'ಕಾಳ ಕರಿಕಾಳನ್' ರಜನಿಕಾಂತ್ ಮುಂದಿನ ಸಿನಿಮಾ

ಕಬಾಲಿ ಯಶಸ್ಸಿನ ನಂತರ ಸೂಪರ್ ಸ್ಟಾರ್ ರಜನಿಕಾಂತ್ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ.
ರಜನಿಕಾಂತ್
ರಜನಿಕಾಂತ್
ನವದೆಹಲಿ: ಕಬಾಲಿ ಯಶಸ್ಸಿನ ನಂತರ ಸೂಪರ್ ಸ್ಟಾರ್ ರಜನಿಕಾಂತ್ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ಪಾ ಸಿನಿಮಾದ ನಿರ್ದೇಶಕ ರಂಜಿತ್ ರಜನಿ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಹೊಸ ಸಿನಿಮಾಗೆ ಕಾಳ ಕರಿಕಾಳನ್ ಎಂದು ಶೀರ್ಷಿಕೆ ನೀಡಲಾಗಿದೆ. 
ಧನುಷ್ ಹೋಮ್ ಬ್ಯಾನರ್ 'ವಂಡರ್ಬಾರ್ ಫಿಲ್ಮ್ಸ್‌' ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು, ಅಧಿಕೃತ ಟ್ವಿಟರ್ ಖಾತೆಯಲ್ಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನ್ನು ಪೋಸ್ಟ್ ಮಾಡಿದ್ದಾರೆ. ರಜನಿಕಾಂತ್ ಅವರ ಹೊಸ ಚಿತ್ರದ ಚಿತ್ರೀಕರಣ ಮೇ.28 ರಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ.
ಕಾಳ ಕರಿಕಾಳನ್ ಚಿತ್ರದಲ್ಲಿ ವಿದ್ಯಾಬಾಲನ್ ನಾಯಕ ನಟಿಯಾಗಿ ನಟಿಸಬೇಕಿತ್ತಾದರೂ ಸಮಯದ ಅಭಾವದಿಂದಾಗಿ ಹುಮಾ ಖುರೇಷಿ ನಾಯಕ ನಟಿಯಾಗಿ ಆಯ್ಕೆಯಾಗಿದ್ದಾರೆ. ರಜನಿಕಾಂತ್ ರ ಹೊಸ ಸಿನಿಮಾಗೆ ಸಂತೋಷ್ ನಾರಾಯಣನ್ ಸಂಗೀತ ನೀಡಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com