್ಷನ್ ಆಗಿದೆ. ಇನ್ನು ಬೆಂಗಳೂರು ಮತ್ತು ಮೈಸೂರಿನ 28 ಮಲ್ಟಿಪ್ಲೆಕ್ಸ್ ಥಿಯೇಟರ್ ಗಳಲ್ಲಿ ಸುಮಾರು 1 ಕೋಟಿ ಸಂಪಾದನೆ. ಹೊರರಾಜ್ಯದ 30 ಥಿಯೇಟರ್ ಗಳಿಂದ ಅಂದಾಜು ಒಂದು ಕೋಟಿ ಗಳಿಸಿದೆ. 
ಮಹಾಶಿವರಾತ್ರಿ ಪ್ರಯುಕ್ತವಾಗಿ ಫೆಬ್ರವರಿ 23ಕ್ಕೆ ಹೆಬ್ಬುಲಿ ಸಿನಿಮಾ ದೇಶದ್ಯಾಂತ ತೆರೆಕಂಡಿತು. ಈ ಹಿಂದೆ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ-2 ಚಿತ್ರ ಕೂಡ ಕಲೆಕ್ಷನ್ ವಿಚಾರದಲ್ಲಿ ಸಖತ್ ಸದ್ದು ಮಾಡಿತ್ತು. 
ಇನ್ನು ಹೆಬ್ಬುಲಿ ಚಿತ್ರ 100 ಕೋಟಿ ಗಳಿಸಲಿ ಎಂದು ರಕ್ಷಿತ್ ಶೆಟ್ಟಿ ಹಾರೈಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com