ಮಾರ್ಚ್ ೧೬ಕ್ಕೆ 'ಬಾಹುಬಲಿ ೨' ಟ್ರೇಲರ್; ಏಪ್ರಿಲ್ ೨೮ಕ್ಕೆ ಸಿನೆಮಾ ಬಿಡುಗಡೆ

ಎಸ್ ಎಸ್ ರಾಜಮೌಳಿ ಅವರ ಬಹುನಿರೀಕ್ಷಿತ ಚಿತ್ರ 'ಬಾಹುಬಲಿ ೨' ಸಿನೆಮಾದ ಟ್ರೇಲರ್ ಮಾರ್ಚ್ ೧೬ ಕ್ಕೆ ಬಿಡುಗಡೆಯಾಗಲಿದೆ ಎಂದು ಶನಿವಾರ ನಿರ್ಮಾಪಕರು ಘೋಷಿಸಿದ್ದಾರೆ.
'ಬಾಹುಬಲಿ ೨' ಸಿನೆಮಾ ಪೋಸ್ಟರ್
'ಬಾಹುಬಲಿ ೨' ಸಿನೆಮಾ ಪೋಸ್ಟರ್
Updated on
ಚೆನ್ನೈ: ಎಸ್ ಎಸ್ ರಾಜಮೌಳಿ ಅವರ ಬಹುನಿರೀಕ್ಷಿತ ಚಿತ್ರ 'ಬಾಹುಬಲಿ ೨' ಸಿನೆಮಾದ ಟ್ರೇಲರ್ ಮಾರ್ಚ್ ೧೬ ಕ್ಕೆ ಬಿಡುಗಡೆಯಾಗಲಿದೆ ಎಂದು ಶನಿವಾರ ನಿರ್ಮಾಪಕರು ಘೋಷಿಸಿದ್ದಾರೆ. 
ರಾಜಮೌಳಿ ಮತ್ತು ನಿರ್ಮಾಪಕ ಶೋಭು ಯರ್ಲಗಡ್ಡ ಅವರ ಜೊತೆಗೆ ನಡೆದ ಫೇಸ್ಬುಕ್ ಚಾಟ್ ನಲ್ಲಿ, ಮಾರ್ಚ್ ೧೬ ರಂದು ಆಂಧ್ರ ಪ್ರದೇಶ ಮತ್ತು ತೆಲಗಾಂಣದಲ್ಲಿ ಚಿತ್ರಮಂದಿರಗಳಲ್ಲಿ ಬೆಳಗ್ಗೆ ೯ ರಿಂದ ೧೦ ರೊಳಗೆ ಟ್ರೇಲರ್ ಬಿಡುಗಡೆ ಮಾಡುವ ಯೋಜನೆಯನ್ನು ಅವರು ಧೃಢೀಕರಿಸಿದ್ದಾರೆ. 
ಅಂದೇ ಸಂಜೆ ೫ ಘಂಟೆಗೆ ಟ್ರೇಲರ್ ಅಂತರ್ಜಾಲದಲ್ಲಿ ಕೂಡ ಬಿಡುಗಡೆಯಾಗಲಿದೆ. 
"ಮೊದಲನೇ ಭಾಗಕ್ಕೆ ಮಾಡಿದಂತಯೇ ಇದಕ್ಕೂ ಮಾಡುತ್ತಿದ್ದೇವೆ. ಆಗ ಕೂಡ ಆಂಧ್ರ ಮತ್ತು ತೆಲಂಗಾಣದಾದ್ಯಂತ ಚಿತ್ರಮಂದಿರಗಳಲ್ಲಿ ಟ್ರೇಲರ್ ಬಿಡುಗಡೆ ಮಾಡಿದ್ದೆವು. ಈಗ ಎರಡನೇ ಭಾವನ್ನು ಕೂಡ ಅಂತೆಯೇ ಬಿಡುಗಡೆ ಮಾಡುತ್ತಿದ್ದೇವೆ" ಎಂದು ರಾಜಮೌಳಿ ಹೇಳಿದ್ದಾರೆ. 
ಹಾಗೆಯೇ ಸಿನೆಮಾ ವಿಶ್ವದಾದ್ಯಂತ ಏಪ್ರಿಲ್ ೨೮ಕ್ಕೆ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ-ನಿರ್ಮಾಪಕ ಜೋಡಿ ತಿಳಿಸಿದೆ. 
ಪ್ರಭಾಸ್, ರಾಣಾ ದಗ್ಗುಬಾಟಿ, ತಮನ್ನಾ ಭಟಿಯಾ, ಅನುಷ್ಕಾ ಶೆಟ್ಟಿ, ರಮ್ಯಾ ಕೃಷ್ಣ ಮತ್ತು ಸತ್ಯರಾಜ್ ನಟಿಸಿರುವ ಈ ಸಿನೆಮಾ ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com