ಭಾರತಕ್ಕೆ ಆಗಮಿಸಿದ ಖ್ಯಾತ ಪಾಪ್ ಗಾಯಕ ಜಸ್ಟಿನ್ ಬೀಬರ್

ಖ್ಯಾತ ಅಂತಾರಾಷ್ಟ್ರೀಯ ಪಾಪ್ ಗಾಯಕ ಜಸ್ಟೀನ್ ಬೀಬರ್ ಅವರು ಭಾರತಕ್ಕೆ ಆಗಮಿಸಿದ್ದು, ಮುಂಬೈನಲ್ಲಿ ಆಯೋಜಿಸಲಾಗಿರುವ ತಮ್ಮ ಮೊದಲ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಂಗಳವಾರ ತಡರಾತ್ರಿ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ಭಾರತಕ್ಕೆ ಆಗಮಿಸಿದ ಖ್ಯಾತ ಪಾಪ್ ಗಾಯಕ ಜಲಸ್ಟಿನ್ ಬೀಬರ್
ಭಾರತಕ್ಕೆ ಆಗಮಿಸಿದ ಖ್ಯಾತ ಪಾಪ್ ಗಾಯಕ ಜಲಸ್ಟಿನ್ ಬೀಬರ್

ಮುಂಬೈ: ಖ್ಯಾತ ಅಂತಾರಾಷ್ಟ್ರೀಯ ಪಾಪ್ ಗಾಯಕ ಜಸ್ಟೀನ್ ಬೀಬರ್ ಅವರು ಭಾರತಕ್ಕೆ ಆಗಮಿಸಿದ್ದು, ಮುಂಬೈನಲ್ಲಿ ಆಯೋಜಿಸಲಾಗಿರುವ ತಮ್ಮ ಮೊದಲ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಂಗಳವಾರ ತಡರಾತ್ರಿ ಮುಂಬೈ  ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

ತಮ್ಮ ವಿಶೇಷ ಹಾಡುಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನವನ್ನು ಸೃಷ್ಟಿಸಿರುವ ಖ್ಯಾತ ಪಾಪ್ ಗಾಯಕ  ಭಾರತದಲ್ಲಿ ಆಯೋಜಿಸಲಾಗಿರುವ ತಮ್ಮ ಮೊದಲ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. 23  ವರ್ಷದ ಬೀಬರ್ ಮಂಗಳವಾರ ತಡ ರಾತ್ರಿ 1.30ರ ಸುಮಾರಿನಲ್ಲಿ ಮುಂಬೈನ ಕಾಲಿನಾ ವಿಮಾನ ನಿಲ್ದಾಣಕ್ಕೆ ವಿಶೇಷ ಚಾರ್ಟೆಡ್ ವಿಮಾನದಲ್ಲಿ ಆಗಮಿಸಿದರು. ಬಾಲಿವುಡ್ ಸೂಪರ್​ ಸ್ಟಾರ್ ಸಲ್ಮಾನ್ ಖಾನ್ ಅವರ ನೆಚ್ಚಿನ  ಬಾಡಿಗಾರ್ಡ್ ಶೀರಾ ಎಂಬುವವರು ವಿಮಾನ ನಿಲ್ದಾಣದಲ್ಲಿ ಬೀಬರ್ ಅವರನ್ನು ಬರಮಾಡಿಕೊಂಡು ಹೋಟೆಲ್​ ಗೆ ಕರೆದೊಯ್ದರು.

ಬೀಬರ್ ಮುಂಬೈನಲ್ಲಿರುವಷ್ಟು ಸಮಯ ಅವರ ಭದ್ರತೆಯ ಜಬಾಬ್ದಾರಿಯನ್ನು ಶೀರಾ ಅವರು ವಹಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಮೇ 6 ರಂದು ದುಬೈನಲ್ಲಿ ಕಾರ್ಯಕ್ರಮ ನೀಡಿದ್ದ ಬೀಬರ್ ಬುಧವಾರ  ಮುಂಬೈನಲ್ಲಿ ಕಾರ್ಯಕ್ರಮ ನೀಡಲಿದ್ದಾರೆ. ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸುಮಾರು 45 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇಂದು ಸಂಜೆ 4 ಗಂಟೆಗೆ ಕಾರ್ಯಕ್ರಮ  ಆರಂಭವಾಗಲಿದ್ದು, ಖ್ಯಾತ ಹಾಲಿವುಡ್ ನಟಿ ಎಲರಿಕಾ ಜಾನ್ಸನ್ ಅವರು ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.

ಅಂತೆಯೇ ಬೀಬರ್ ತಮ್ಮ ಖ್ಯಾತ ಆಲ್ಬಮ್ ವೊಂದನ್ನು ಪ್ರಚಾರ ಮಾಡುವ ಸಲುವಾಗಿ ವಿಶ್ವದ ಹಲವು ರಾಷ್ಟ್ರಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ. ಕಳೆದ ವರ್ಷ ಮಾರ್ಚ್ 9 ರಂದು ತಮ್ಮ ವಿಶ್ವಪರ್ಯಟನೆಯನ್ನು ಆರಂಭಿಸಿರುವ  ಬೀಬರ್ ಈ ವರ್ಷ ಸೆಪ್ಟೆಂಬರ್ 24 ರಂದು ಟೋಕಿಯೋದಲ್ಲಿ ಕೊನೆಯ ಕಾರ್ಯಕ್ರಮ ನೀಡಲಿದ್ದಾರೆ. ಇನ್ನೂ 2-3 ದಿನ ಭಾರತದಲ್ಲಿಯೇ ಉಳಿಯಲಿರುವ ಬೀಬರ್ ದೆಹಲಿ, ಜೈಪುರ ಮತ್ತು ಆಗ್ರಾಗೆ ಭೇಟಿ ನೀಡುವ ಸಾಧ್ಯತೆ ಇದೆ  ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com