89ನೇ ಆಸ್ಕರ್ ಪ್ರಶಸ್ತಿ ಪ್ರಕಟ; "ಮೂನ್ ಲೈಟ್" ಅತ್ಯುತ್ತಮ ಚಿತ್ರ, ಕ್ಯಾಸಿ ಅಫ್ಲೆಕ್ ಅತ್ಯುತ್ತಮ ನಟ

ಸಿನಿಮಾರಂಗದ ಅತ್ಯುನ್ನತ ಆಸ್ಕರ್ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದ್ದು, ಮಿಯಾಮಿ ಸಮುದಾಯದ ಕುರಿತು ಬೆಳಕು ಚೆಲ್ಲುವ "ಮೂನ್ ಲೈಟ್" ಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನ್ಯೂಯಾರ್ಕ್: ಸಿನಿಮಾರಂಗದ ಅತ್ಯುನ್ನತ ಆಸ್ಕರ್ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದ್ದು, ಮಿಯಾಮಿ ಸಮುದಾಯದ ಕುರಿತು ಬೆಳಕು ಚೆಲ್ಲುವ "ಮೂನ್ ಲೈಟ್" ಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.

ಅಂತೆಯೇ "ಮ್ಯಾಂಚೆಸ್ಟರ್ ಬೈ ದಿ ಸೀ" ಚಿತ್ರದ ಅಮೋಘ ಅಭಿನಯಕ್ಕಾಗಿ ನಟ ಕ್ಯಾಸಿ ಅಫ್ಲೆಕ್ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ಲಾಲಾ ಲ್ಯಾಂಡ್ ಚಿತ್ರದಲ್ಲಿ ಅತ್ಯುತ್ತಮ ಅಭಿನಯಕ್ಕಾಗಿ ನಟಿ ಎಮ್ಮಾ ಸ್ಟೋನ್  ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

