ಇದು ನನಗೆ ಮರು ಜನ್ಮ; ನಾಯಿ ದಾಳಿ ಘಟನೆಯ ಮಾಹಿತಿ ಬಿಚ್ಚಿಟ್ಟ ನಟಿ ಪಾರುಲ್ ಯಾದವ್

ಬೀದಿನಾಯಿಗಳ ದಾಳಿಗೊಳಗಾಗಿ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟಿ ನಟಿ ಪಾರುಲ್ ಯಾದವ್ ...
ಪಾರುಲ್ ಯಾದವ್
ಪಾರುಲ್ ಯಾದವ್
Updated on: 

ಮುಂಬಯಿ: ಬೀದಿನಾಯಿಗಳ ದಾಳಿಗೊಳಗಾಗಿ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟಿ ನಟಿ ಪಾರುಲ್ ಯಾದವ್ ಚೇತರಿಸಿಕೊಳ್ಳುತ್ತಿದ್ದಾರೆ.

ಪೂರ್ಣ ವಿಶ್ರಾಂತಿಯಲ್ಲಿರುವಂತೆ ವೈದ್ಯರು ಸೂಚಿಸಿದ್ದಾರೆ. ಪಾರುಲ್ ತಲೆ, ಕೈ ಮತ್ತು ಕಾಲುಗಳಿಗೆ ಹಾಕಿದ್ದ ಸ್ಟಿಚ್ ತೆಗೆದಿದ್ದಾರೆ.

ಈ ಸಂಬಂಧ ಸಿಟಿ ಎಕ್ಸ್ ಪ್ರೆಸ್ ಜೊತೆ, ಮಾತನಾಡಿದ ಪಾರುಲ್ ಯಾದವ್, ಇದೊಂದು ಆಘಾತಕಾರಿ ಘಟನೆಯಾಗಿದೆ. ಇದು ನನ್ನ ಮರುಹುಟ್ಟು ಎಂದು ನಂಬಿದ್ದೇನೆ ಎಂದು ಪಾರುಲ್ ಘಟನೆ ನೆನಪಿಸಿಕೊಂಡಿದ್ದಾರೆ.

ನನ್ನ ಜೀವನದಲ್ಲಿ ಇದೊಂದು ಕೆಟ್ಟಸಮಯ. ನಾನು ನನ್ನ ನಾಯಿ ಜತೆ ಬೆಳಗಿನ ಜಾವ ವಾಕಿಂಗ್‌ಗೆ ತೆರಳಿದ್ದೆ. ಆ ವೇಳೆ ಆರು ಬೀದಿನಾಯಿಗಳು ಅಟ್ಯಾಕ್‌ ಮಾಡಿದವು. ಕೆಳಗೆ ಬಿದ್ದ ನನ್ನ ಮೇಲೆ ಕೇವಲ 7 ಸೆಕೆಂಡ್‌ಗಳಲ್ಲಿ ಕೈಕಾಲು ಮತ್ತು ತಲೆಗೆ ಕಚ್ಚಿ ಗಾಯಗೊಳಿಸಿದವು. ಆಳವಾಗಿ ಗಾಯಗಳಾಗಿದ್ದರಿಂದ ಕೈ, ಕಾಲಿಗೆ ಪ್ಲಾಸ್ಟಿಕ್‌ ಸರ್ಜರಿ ಮಾಡಲಾಗಿದೆ' ಎಂದರು ಪಾರುಲ್‌. ಬೀದಿ ನಾಯಿಗಳು ನಮ್ಮ ಕಡೆಗೆ ಓಡಿ ಬಂದಾಗ, ನನ್ನ ಸಾಕು ನಾಯಿ ಗಾಬರಿಯಿಂದ ಮೇಲಕ್ಕೆ ಎಗರಿತು. ನಾನು ಕೂಡಲೇ ನಾಯಿಗಳ ಬಾಯಿಗೆ ಸಿಗದಂತೆ ಅದಕ್ಕೆ ಕಟ್ಟಿದ್ದ ಚೈನನ್ನು ಮೇಲೆತ್ತಿದೆ.  ಇದರಿಂದ ಕೋಪಗೊಂಡ ನಾಯಿಗಳು ನನ್ನ ಮೇಲೆ ಮುಗಿಬಿದ್ದವು. ಏನಾಯಿತು ಅಂತ ಯೋಚಿಸುವಷ್ಟರಲ್ಲಿ ಕಚ್ಚಿಬಿಟ್ಟಿದ್ದವು' ಎಂದು ಹೇಳಿದರು.

