ಟ್ವಿಟ್ವರ್'ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಗುಡ್ ಬೈ!

ಖ್ಯಾತ ಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಅವರು ಸಾಮಾಜಿಕ ಜಾಲತಾಣ ಟ್ವಿಟ್ಟರ್ ಗೆ ಗುಡ್ ಬೈ ಹೇಳಿದ್ದಾರೆ...
ಖ್ಯಾತ ಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ
ಖ್ಯಾತ ಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ
ಮುಂಬೈ: ಖ್ಯಾತ ಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಅವರು ಸಾಮಾಜಿಕ ಜಾಲತಾಣ ಟ್ವಿಟ್ಟರ್ ಗೆ ಗುಡ್ ಬೈ ಹೇಳಿದ್ದಾರೆ. 
ಸದಾಕಾಲ ವಿವಾದಿತ ಟ್ವೀಟ್ ಗಳನ್ನೇ ಮಾಡುತ್ತಿದ್ದ ರಾಮ್ ಗೋಪಾಲ್ ವರ್ಮಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದ್ದವು. 
ಇದರಂತೆ ಶನಿವಾರ ಏಕಾಏಕಿ ತಮ್ಮ ಫಾಲೋವರ್ಸ್'ಗಳಿಗೆ ಶಾಕ್ ನೀಡಿರುವ ರಾಮ್ ಗೋಪಾಲ್ ವರ್ಮಾ ಅವರು ಟ್ವಿಟ್ಟರ್ ಗೆ ಗುಡ್ ಬೈ ಹೇಳುತ್ತಿರುವುದಾಗಿ ತಿಳಿಸಿದ್ದಾರೆ. ಇನ್ನು ಮುಂದೆ ಸ್ಟಾಗ್ರಾಮ್ ನಲ್ಲಿ ಸಕ್ರಿಯನಾಗಿರಲಿದ್ದು, ಫೋಟೋಗಳು ಹಾಗೂ ವಿಡಿಯೋಗಳ ಮೂಲಕವಷ್ಟೇ ಮಾತನಾಡಲು ನಿರ್ಧರಿಸಿದ್ದೇನೆ. ನನ್ನ ಟ್ವಿಟ್ಟರ್ ಖಾತೆ ಸಾಯುತ್ತಿದ್ದು, ಇದು ನನ್ನ ಕೊನೆಯ ಟ್ವೀಟ್ ಎಂದು ಹೇಳಿಕೊಂಡಿದ್ದಾರೆ. 
ಇತ್ತೀಚೆಗಷ್ಟೇ ಬಾಹುಬಲಿ ಚಿತ್ರದ ಯಶಸ್ಸು ಕುರಿತಂತೆ ಕನ್ನಡಿಗರಿಗೆ ಸ್ವಾಭಿಮಾನಿ ಕುರಿತಂತೆ ಆರ್ ಜಿವಿ ಪ್ರಶ್ನೆ ಮಾಡಿದ್ದರು. ಬಾಹುಬಲಿ-2 ತೆಲುಗು ಚಿತ್ರವು ಕರ್ನಾಟಕದಲ್ಲಿ ಕನ್ನಡ ಚಲನಚಿತ್ರಗಳಿಗಿಂತ ಸೂಪರ್ ಹಿಟ್ ಆಗಿದೆ. ಇದರಿಂದಾಗಿ ಕನ್ನಡಿಗರಿಗೆ ತಮ್ಮ ಭಾಷೆಯ ಮೇಲೆ ಅಭಿಮಾನವೇ ಇಲ್ಲ ಎಂಬುದು ಸಾಬೀತಾಗುತ್ತಿದೆ. ಕನ್ನಡಿಗರು ಒಂದು ಕಡೆ ಡಬ್ಬಿಂಗ್ ಚಿತ್ರ ನಿಲ್ಲಿಸಲು ಯತ್ನಿಸುತ್ತಿದ್ದಾರೆ. ಆದರೆ, ಈ ಯತ್ನಗಳನ್ನು ತೆಲುಗು ಚಿತ್ರ ನುಚ್ಚುನೂರು ಮಾಡಿದೆ. ಕನ್ನಡ ಚಿತ್ರಕ್ಕಿಂತ ತೆಲುಗು ಚಿತ್ರವನ್ನು ಹೆಚ್ಚು ನೋಡಿದ್ದಕ್ಕೆ ಹೆಮ್ಮೆಯ ಕನ್ನಡಿಗರು ತಮ್ಮದೇ ಆದ ಕನ್ನಡಿಗರ ವಿರುದ್ಧ ಹೋರಾಡಬೇಕು ಎಂದು ವ್ಯಂಗ್ಯವಾಡಿದ್ದರು. ಇದಕ್ಕೆ ಭಾರೀ ವಿರೋಧಗಳು ವಿರೋಧಗಳು ವ್ಯಕ್ತವಾಗಿದ್ದವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com