ವಿನಯ್ ರಾಜ್ ಕುಮಾರ್ ಮುಂದಿನ ಸಿನಿಮಾಗೆ ಮೂವರು ನಾಯಕಿಯರು?

ನೀಲ್ ತಾಲ್ಯ ನಿರ್ದೇಶನ ಹೊಸ ಸಿನಿಮಾದಲ್ಲಿ ನಟ ವಿನಯ್ ರಾಜ್ ಕುಮಾರ್ ಜೊತೆ ಮೂವರು ನಾಯಕಿಯರು ಅಭಿನಯಿಸಲಿದ್ದಾರೆ. ...
ವಿನಯ್ ರಾಜ್
ವಿನಯ್ ರಾಜ್
ಬೆಂಗಳೂರು: ಸುನೀಲ್ ತಾಲ್ಯ ನಿರ್ದೇಶನ ಹೊಸ ಸಿನಿಮಾದಲ್ಲಿ  ನಟ ವಿನಯ್ ರಾಜ್ ಕುಮಾರ್ ಜೊತೆ ಮೂವರು ನಾಯಕಿಯರು ಅಭಿನಯಿಸಲಿದ್ದಾರೆ. ಇನ್ನೂ ಹೆಸರಿಡದ ಈ ಸಿನಿಮಾಗೆ ಆಷಾಢ ಆರಂಭಕ್ಕೂ ವಿನಯ್ ರಾಜ್ ಮನೆಯಲ್ಲಿ ಸಣ್ಣ ಪೂಜೆ ನಡೆಸಿ ಹೊಸ ಪ್ರಾಜೆಕ್ಟ್ ಗೆ ಚಾಲನೆ ನೀಡಲಾಗಿದೆ.
ಕೊನೆಯ ಹಂತದ ಸಿದ್ಧತೆಗಳೊಂದಿಗೆ ವಿನಯ್ ರಾಜ್ ಫೋಟೋ ಶೂಟ್ ನಡೆಸಲಾಗಿದೆ, ಈ ಸಿನಿಮಾದಲ್ಲಿ ವಿನಯ್ ಗೆ ಮೂವರು ನಾಯಕಿಯರಿದ್ದಾರೆ. ಸಿನಿಮಾ ತಂಡ ಪ್ರತಿಭಾವಂತ ನಾಯಕಿಯರಿಗಾಗಿ ಹುಡುಕಾಟ ನಡೆಸುತ್ತಿದೆ.
ಆಯ್ಕೆ ಪ್ರಕ್ರಿಯೆ ಅಂತಿಮಘಟ್ಟ ತಲುಪಿದ್ದು, ಶೀಘ್ರದಲ್ಲೇ ನಾಯಕಿಯರ ಹೆಸರನ್ನು ಪ್ರಕಟಿಸಲಾಗುವುದು ಎಂದು ಮೂವಗಳು ತಿಳಿಸಿವೆ. ವಿನಯ್ ಎರಡು ಸಿನಿಮಾಗಳಲ್ಲಿ ನಟಿಸುವ ಯೋಜನೆ ಹೊಂದಿದ್ದು, ಮತ್ತೊಂದು ಉತ್ತಮ ಕಥೆಗಾಗಿ ಕಾಯುತ್ತಿದ್ದಾರೆ. ಮುಂದಿನ ಚಿತ್ರದ ಕಥೆ ಹೇಗಿರುತ್ತದೆ ಎಂಬುದನ್ನು ಸಮಯವ್ ನಿರ್ಧರಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com