ಮುಂಬೈ: 'ಬಾಹುಬಲಿ' ಸಿನೆಮಾದ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ಗುಣಗಾನವನ್ನು ನಿರ್ದೇರ್ಶಕ ಕರಣ್ ಜೋಹರ್ ಮುಂದುವರೆಸಿದ್ದಾರೆ. ಈಗ ರಾಜಮೌಳಿ ಭಾರತೀಯ ಸಿನೆಮಾದ 'ಅತಿ ದೊಡ್ಡ ಸೂಪರ್ ಸ್ಟಾರ್' ಆಗಿ ಹೊರಹೊಮ್ಮಿದ್ದಾರೆ ಎಂದು ಕೂಡ ಅವರು ಹೇಳಿದ್ದಾರೆ.
ಕರಣ್ 'ಬಾಹುಬಲಿ೨: ಅಂತ್ಯ' ಸಿನೆಮಾದ ಹಿಂದಿ ಅವತರಿಣಿಕೆಯನ್ನು ಅರ್ಪಿಸಿದ್ದರು.
ಜಾಗತಿಕವಾಗಿ ಬಾಕ್ಸ್ ಆಫಿಸ್ ನಲ್ಲಿ ೧೫೦೦ ಕೋಟಿಗೂ ಹೆಚ್ಚು ಗಳಿಕೆ ಕಂಡಿರುವ ಸಿನೆಮಾದ ಯಶಸ್ಸಿನ ಬಗ್ಗೆ ಮಾತನಾಡಿರುವ ಕರಣ್ "'ಬಾಹುಬಲಿ' ಬಗ್ಗೆ ಮಾತನಾಡಲು ಪದಗಳೇ ಸಿಗುವುದಿಲ್ಲ. ಈ ಸಿನೆಮಾ ಈಗ ಮೈಲಿಗಲ್ಲು. ರಾಜಮೌಳಿ ದೇಶದ ಅತಿದೊಡ್ಡ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ" ಎಂದು ಹೇಳಿದ್ದಾರೆ.
"ನಿರ್ದೇಶಕನ ಗೆಲುವು ಬೇರೆ ಎಲ್ಲರನ್ನು ಮೀರಿದ್ದು ಎಂಬುದು ನನ್ನ ಅಭಿಮತ. 'ಬಾಹುಬಲಿ' ಜೊತೆಗೆ ನಾನು ಮತ್ತು ನನ್ನ ನಿರ್ಮಾಣ ಸಂಸ್ಥೆ ಸಹಯೋಗ ಮಾಡಿಕೊಂಡಿದ್ದು ನನಗೆ ಹೆಮ್ಮೆಯೆನಿಸಿದೆ ಮತ್ತು ಈ ಪಯಣದ ಭಾಗವಾಗಿದ್ದಕ್ಕೆ ವಿಶೇಷವೆಂದೆನಿಸುತ್ತಿದೆ" ಎಂದಿದ್ದಾರೆ.
ಅವರ ಗೆಳತಿ ಏಕ್ತಾ ಕಪೂರ್ ನಿರ್ಮಿಸಿರುವ 'ಹಾಫ್ ಗರ್ಲ್ ಫ್ರೆಂಡ್' ಯಶಸ್ಸಿನ ಸಭೆಯ ನಂತರ ಕರಣ್ ಪತ್ರಕರ್ತರೊಂದಿಗೆ ಮಾತನಾಡಿದ್ದಾರೆ.
'ಹಾಫ್ ಗರ್ಲ್ ಫ್ರೆಂಡ್' ಸಿನೆಮಾವನ್ನು ಕೂಡ ಪ್ರಶಂಸಿಸಿರುವ ಕರಣ್ ಅದನ್ನಿನ್ನು ನೋಡಬೇಕಿದೆ ಎಂದಿದ್ದಾರೆ.