ಉಪ್ಪಿಯ 'ಹೋಮ್ ಮಿನಿಸ್ಟರ್' ಗೆ ಪ್ರಿಯಾಂಕಾ ಕ್ಲಾಪಿಂಗ್

ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ ಮುಂದಿನ ಸಿನಿಮಾ ಹೋಮ್ ಮಿನಿಸ್ಟರ್ ಗೆ ರಾಜರಾಜೇಶ್ವರಿ ನಗರದ ದೇವಾಲಯದಲ್ಲಿ ...
ಹೋಮ್ ಮಿನಿಸ್ಟರ್ ಸಿನಿಮಾ ಮೂಹೂರ್ಥ ಕಾರ್ಯಕ್ರಮ
ಹೋಮ್ ಮಿನಿಸ್ಟರ್ ಸಿನಿಮಾ ಮೂಹೂರ್ಥ ಕಾರ್ಯಕ್ರಮ
ಬೆಂಗಳೂರು: ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ ಮುಂದಿನ ಸಿನಿಮಾ ಹೋಮ್ ಮಿನಿಸ್ಟರ್ ಗೆ ರಾಜರಾಜೇಶ್ವರಿ ನಗರದ ದೇವಾಲಯದಲ್ಲಿ ಸರಳ ಮೂಹೂರ್ಥ ನಡೆಯಿತು.
ಉಪೇಂದ್ರ ಪತ್ನಿ ಪ್ರಿಯಾಂಕಾ ಸಿನಿಮಾಗಾಗಿ ಕ್ಲಾಪ್ ಮಾಡಿದರು. ಸಿನಿಮಾ ಒಂದು ಕೌಟುಂಬಿಕ ಪ್ರಧಾನ ಕಥೆಯಾಗಿದ್ದು, ನಾಗಾರ್ಜುನ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ಇದು ಉಪೇಂದ್ರ ಮತ್ತು ನಾಗಾರ್ಜುನ ಜೋಡಿಯ ಮೂರನೇ ಸಿನಿಮಾವಾಗಿದ್ದು, ತಮಿಳು ನಿರ್ದೇಶಕರು ಚಿತ್ರ ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ. ಇನ್ನೂ ನಾಯಕಿ ನಟಿ ಯಾರು ಎಂಬದು ಅಂತಿಮವಾಗಿಲ್ಲ, ಚಿತ್ರತಂಡ ಸಹ ಕಲಾವಿದರಿಗಾಗಿ ಹುಡುಕಾಟ ನಡೆಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com