ರಜನಿಕಾಂತ್
ರಜನಿಕಾಂತ್

ಸೂಪರ್ ಸ್ಟಾರ್ ರಜನಿಕಾಂತ್‌ರ ಮೊದಲ ಸೆಲ್ಫಿ ವಿಡಿಯೋ ವೈರಲ್

ದಕ್ಷಿಣ ಭಾರತ ಸೂಪರ್ ಸ್ಟಾರ್ ರಜನಿಕಾಂತ್ ಏನೇ ಮಾಡಿದರು ಅಭಿಮಾನಿಗಳು ವಿಶೇಷವಾಗಿ ತೆಗೆದುಕೊಳ್ಳುತ್ತಾರೆ. ಅಂತೆ ರಜನಿ ಅವರು ಇದೇ ಮೊದಲ ಬಾರಿಗೆ ಸೆಲ್ಫಿ...
Published on
ದಕ್ಷಿಣ ಭಾರತ ಸೂಪರ್ ಸ್ಟಾರ್ ರಜನಿಕಾಂತ್ ಏನೇ ಮಾಡಿದರು ಅಭಿಮಾನಿಗಳು ವಿಶೇಷವಾಗಿ ತೆಗೆದುಕೊಳ್ಳುತ್ತಾರೆ. ಅಂತೆ ರಜನಿ ಅವರು ಇದೇ ಮೊದಲ ಬಾರಿಗೆ ಸೆಲ್ಫಿ ವಿಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣಕ್ಕೆ ಬಿಡುಗಡೆ ಮಾಡಿದ್ದು ವಿಡಿಯೋ ವೈರಲ್ ಆಗಿದೆ. 
ರಜನಿಕಾಂತ್ ಅವರಿಗೆ 66 ವರ್ಷ ವಯಸ್ಸಾಗಿದ್ದು ಸದ್ಯ ಸಾಮಾನ್ಯ ವೈದ್ಯಕೀಯ ತಪಾಸಣೆ ಅಮೆರಿಕಕ್ಕೆ ತೆರಳಿದ್ದಾರೆ. ಆದರೆ ರಜನಿ ಅವರ ಆರೋಗ್ಯ ಹದಗಟ್ಟಿದೆ ಎಂಬ ವದಂತಿಗಳು ಹರಡಿದ್ದರಿಂದ ರಜನಿಕಾಂತ್ ಅವರು ಫೆರಾರಿ ಕಾರಿನಲ್ಲಿ ಪ್ರಯಾಣಿಸುತ್ತಿರುವ ಸೆಲ್ಫಿ ವಿಡಿಯೋವೊಂದನ್ನು ಮಾಡಿ ಸಾಮಾಜಿತ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದಾರೆ. 
ಸೆಲ್ಫಿ ವಿಡಿಯೋ ಮಾಡುವ ಸಂದರ್ಭದಲ್ಲಿ ರಜನಿಕಾಂತ್ ಅವರು ತಮ್ಮ ಪಕ್ಕದಲ್ಲಿದ್ದ ಕಾರಿನ ಡ್ರೈವರ್ ಅನ್ನು ರೆಡ್ ಬಟನ್ ಒತ್ತಬೇಕೆ ಎಂದು ಕೇಳುತ್ತಾರೆ ಅದಕ್ಕೆ ಡ್ರೈವರ್ ಏಸ್ ಅಂದಾಗ ರಜನಿ ಹಾಗೆ ಮಾಡುತ್ತಾರೆ. ಸೆಲ್ಫಿ ವಿಡಿಯೋ ರೆಕಾರ್ಡ್ ಆಗುವಾಗ ಅವರು ರಜನಿಕಾಂತ್ ಸಾಮಾಜಿಕ ಮಾಧ್ಯಮದಲ್ಲೂ ಅಲ್ಲ, ಸಂತೋಷ ಪಡುವಲ್ಲಿಯೂ ವಿಫಲರಾಗುವುದಿಲ್ಲ ಎಂದು ಹೇಳಿರುವುದು ನಗೆಗಡಲಲ್ಲಿ ತೇಳಿಸುತ್ತದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com