ಮುಂಬಯಿ: ಬಾಲಿವುಡ್ ನಟಿ ಕೃತಿಕಾ ಚೌಧರಿ ಅಂಧೇರಿ ಪಶ್ಚಿಮದಲ್ಲಿನ ತಮ್ಮ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. 30 ವರ್ಷದ ಅಂಧೇರಿ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದೆ.
ಪೊಲೀಸರು ಇದೊಂದು ಕೊಲೆಯಾಗಿರಬಹುದು ಎಂದು ಶಂಕಿಸಿದ್ದಾರೆ. ಸೋಮವಾರ ಬೆಳಗ್ಗೆ 3.45ರ ಸುಮಾರಿಗೆ ಅಕ್ಕ ಪಕ್ಕದ ಮನೆಯವರು ಮನೆಯಿಂದ ಹೊರ ಹೊಮ್ಮಿದ ಶವ ವಾಸನೆ ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಧಾವಿಸಿ ಮನೆ ಬಾಗಿಲು ಮುರಿದು ನೋಡಿದಾಗ ಕೃತಿಕಾ ಶವ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ. 3-4 ದಿನಗಳ ಹಿಂದೆ ಕೃತಿಕಾ ಸಾವನ್ನಪ್ಪಿರುವುದು ತಿಳಿದು ಬಂದಿದೆ.
ಮೊದಲಿಗೆ ಅಂಬೋಲಿ ಪೊಲೀಸರು ಆಕಸ್ಮಿಕ ಸಾವು ಅಂತಾ ಪ್ರಕರಣ ದಾಖಲಿಸಿದ್ದರು. ತನಿಖೆಯಲ್ಲಿ ಹಲವಾರು ಶಂಕೆ ವ್ಯಕ್ತವಾಗಿರುವುದರಿಂದ ಇದೊಂದು ಕೊಲೆ ಎಂದು ಪೊಲೀಸರು ಶಂಕಿಸಿದ್ದಾರೆ.
ಹರಿದ್ವಾರ ಮೂಲದ ಕೃತಿಕಾ ಚೌಧರಿ ನಟಿ ಆಗ ಬಯಸಿ ಮುಂಬೈನಲ್ಲಿ ನೆಲೆಸಿದ್ದರು. ಕೆಲ ಹಿಂದಿ ಸಿನಿಮಾ ಸೀರಿಯಲ್‌ಗಳಲ್ಲಿ ನಟಿಸಿ ಚಿತ್ರರಂಗದಲ್ಲಿ ಬೆಳೆಯಲು ಯತ್ನಿಸಿದ್ದರು.