ನವದೆಹಲಿ: ತೆರೆಯ ಮೇಲೆ ಮಾನವೀಯತೆ ಪ್ರೀತಿ ತೋರಿ, ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿರುವ ಬಿಗ್ ಬಿ ಅಮಿತಾಬ್ ಬಚ್ಚನ್ ನಿಜ ಜೀವನದಲ್ಲೂ ಇತರರಿಗೆ ಮಾದರಿಯಾಗಿದ್ದಾರೆ. ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
74 ವರ್ಷದ ಪಿಕು ನಟ 103 ವರ್ಷದ ಅಭಿಮಾನಿಯನ್ನು ಭೇಟಿ ಮಾಡಿ ಅವರ ಆಸೆ ಈಡೇರಿಸಿದ್ದಾರೆ. 103 ವರ್ಷದ ಕ್ರಿಸ್ಚೀನ್ ಅಮಿತಾಬ್ ಅವರ ಕಟ್ಟಾ ಅಭಿಮಾನಿ. ಅಮಿತಾಬ್ ಬಚ್ಚನ್ ಅವರನ್ನು ಭೇಟಿಯಾಗಬೇಕೆಂಬ ಮಹದಾಸೆ ಹೊಂದಿದ್ದರು. ಇದನ್ನು ತಿಳಿದ ಬಿಗ್ ಬಿ ಸ್ವತಃ ತಾವೇ ಅವರ ಮನೆಗೆ ಭೇಟಿ ನೀಡಿ ಕ್ರಿಸ್ಟೀನ್ ಅವರ ಆಸೆ ಈಡೇರಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅಮಿತಾಬ್ "ನನ್ನ ಕಟ್ಟಾಭಿಮಾನಿಯನ್ನು ಇಂದು ನಾನು ಭೇಟಿ ಮಾಡಿದ್ದೇನೆ, ಇದು ಅವರ ಹಲವು ವರ್ಷಗಳ ಕನಸಾಗಿತ್ತು. ಸೋ ಸ್ವೀಟ್ ಅಂಡ್ ಕ್ಯೂಟ್, ನಾನು 103 ವರ್ಷ ಬಾಳುವಂತೆ ನನಗೂ ಹರಸಿ" ಎಂದು ಅಭಿಮಾನಿಯೊಂದಿಗಿನ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.
T 2433 - 103 yrs old Christine, my fan had wished to see me for years .. today I did ! SO sweet and cute ..blessed me too .. 103 years !! pic.twitter.com/76KUNjGvXj