1000 ಕೋಟಿ ಕ್ಲಬ್ ಸೇರಿದ ಭಾರತದ ಮೊದಲ ಚಿತ್ರ ಬಾಹುಬಲಿ 2

ಬಹು ನಿರೀಕ್ಷಿತ ಬಾಹುಬಲಿ 2 ಚಿತ್ರ ವಿಶ್ವದಾದ್ಯಂತ 9ನೇ ದಿನಕ್ಕೆ 1000 ಕೋಟಿ ಕಲೆಕ್ಷನ್ ಮಾಡುವ ಮೂಲಕ ಭಾರತೀಯ ಚಿತ್ರರಂಗದ ಸಾರ್ವಕಾಲಿಕ ದಾಖಲೆ ಮಾಡಿದೆ...
ಬಾಹುಬಲಿ-2
ಬಾಹುಬಲಿ-2
Updated on: 
ಬಹು ನಿರೀಕ್ಷಿತ ಬಾಹುಬಲಿ 2 ಚಿತ್ರ ವಿಶ್ವದಾದ್ಯಂತ 9ನೇ ದಿನಕ್ಕೆ 1000 ಕೋಟಿ ಕಲೆಕ್ಷನ್ ಮಾಡುವ ಮೂಲಕ ಭಾರತೀಯ ಚಿತ್ರರಂಗದ ಸಾರ್ವಕಾಲಿಕ ದಾಖಲೆ ಮಾಡಿದೆ. 
ಏಪ್ರಿಲ್ 28ರಂದು ವಿಶ್ವದಾದ್ಯಂತ 9000 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿದ್ದ ಬಾಹುಬಲಿ 2 ಬಾಕ್ಸ್ ಆಫೀಕ್ ಕಲೆಕ್ಷನ್ ನಲ್ಲಿ ಶರವೇಗದಲ್ಲಿ ಮುನ್ನುಗ್ಗುತ್ತಿದ್ದು, ಬಿಡುಗಡೆಯಾಗಿ ಒಂಬತ್ತನೇ ದಿನಕ್ಕೆ 1000 ಕೋಟಿ ಕಲೆಕ್ಷನ್ ಮಾಡಿ ಇತಿಹಾಸ ನಿರ್ಮಿಸಿದೆ. 
ಭಾರತದಲ್ಲಿ ಬಾಹುಬಲಿ 2 ಚಿತ್ರ 800 ಕೋಟಿ ಮತ್ತು ವಿದೇಶಗಳಲ್ಲಿ 200 ಕೋಟಿ ಕಲೆಕ್ಷನ್ ಮಾಡುವ ಮೂಲಕ 1000 ಕೋಟಿ ರುಪಾಯಿ ಕಲೆಕ್ಷನ್ ಮಾಡಿದೆ.  
ನಿರ್ದೇಶಕ ಎಸ್ಎಸ್ ರಾಜಮೌಳಿ ಕನಸಿನ ಕೂಸು ಬಾಹುಬಲಿ 2 ಚಿತ್ರದಲ್ಲಿ ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನ ಭಾಟಿಯಾ, ರಮ್ಯ ಕೃಷ್ಣ, ನಾಸಿರ್, ಸತ್ಯರಾಜ್ ಅಭಿನಯಿಸಿದ್ದಾರೆ. ಸತತ ಐದು ವರ್ಷಗಳ ಕಾಲ ಚಿತ್ರೀಕರಣದಲ್ಲಿ ಬಾಹುಬಲಿ 1 ಹಾಗೂ ಬಾಹುಬಲಿ 2 ಚಿತ್ರ ತೆರೆಗೆ ಬಂದಿದೆ. ಇನ್ನು 2015ರಲ್ಲಿ ಬಿಡುಗಡೆಯಾಗಿದ್ದ ಬಾಹುಬಲಿ 2 ಚಿತ್ರ 650 ಕೋಟಿ ಕಲೆಕ್ಷನ್ ಮಾಡಿತ್ತು. ಇದು ಭಾರತದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com