ಬೆಂಗಳೂರು: ಮಲಯಾಳಂ ನಟಿ ಭಾವನಾ ನಿಶ್ಚಿತಾರ್ಥ ನಡೆದು ಸುಮಾರು ಒಂದು ವಾರ ಕಳೆಯುತ್ತಿದೆ, ಆದರೆ ಆಕೆಗೆ ಇನ್ನೂ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಬೆಂಗಳೂರು ಮೂಲದ ನಿರ್ಮಾಪಕ ನವೀನ್ ಜೊತೆ ಇತ್ತೀಚೆಗೆ ಭಾವನಾ ನಿಶ್ಚಿತಾರ್ಥ ನೆರವೇರಿತ್ತು.ಶಿವರಾಜ್ ಕುಮಾರ್ ಅಭಿನದ ಟಗರು ಸಿನಿಮಾದಲ್ಲಿ ಭಾವನಾ ನಟಿಸುತ್ತಿದ್ದಾರೆ, ಬೆಂಗಳೂರಿನ ಟಗರು ಸೆಟ್ ನಲ್ಲಿ ಭಾವನಾಗೆ ಪ್ರತಿಯೊಬ್ಬರು ಶುಭಾಶಯ ಕೋರಿದರು.
ಭಾವನಾ ಬಹಳ ವೃತ್ತಿಪರ ನಟಿ, ಟಗರು ಸಿನಿಮಾದಲ್ಲಿ ಶಿವಣ್ಣ ಗೆ ಪ್ರಥಮ ಬಾರಿ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂದು ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಹೇಳಿದ್ದಾರೆ. ಸಿನಿಮಾದಲ್ಲಿ ಮಾನ್ವಿತಾ ಹರೀಶ್ ಹಾಗೂ ವಿಲನ್ ಪಾತ್ರದಲ್ಲಿ ಧನಂಜಯ್ ನಟಿಸುತ್ತಿದ್ದಾರೆ.