'ಕಿರಿಕ್ ಪಾರ್ಟಿ' ಸಂಯುಕ್ತ ಹೆಗಡೆ ವಿರುದ್ಧ ವಾಣಿಜ್ಯ ಮಂಡಳಿಗೆ ದೂರು: ನಿರ್ಮಾಪಕ ಪದ್ಮನಾಭ್

'ಕಾಲೇಜ್ ಕುಮಾರ' ಚಿತ್ರದಲ್ಲಿ ನಾಯಕಿಯಾಗಿರುವ ಕಿರಿಕ್ ಪಾರ್ಟಿ ಚಿತ್ರದ ಖ್ಯಾತಿಯ ನಟಿ ಸಂಯುಕ್ತ ಹೆಗಡೆ ಅವರು ಸಿನಿಮಾ ಪ್ರಚಾರಕ್ಕೆ ಬರದೆ....
ಸಂಯುಕ್ತ ಹೆಗಡೆ
ಸಂಯುಕ್ತ ಹೆಗಡೆ
Updated on
ಬೆಂಗಳೂರು: 'ಕಾಲೇಜ್ ಕುಮಾರ' ಚಿತ್ರದಲ್ಲಿ ನಾಯಕಿಯಾಗಿರುವ ಕಿರಿಕ್ ಪಾರ್ಟಿ ಚಿತ್ರದ ಖ್ಯಾತಿಯ ನಟಿ ಸಂಯುಕ್ತ ಹೆಗಡೆ ಅವರು ಸಿನಿಮಾ ಪ್ರಚಾರಕ್ಕೆ ಬರದೆ, ಅಸಡ್ಡೆ, ಉಡಾಫೆತನ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲು ಚಿತ್ರದ ನಿರ್ಮಾಪಕ ಎಲ್. ಪದ್ಮನಾಭ್ ಅವರು ನಿರ್ಧರಿಸಿದ್ದಾರೆ.
ಈ ಸಂಬಂಧ ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪದ್ಮನಾಭ್ ಅವರು, ಸಂಯುಕ್ತ ಹೆಗಡೆ ವಿರುದ್ಧ ವಾಣಿಜ್ಯ ಮಂಡಳಿ ಜತೆಗೆ ನಿರ್ಮಾಪಕರ ಸಂಘ, ಕಲಾವಿದರ ಸಂಘಕ್ಕೂ ದೂರು ನೀಡಿ, ನಿರ್ಮಾಪಕನಿಗೆ ತೊಂದರೆ ನೀಡುವ ನಟಿಯರನ್ನು ತಮ್ಮ ಚಿತ್ರಗಳಿಗೆ ಹಾಕಿಕೊಳ್ಳದಂತೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.
'ಕಾಲೇಜ್ ಕುಮಾರ' ಚಿತ್ರದ ನಾಯಕಿ ಸಂಯುಕ್ತಾ ಹೆಗಡೆ ಆರಂಭದ ದಿನದಿಂದಲೂ ಒಂದಿಲ್ಲ ಒಂದು ಕಿರಿಕ್ ಮಾಡಿದ್ದಾರೆ. ಅಲ್ಲದೆ, ಚಿತ್ರದ ಪ್ರಚಾರಕ್ಕೆ ಬರದೆ ನಿರ್ಲಕ್ಷ್ಯತನ ತೋರುವ ಮೂಲಕ ಮೂಲ ಒಪ್ಪಂದಗಳನ್ನು ಉಲ್ಲಂಘಿಸಿದ್ದಾರೆ ಎಂದು ನಿರ್ಮಾಪಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಿರಿಕ್ ಪಾರ್ಟಿ ಚಿತ್ರದಲ್ಲಿ ಎರಡನೇ ನಾಯಕಿಯಾಗಿದ್ದ ಸಂಯುಕ್ತಾ ಹೆಗಡೆ ಅವರನ್ನು ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿ ಮಾಡಿದ್ದೆ ಕಾಲೇಜ್‌ ಕುಮಾರ್ ಚಿತ್ರ. ಆದರೆ ಅದೇ ಚಿತ್ರದ ಪ್ರಚಾರ ಸೇರಿದಂತೆ ಚಿತ್ರಕ್ಕೆ ಸಂಬಂಧಿಸಿದ ಯಾವುದೇ ಕೆಲಸಗಳಲ್ಲಿ ತೊಡಗಿಸಿಕೊಳ್ಳದೆ ನನ್ನಿಂದಲೇ ಚಿತ್ರ ಓಡಿಸುತ್ತಿರುವುದು ಎನ್ನುವ ಧಿಮಾಕು ಪ್ರದರ್ಶಿಸಿದ್ದಾರೆ. ಇನ್ನು ಆರಂಭದ ಚಿತ್ರದಲ್ಲೇ ಹೀಗಾದರೆ ಮುಂದೇನು. ಇಂತಹ ನಟಿ ವಿರುದ್ಧ ವಾಣಿಜ್ಯ ಮಂಡಳಿ ನಿರ್ಮಾಪಕರ ಸಂಘ, ಕಲಾವಿದರ ಸಂಘ ಸೂಕ್ತ ಕ್ರಮ ಕೈಗೊಳ್ಳಬೇಕು. ನಿರ್ಮಾಪಕನಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಪದ್ಮನಾಭ್ ತಮ್ಮ ಅಳಲು ತೋಡಿಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com