2017ನೇ ಸಾಲಿನ ಆಸ್ಕರ್ ಪ್ರಶಸ್ತಿ ಪಡೆದ ವಿಜೇತರ ಪಟ್ಟಿ ಇಂತಿದೆ.
ಅತ್ಯುತ್ತಮ ಚಿತ್ರ: ಮೂನ್ ಲೈಟ್ (ನಿರ್ದೇಶನ-ಬ್ಯಾರಿ ಜೆಂಕಿನ್ಸ್)
ಅತ್ಯುತ್ತಮ ನಟ: ಕ್ಯಾಸಿ ಅಫ್ಲೆಕ್ (ಚಿತ್ರ-ಮ್ಯಾಂಚೆಸ್ಟರ್ ಬೈ ದಿ ಸೀ)
ಅತ್ಯುತ್ತಮ ನಟಿ: ಎಮ್ಮಾ ಸ್ಟೋನ್ (ಚಿತ್ರ-ಲಾಲಾ ಲ್ಯಾಂಡ್)
ಅತ್ಯುತ್ತಮ ಫೋಷಕ ನಟ: ಮಹರ್ಶಾಲಾ ಅಲಿ (ಚಿತ್ರ-ಲಾಲಾ ಲ್ಯಾಂಡ್)
ಅತ್ಯುತ್ತಮ ಫೋಷಕ ನಟಿ:ವಿಯಾಲಾ ಡೇವಿಸ್ (ಚಿತ್ರ-ಫೆನ್ಸಸ್)
ಅತ್ಯುತ್ತಮ ಅನಿಮೇಷನ್ ಚಿತ್ರ:ಜೂಟೋಪಿಯಾ (ನಿರ್ದೇಶನ-ಬೈರಾನ್ ಹೊವರ್ಡ್ ಮತ್ತು ರಿಚ್ ಮೂರ್)
ಅತ್ಯುತ್ತಮ ಛಾಯಾಗ್ರಹಣ: ಲೀನಸ್ ಸ್ಯಾಂಡ್ ಗ್ರೆನ್ (ಚಿತ್ರ-ಲಾಲಾ ಲ್ಯಾಂಡ್)
ಅತ್ಯುತ್ತಮ ವಸ್ತ್ರ ವಿನ್ಯಾಸ:ಕಾಲಿನ್ ಅಟ್ವೂಡ್ (ಫೆಂಟಾಸ್ಟಿಕ್ ಬೀಸ್ಟ್ಸ್ ಅಂಡ್ ವೇರ್ ಟು ಫೈನ್ಡ್ ದೆಮ್)
ಅತ್ಯುತ್ತಮ ನಿರ್ದೇಶನ: ಡೇಮಿಯನ್ ಚೇಜಿಲ್ (ಚಿತ್ರ-ಲಾಲಾ ಲ್ಯಾಂಡ್)
ಅತ್ಯುತ್ತಮ ಸಾಕ್ಷ್ಯಚಿತ್ರ: ಒಜೆ: ಮೇಡ್ ಇನ್ ಅಮೆರಿಕ (ನಿರ್ದೇಶನ-ಎಜ್ರಾ ಎಡಲ್ಮನ್)
ಅತ್ಯುತ್ತಮ ಸಾಕ್ಷ್ಯ ಕಿರುಚಿತ್ರ: ದಿ ವೈಟ್ ಹೆಲ್ಮೆಟ್ಸ್ (ನಿರ್ದೇಶನ-ಒರ್ಲಾಂಡೋ ವನ್ ಈನ್ಸಿಡೆಲ್)
ಅತ್ಯುತ್ತಮ ಸಂಕಲನ: ಜಾನ್ ಗಿಲ್ಬರ್ಟ್ (ಚಿತ್ರ-ಹ್ಯಾಕ್ಸಾ ರಿಡ್ಜ್ )
ಅತ್ಯುತ್ತಮ ವಿದೇಶಿ ಭಾಷಾ ಚಿತ್ರ: ದಿ ಸೇಲ್ಸ್ ಮನ್ (ದೇಶ-ಇರಾನ್, ನಿರ್ದೇಶನ-ಅಸ್ಗರ್ ಫರ್ಹಾದಿ)
ಅತ್ಯುತ್ತಮ ಮೇಕಪ್ ಮತ್ತು ಕೇಶವಿನ್ಯಾಸ: ಸ್ಯೂಸೈಡ್ ಸ್ಕ್ವಾಡ್ (ನಿರ್ದೇಶನ-ಡೇವಿಡ್ ಅಯ್ಯರ್)
ಅತ್ಯುತ್ತಮ ಸಂಗೀತ: ಲಾಲಾ ಲ್ಯಾಂಡ್ (ಸಂಗೀತ ನಿರ್ದೇಶನ-ಡೇಮಿಯನ್ ಚಾಜೆಲ್, ಹಾಡು-ಸಿಟಿ ಆಫ್ ಸ್ಟಾರ್ಸ್, ರಚನೆ-ಜಸ್ಟಿನ್ ಹುರ್ವಿಟ್ಜ್, ಬೆಂಜ್ ಪಾಸೆಕ್, ಜಸ್ಟಿನ್ ಪಾಲ್)
ಅತ್ಯುತ್ತಮ ನಿರ್ಮಾಣ ವಿನ್ಯಾಸ: ಡೇವಿಡ್ ವಾಸ್ಕೋ, ಸ್ಯಾಂಡಿ ರೆನಾಲ್ಡ್ಸ್ ವಾಸ್ಕೋ (ಚಿತ್ರ-ಲಾಲಾ ಲ್ಯಾಂಡ್)
ಅತ್ಯುತ್ತಮ ಅನಿಮೇಷನ್ ಕಿರುಚಿತ್ರ:ಪೈಪರ್ (ನಿರ್ದೇಶನ-ಅಲನ್ ಬರಿಲ್ಲಾರೋ)
ಅತ್ಯುತ್ತಮ ಲೈವ್ ಆ್ಯಕ್ಷನ್ ಕಿರುಚಿತ್ರ:ಸಿಂಗ್ (ನಿರ್ದೇಶನ-ಕ್ರಿಸ್ಟೋಫ್ ಡೀಕ್ಸ್)
ಅತ್ಯುತ್ತಮ ಸಂಗೀತ ಸಂಕಲನ: ಅರೈವಲ್
ಅತ್ಯುತ್ತಮ ಧ್ವನಿ ಮಿಶ್ರಣ: ಹ್ಯಾಕ್ಸಾ ರಿಡ್ಜ್
ಅತ್ಯುತ್ತಮ ವಿಷ್ಯುವಲ್ ಎಫೆಕ್ಟ್: ದಿ ಜಂಗಲ್ ಬುಕ್ (ನಿರ್ದೇಶನ-ಜಾನ್ ಫ್ಯಾವ್ರ್ಯೂ)
ಅತ್ಯುತ್ತಮ ಅಳವಡಿತ ಚಿತ್ರಕಥೆ: ಮೂನ್ ಲೈಟ್
ಅತ್ಯುತ್ತಮ ಮೂಲ ಚಿತ್ರಕಥೆ: ಮ್ಯಾಂಚೆಸ್ಟರ್ ಬೈ ದಿ ಸೀ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com