ಅತ್ಯುತ್ತಮ ವಿಷ್ಯುವಲ್ ಎಫೆಕ್ಟ್ ಗಾಗಿ "ದಿ ಜಂಗಲ್ ಬುಕ್" ಗೆ ಆಸ್ಕರ್!

ಸಿನಿಮಾರಂಗದ ಅತ್ಯುನ್ನತ ಪ್ರಶಸ್ತಿ ಆಸ್ಕರ್ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದ್ದು, "ದಿ ಜಂಗಲ್ ಬುಕ್" ಚಿತ್ರಕ್ಕೆ ಅತ್ಯುತ್ತಮ ವಿಶ್ಯುವಲ್ ಎಫೆಕ್ಟ್ ವಿಭಾಗದ ಆಸ್ಕರ್ ಪ್ರಶಸ್ತಿ ಲಭಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನ್ಯೂಯಾರ್ಕ್: ಸಿನಿಮಾರಂಗದ ಅತ್ಯುನ್ನತ ಪ್ರಶಸ್ತಿ ಆಸ್ಕರ್ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದ್ದು, "ದಿ ಜಂಗಲ್ ಬುಕ್" ಚಿತ್ರಕ್ಕೆ ಅತ್ಯುತ್ತಮ ವಿಶ್ಯುವಲ್ ಎಫೆಕ್ಟ್ ವಿಭಾಗದ ಆಸ್ಕರ್ ಪ್ರಶಸ್ತಿ ಲಭಿಸಿದೆ.

2016 ಏಪ್ರಿಲ್ 4ರಂದು ತೆರೆಕಂಡ ದಿ ಜಂಗಲ್ ಬುಕ್ ಚಿತ್ರ ಭಾರತ ಸೇರಿದಂತೆ ವಿಶ್ವಾದ್ಯಂತ ತೆರೆಕಂಡು ಅದ್ಭುತ ಪ್ರದರ್ಶನ ಕಂಡಿತ್ತು. ಚಿತ್ರದಲ್ಲಿನ ಗ್ರಾಫಿಕ್ಸ್ ಮತ್ತು ವಿಷ್ಯುವಲ್ ಎಫೆಕ್ಟ್ ಗಳೇ ಚಿತ್ರದ ಜೀವಾಳವಾಗಿತ್ತು. ಫ್ಯಾಂಟಸಿ  ಮತ್ತು ಸಾಹಸ ಮಯ ಚಿತ್ರವಾಗಿದ್ದ ಜಂಗಲ್ ಬುಕ್ ಅನ್ನು ಖ್ಯಾತ ಹಾಲಿವುಡ್ ನಿರ್ದೇಶಕ ಜಾನ್ ಫ್ಯಾವ್ರ್ಯೂ ಅವರು ನಿರ್ದೇಶಿಸಿದ್ದರು. ಚಿತ್ರಕ್ಕೆ ವಾಲ್ಟ್ ಡಿಸ್ನಿ ಸಂಸ್ಥೆ ಬಂಡವಾಳ ಹೂಡಿತ್ತು. ಇಡೀ ಚಿತ್ರದ ಶೇಕಡ99 ರಷ್ಟು  ದೃಶ್ಯಾವಳಿಗಳು ಗ್ರಾಫಿಕ್ಸ್ ಮತ್ತು ವಿಷ್ಯುವಲ್ ಎಫೆಕ್ಟ್ಸ್  ನಿಂದ ಕೂಡಿದ್ದು, ಹಾಲಿವುಡ್ ಖ್ಯಾತ ವಿಷ್ಯುವಲ್ ಎಫೆಕ್ಟ್ಸ್ ಸಂಸ್ಥೆ  ಎಂಪಿಸಿ (Moving Picture Company) ಚಿತ್ರಕ್ಕೆ ವಿಷ್ಯುವಲ್ ಎಫೆಕ್ಟ್ಸ್ ಒದಗಿಸಿತ್ತು.

