ಮತ್ತೆ ಬಾಲಿವುಡ್ ಗೆ ಹಾರಲು ಸುದೀಪ್ ಸಜ್ಜು: ಸಲ್ಮಾನ್ ಚಿತ್ರದಲ್ಲಿ ಸುದೀಪ್ ವಿಲ್ಹನ್?

ಕಿಚ್ಚ ಸುದೀಪ್ ಆರು ವರ್ಷಗಳ ನಂತರ ಮತ್ತೆ ಬಾಲಿವುಡ್ ನಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಡಿದೆ. ..,.
ಸುದೀಪ್
ಸುದೀಪ್
Updated on

ಮುಂಬಯಿ:  ಕಿಚ್ಚ ಸುದೀಪ್ ಆರು ವರ್ಷಗಳ ನಂತರ ಮತ್ತೆ ಬಾಲಿವುಡ್ ನಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ  ಎಲ್ಲೆಡೆ ಹರಡಿದೆ.

ಸಲ್ಮಾನ್ ಖಾನ್ ಅಭಿನಯಿಸುತ್ತಿರುವ `ಟೈಗರ್ ಜಿಂದಾ ಹೇ' ಚಿತ್ರದಲ್ಲಿ ಸುದೀಪ್  ವಿಲ್ಹನ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಚಿತ್ರದಲ್ಲಿ ಸುದೀಪ್ ಅವರು ಜಾಹೀರ್ ಎಂಬ ಪಾಕಿಸ್ತಾನದ ಐಎಸ್‍ಐ ಏಜೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇವರ ಜೊತೆ ಕತ್ರೀನಾ ಕೈಫ್ ಕೂಡ ಎಎಸ್ ಐ ಏಜೆಂಟ್ ಆಗಿ ನಟಿಸಲಿದ್ದಾಳೆ ಎಂದು ಹೇಳಲಾಗುತ್ತಿದೆ. ಕನ್ನಡದ ಪ್ರಸಿದ್ದ ಲೇಖಕ ಗಿರೀಶ್ ಕಾರ್ನಾಡ್ ಕೂಡ ಈ ಸಿನಿಮಾದಲ್ಲಿ ಅಭಿನಯುಸುತ್ತಿದ್ದಾರೆ ಎಂದು ಹೇಳಲಾಗಿದೆ.  ಆದಿತ್ಯ ಚೋಪ್ರಾ ಸಿನಿಮಾ ನಿರ್ಮಾಣ ಮಾಡುತ್ತಿದ್ದು, 2017 ರ ಡಿಸೆಂಬರ್ ನಲ್ಲಿ ಸಿನಿಮಾ ತೆರೆಗೆ ಅಪ್ಪಳಿಸಲಿದೆ.

ಆರು ವರ್ಷಗಳ ಹಿಂದೆ ಸುದೀಪ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಪೂಂಕ್ ಚಿತ್ರದಲ್ಲಿ ನಟಿಸಿದ್ದರು. ಪೂಂಚ್ 4 ಸಿನಿಮಾ ತಯಾರಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com