ವೈದ್ಯರು ತಲೆಗೆ 8 ಹೊಲಿಗೆ ಹಾಕಿದ್ದಾರೆ. ಕೈ ಕಾಲಿಗೂ ಹೊಲಿಗೆ ಹಾಕಲಾಗಿದೆ. ಕಾಲಿನಲ್ಲಿ ಮೂರು ಇಂಚು ಡೀಪ್‌ ಆಗಿ ಕಚ್ಚಿದ್ದವು. ಡಾಕ್ಟರ್‌ ತಲೆ ಕೂದಲನ್ನು ತೆಗೆಯದೆ ಹಾಗೇ ಸ್ಟಿಚ್‌ ಮಾಡಿದ್ದಾರೆ. ಗಾಯದ ಕಲೆಗಳು ಕಾಣದೇ ಇರಲೆಂದು ಪ್ಲಾಸ್ಟಿಕ್‌ ಸರ್ಜರಿ ಮಾಡಲಾಗಿದೆ.

ಹೌಸ್ ಕೀಪಿಂಗ್ ಹುಡುಗ ಹಾಗೂ ಬಿಲ್ಡಿಂಗ್ ನ ವಾಚ್ ಮ್ಯಾನ್ ಆ ವೇಳೆ ನನ್ನನ್ನು ಕಾಪಾಡಿದರು, ಆದರೆ ಹೆಚ್ಚಿನ ಪ್ರಮಾಣದಲ್ಲಿ  ರಕ್ತಸ್ರಾವವಾಗಿತ್ತು. ಏನು ಮಾಡಬೇಕೆಂದು ಅವರಿಗೆ ಗೊತ್ತಾಗಲಿಲ್ಲ, ಅವರು ತುಂಬಾ ಭಯಗೊಂಡಿದ್ದರು. ಕೂಡಲೇ ನನ್ನ ತಾಯಿ ಹಾಗೂ ಸಹೋದರಿಯನ್ನು ಕರೆದರು. ಆನಂತರ ನನ್ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ನನಗೆ ಇನ್ ಫೆಕ್ಷನ್ ಆಗಬಹುದೆಂಬ ಭಯದಿಂದ ಲಕ್ಷಾತಂರ ರುಪಾಯಿಯ ಇಂಜೆಕ್ಷನ್ ನೀಡಲಾಗಿದೆ ಎಂದು ಹೇಳಿದ್ದಾರೆ.

ಮುಂಬಯಿ ಮಹಾನಗರ ಪಾಲಿಕೆ ಎರಡು ನಾಯಿಗಳನ್ನು ಕರೆದೊಯ್ದಿದ್ದಾರೆ . ಉಳಿದ ಮೂರು ನಾಯಿಗಳು ಅಲ್ಲಿಯೇ ಸುತ್ತಾಡುತ್ತಿವೆ. ನಾನು ಬೀದಿನಾಯಿಗಳ ವಿರೋಧಿಯಲ್ಲ, ಯಾಕೆಂದರೆ ಅವು ಪ್ರಾಣಿಗಳು. ಅವುಗಳ ಮೇಲೆ ಕೋಪ ಮಾಡಿಕೊಳ್ಳಲು ಕಾರಣವಿಲ್ಲ, ಆದರೆ ಬಿಎಂಸಿ ಅವುಗಳಿಗಾಗಿ ಏನು ಮಾಡಿಲ್ಲ, ನಾವು ಅವುಗಳನ್ನು ಕೇರ್ ಮಾಡಿದರೇ ನಿಜವಾಗಿಯೂ ಅವುಗಳ ಆವೇಷ ಕಡಿಮೆಯಾಗುತ್ತದೆ ಎಂದು ಪಾರುಲ್ ಹೇಳಿದ್ದಾರೆ.

ಮುಂಬಯಿ ಪಾಲಿಕೆ ಪ್ರಾಣಿ ಜನನ ನಿಯಂತ್ರಣ ಕಾಯ್ದೆಯನ್ನು ಅನುಷ್ಠಾನಗೊಳಿಸಲು ಯೋಜನೆ ಕೈಗೊಳ್ಳಬೇಕು. ದೆಹಲಿಯಲ್ಲಿ 0 ಲಕ್ಷ ಬೀದಿನಾಯಿಗಳಿವೆ ಎಂದು ತಿಳಿದು ನನಗೆ ಆಘಾತವಾಯಿತು. ಮುಂಬಯಿ ಭಯೋತ್ಪಾದಕ ದಾಳಿಯಲ್ಲಿ ಸತ್ತವರಿಗಿಂತ ಹೆಚ್ಚಿ ಸಂಖ್ಯೆಯ ಜನ ನಾಯಿಗೆ ಬಲಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com