ನಾನು ಸಾಯುವವರೆಗೂ ಅವರ ಹೆಸರು ಜೊತೆಯಲ್ಲಿಯೇ ಇರುತ್ತದೆ: ರಾಧಿಕಾ ಕುಮಾರಸ್ವಾಮಿ

ನಟಿ ರಾಧಿಕಾ ಮತ್ತು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರ ನಡುವಿನ ಸಂಬಂಧ ಹಳಸಿದೆ ಎಂಬ ವಿಷಯ ಮಾಧ್ಯಮಗಳಲ್ಲಿ...
ರಾಧಿಕಾ ಕುಮಾರಸ್ವಾಮಿ
ರಾಧಿಕಾ ಕುಮಾರಸ್ವಾಮಿ
Updated on: 
ಬೆಂಗಳೂರು:  ನಟಿ ರಾಧಿಕಾ ಮತ್ತು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರ ನಡುವಿನ ಸಂಬಂಧ ಹಳಸಿದೆ ಎಂಬ ವಿಷಯ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಸಂಬಂಧ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿರುವ ರಾಧಿಕಾ ಅಂತೆ ಕಂತೆಗಳಿಗೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ.
ನನ್ನ ಹೆಸರು ರಾಧಿಕಾ ಅಲ್ಲ, ರಾಧಿಕಾ ಕುಮಾರಸ್ವಾಮಿ, ನಾನು ಸಾಯುವವರೆಗೂ ಈ ಹೆಸರು ಬದಲಾಗುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ,
ಕಾಂಟ್ರ್ಯಾಕ್ಟ್ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಯಾವತ್ತಿಗೂ ರಾಧಿಕಾ ಕುಮಾರ ಸ್ವಾಮಿಯೇ, ನನ್ನ ಮತ್ತು ಅವರ ಕುರಿತಾಗಿ ನೂರಾರು ಸುದ್ದಿಗಳು ಗಾಸಿಪ್ ಗಳು ಹರಡುತ್ತಲೇ ಇರುತ್ತವೆ ಅದಕ್ಕೆ ನಾನೇನು ಮಾಡಲಿ ಎಂದು ರಾಧಿಕಾ ಮರು ಪ್ರಶ್ನಿಸಿದರು.
ನನ್ನು ಮತ್ತು ಕುಮಾರ ಸ್ವಾಮಿ ಅವರ ನಡುವೆ ಯಾವುದೇ ಬಿರುಕು- ಭಿನ್ನಾಭಿಪ್ರಾಯ ಮೂಡಿಲ್ಲ, ನಾನು ಬೆಂಗಳೂರು ಬಿಟ್ಟು ಎಲ್ಲಿಯೂ ಹೋಗಿಲ್ಲ, ಡಾಲರ್ಸ್ ಕಾಲೊನಿಯ ನಿವಾಸದಲ್ಲೇ ಇದ್ದೇನೆ, ನನಗೆ ಮಗಳು ಮುಖ್ಯ ಹೀಗಾಗಿ ಸಿನಿಮಾ ರಂಗದಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com