ಎಂಪಿಸಿ ಸಂಸ್ಥೆಯ ರಾಬರ್ಟ್ ಲಿಗಾಟೋ, ಆ್ಯಡಂ ವಾಲ್ಡೇಜ್. ಆಂಡ್ರ್ಯೂ ಆರ್ ಜೋನ್ಸ್, ಡ್ಯಾನ್ ಲೆಮ್ಮನ್ ಅವರಿಗೆ ಆಸ್ಕರ್ ಪ್ರಶಸ್ತಿ ಒಲಿದು ಬಂದಿದ್ದು, ಜೋಲ್ ಮ್ಯಾಕ್ ಡೊನಾಲ್ಡ್ (ನಿರ್ವಾಹಕ), ಲಾರಾ ಮುರೋ ಜವಲೊಯಸ್,  ಪೀರಿನಿ ರೊಕ್ಕೊ ಅವರ ತಂಡ ಇಡೀ ಚಿತ್ರಕ್ಕೆ ವಿಷ್ಯುವಲ್ ಎಫೆಕ್ಟ್ ಒದಗಿಸಿತ್ತು. ಇದೀಗ ಈ ತಂಡದ ಪರಿಶ್ರಮಕ್ಕೆ ಫಲದೊರೆತಿದ್ದು, ವಿಷ್ಯುವಲ್ ಎಫೆಕ್ಟ್ ನಿಂದಾಗಿಯೇ ಚಿತ್ರ ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ಪಡೆದಿದೆ.

ಉಳಿದಂತೆ ಅತ್ಯುತ್ತಮ ಅನಿಮೇಷನ್ ಚಿತ್ರ ವಿಭಾಗದಲ್ಲಿ ಜೂಟೋಪಿಯಾ ಚಿತ್ರ ಆಸ್ಕರ್ ಪ್ರಶಸ್ತಿಗೆ ಭಾನವಾಗಿದ್ದು, 2016ರಲ್ಲಿ ತೆರಕಂಡಿದ್ದ ಚಿತ್ರವನ್ನು ಬೈರಾನ್ ಹೊವರ್ಡ್ ಮತ್ತು ರಿಚ್ ಮೂರ್ ನಿರ್ದೇಶಿಸಿದ್ದರು. ಇನ್ನು ಅತ್ಯುತ್ತಮ  ಸಾಕ್ಷ್ಯಚಿತ್ರ ವಿಭಾಗದಲ್ಲಿ ವೈಟ್ ಹೆಲ್ಮೆಟ್ ಚಿತ್ರ ಪ್ರಶಸ್ತಿಗೆ ಭಾಜನವಾಗಿದ್ದು, ಅತ್ಯುತ್ತಮ ಕಿರುಚಿತ್ರ ವಿಭಾಗದಲ್ಲಿ "ಪೈಪರ್" ಚಿತ್ರ ಪ್ರಶಸ್ತಿ ಬಾಚಿದೆ. ಅಂತೆಯೇ ಅತ್ಯುತ್ತಮ ಎಡಿಟಿಂಗ್ ವಿಭಾಗದ ಪ್ರಶಸ್ತಿ ಹ್ಯಾಕ್ಸಾ ರಿಡ್ಜ್ ಚಿತ್ರಕ್ಕೆ  ಸಂದಿದ್ದು, ಚಿತ್ರಕ್ಕೆ ಅತ್ಯುತ್ತಮ ಎಡಿಟಿಂಗ್ ಮಾಡಿದ್ದ ಜಾನ್ ಗಿಲ್ಬರ್ಟ್ ಅವರಿಗೆ ಪ್ರಶಸ್ತಿ ಒಲಿದು ಬಂದಿದೆ.

And the Oscar goes to… pic.twitter.com/ToBYTK4E2H

— The Academy (@TheAcademy) February 27, 2017

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com