ಚಲನಚಿತ್ರ ಅಕಾಡೆಮಿ ಪ್ರಶಸ್ತಿ ತಿರಸ್ಕರಿಸಿದ ನಿರ್ದೇಶಕ ಕೆವಿ ರಾಜು

2015-16ನೇ ಸಾಲಿನ ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಪ್ರಕಟವಾದ ಬೆನ್ನಲ್ಲೇ ಪ್ರಶಸ್ತಿಗೆ ಆಯ್ಕೆಯಾಗಿದ್ದ ಖ್ಯಾತ ಹಿರಿಯ ನಿರ್ದೇಶಕ ಕೆವಿ ರಾಜು ಅವರು ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: 2015-16ನೇ ಸಾಲಿನ ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಪ್ರಕಟವಾದ ಬೆನ್ನಲ್ಲೇ ಪ್ರಶಸ್ತಿಗೆ ಆಯ್ಕೆಯಾಗಿದ್ದ ಖ್ಯಾತ ಹಿರಿಯ ನಿರ್ದೇಶಕ ಕೆವಿ ರಾಜು ಅವರು ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಕೆಲ ಪತ್ರಿಕೆಗಳು ವರದಿ ಮಾಡಿದ್ದು, ವರದಿಯಲ್ಲಿ ಪ್ರಶಸ್ತಿ ಪಟ್ಟಿ ಪ್ರಕಟವಾದ ಬೆನ್ನಲ್ಲೇ ಕರ್ನಾಟಕ ಚನಲಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ಅವರಿಗೆ ವಾಟ್ಸಪ್ ಮೂಲಕ ರಾಜು ಅವರು ಸಂದೇಶ  ರವಾನಿಸಿದ್ದಾರೆ. ಅಕಾಡೆಮಿ ವತಿಯಿಂದ ನೀಡುತ್ತಿರುವ ಪ್ರಶಸ್ತಿ ಸ್ವೀಕರಿಸಲು ತಮಗೆ ಮನಸ್ಸಿಲ್ಲ. ನನ್ನ ಸಿನಿಮಾ ಉದ್ದೇಶವೇನಿದ್ದರೂ ಮನರಂಜನೆಯೇ ಹೊರತು..ಪ್ರಶಸ್ತಿಯಲ್ಲ. ಜನರನ್ನು ಮನರಂಜಿಸಲು ನಾನು ಹಣ  ಪಡೆಯುತ್ತಿದ್ದೇನೆ. ಹೀಗಾಗಿ ಪ್ರಶಸ್ತಿ ಸ್ವೀಕರಿಸಲು ನಾನು ಅರ್ಹನಲ್ಲ.ನಾನೆಂದಿಗೂ ಪ್ರಶಸ್ತಿಗಾಗಿ ಚಿತ್ರ ಮಾಡಿದವನಲ್ಲ. ಇದಕ್ಕಾಗಿ ದೊಡ್ಡ ದಂಡೇ ಇದೆ. ಅದು ಗೊತ್ತಿದ್ದೋ ಏನೋ ಇಷ್ಟು ವರ್ಷ ನನ್ನ ಯಾವ ಸಿನಿಮಾಗಳಿಗೂ ಯಾರೂ ಪ್ರಶಸ್ತಿ ನೀಡಿರಲಿಲ್ಲ ಎಂದು ಸಂದೇಶ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.

ನಿನ್ನೆಯಷ್ಟೇ ಕರ್ನಾಟಕ ಚಲನಚಿತ್ರ ಅಕಾಡೆಮಿ 2015-16ನೇ ಸಾಲಿನ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಪ್ರಕಟಿಸಿತ್ತು. ಹಿರಿಯ ನಟರಾದ ದೊಡ್ಡಣ್ಣ, ಉಮೇಶ್ ಮತ್ತು ಶ್ರೀನಿವಾಸ ಮೂರ್ತಿ ಸೇರಿದಂತೆ ಇತರೆ 13 ಮಂದಿ ಗಣ್ಯರನ್ನು  ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿತ್ತು. ಈ ಪೈಕಿ ಹಿರಿಯ ನಿರ್ದೇಶಕ ಕೆವಿ ರಾಜು ಅವರು ಕೂಡ ಸೇರಿದ್ದು, ಅವರಿಗೆ ಬಿಅರ್ ಪಂತುಲು ಪ್ರಶಸ್ತಿ ಘೋಷಣೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com