ಚೆನ್ನೈ: ತಮಿಳುನಾಡಿನ ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ರೂಪದರ್ಶಿ ಹಾಗೂ ಕನ್ನಡದ ಕಿರುತೆರೆ ನಟಿ ರೇಖಾ ಸಿಂಧು ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ತಮಿಳುನಾಡಿನ ಪೆರ್ನಾಂಬತ್'ನ ಸುನ್ನಾಂಪುಕುಟ್ಟೈ ಪ್ರದೇಶದಲ್ಲಿ ನಟಿ ರೇಖಾ ಸಿಂಧು ಇದ್ದ ಕಾರು ತೆರಳುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ರೇಖಾ ಸೇರಿದಂತೆ ಇನ್ನಿತರೆ ಮೂವರು ಮೃತಪಟ್ಟಿದ್ದಾರೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
ಅಪಘಾತದಲ್ಲಿ ಸಂಭವಿಸಿದಾಗ ನಟಿ ರೇಖಾ ಜೊತೆಗೆ ಅಭಿಷೇಕ್ ಕುಮಾರನ್ (22), ಜಯಚಂದ್ರನ್ (23) ಮತ್ತು ರಕ್ಷಣ್ (20) ಇದ್ದರು.
ಅಪಘಾತ ಸಂಭವಿಸಿದಾಗ ರೇಖಾ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಉಳಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ, ಅಷ್ಟರಲ್ಲಾಗಲೇ ಮೃತಪಟ್ಟಿದ್ದರೆಂದು ವೈದ್ಯರು ತಿಳಿಸಿದ್ದಾರೆ.
ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ರೇಖಾ ಸಿಂಧು ಅವರು ಕನ್ನಡದ ಕಿರುತರೆ ನಟಿಯಾಗಿದ್ದು, ತಮ್ಮ ಉತ್ತಮ ನಟನೆ ಮೂಲಕ ತಮಿಳು ಕಿರುತೆರೆಯಲ್ಲಿಯೂ ಹೆಸರು ಮಾಡಿದ್ದಾರೆ.