ಪೊಗರು ಚಿತ್ರದಲ್ಲಿ 12 ವರ್ಷದ ಹುಡುಗನ ಪಾತ್ರದಲ್ಲಿ ಧ್ರುವ ಸರ್ಜಾ

ಸ್ಯಾಂಡಲ್ವುಡ್ ನಲ್ಲಿ ಮೂರು ಬ್ಲಾಕ್ ಬಸ್ಟರ್ ಚಿತ್ರಗಳನ್ನು ಕೊಟ್ಟಿರುವ ಧ್ರುವ ಸರ್ಜಾ ಇದೀಗ ಪೊಗರು ಚಿತ್ರಕ್ಕೆ ತಯಾರಿ ನಡೆಸುತ್ತಿದ್ದಾರೆ...
ಧ್ರುವ ಸರ್ಜಾ
ಧ್ರುವ ಸರ್ಜಾ
Updated on: 
ಸ್ಯಾಂಡಲ್ವುಡ್ ನಲ್ಲಿ ಮೂರು ಬ್ಲಾಕ್ ಬಸ್ಟರ್ ಚಿತ್ರಗಳನ್ನು ಕೊಟ್ಟಿರುವ ಧ್ರುವ ಸರ್ಜಾ ಇದೀಗ ಪೊಗರು ಚಿತ್ರಕ್ಕೆ ತಯಾರಿ ನಡೆಸುತ್ತಿದ್ದಾರೆ. 
ಕಳೆದ 60 ದಿನಗಳಿಂದ ಪೊಗರು ಚಿತ್ರದ ಪಾತ್ರಕ್ಕಾಗಿ ತಯಾರಿ ನಡೆಸುತ್ತಿದ್ದೇನೆ. ನಾನು ನನ್ನು ಸಮಯವನ್ನು ವ್ಯರ್ಥ ಮಾಡುತ್ತಿಲ್ಲ. ದೇಹದ ಆಕಾರದಲ್ಲಿ ತೊಡಗಿಸಿಕೊಳ್ಳುವಲ್ಲಿ ನಿರತನಾಗಿದ್ದೇನೆ. ಪೊಗರು ಚಿತ್ರದಲ್ಲಿ ನಾನು 8ನೇ ತರಗತಿ ವಿದ್ಯಾರ್ಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ಧ್ರುವ ಸರ್ಜಾ ಹೇಳಿದ್ದಾರೆ. 
ಪೊಗರು ಚಿತ್ರ ಶಾಲೆ ಮತ್ತು ಕಾಲೇಜು ದಿನಗಳು, 20ರ ಹರೆಯದ ಯುವಕನ ಕಥೆಯನ್ನು ಒಳಗೊಂಡಿದೆ. ನಂದಾ ಕಿಶೋರ್ ಅವರ ಉತ್ತೇಜನ ಈ ಸವಾಲನ್ನು ತೆಗೆದುಕೊಳ್ಳಲು ನನಗೆ ಪ್ರೇರಣೆಯಾಯಿತು. ಭರ್ಜರಿಯ ಯಶಸ್ಸಿನ ನಂತರ ನಾನು ಸಮಯ ತೆಗೆದುಕೊಳ್ಳುತ್ತಿದ್ದೇನೆ ಎಂದು ಜನರ ಊಹಿಸಿದ್ದಾರೆ. ಆದರೆ ಚಿತ್ರಕ್ಕಾಗಿ ನಾನು ಕಸರತ್ತು ನಡೆಸಿದ್ದು 60 ದಿನಗಳಲ್ಲಿ 30 ಕೆಜಿ ತೂಕ ಕಡಿಮೆ ಮಾಡಲು ಡಯೆಟ್ ಮಾಡುತ್ತಿದ್ದೇನೆ ಎಂದರು. 
ಸದ್ಯ ನಾನು 26 ಕೆಜಿ ತೂಕ ಕಳೆದುಕೊಂಡಿದ್ದು ಇನ್ನು 4 ಕೆಜಿ ತೂಕ ಕಡಿಮೆ ಮಾಡಿಕೊಳ್ಳಬೇಕಿದೆ. ಶಾಲಾ ಬಾಲಕನಂತೆ ಕಾಣಲು ನಾನು ಈ ಕಸರತ್ತು ನಡೆಸಿದ್ದೇನೆ. ಚಿತ್ರಕ್ಕೆ ನಟರು ಎಷ್ಟೇಲ್ಲಾ ಪರಿಶ್ರಮ ಹಾಕುತ್ತಾರೆ ಎಂದು ನಂದ ಕಿಶೋರ್ ನನಗೆ ಮನವರಿಕೆ ಮಾಡಿಸಿದರು. ಬಾಲಿವುಡ್ ನಟ ಅಮಿರ್ ಖಾನ್, ಕಾಲಿವುಡ್ ನ ಸೂರ್ಯ ಮತ್ತು ವಿಕ್ರಮ್ ರ ಉದಾಹರಣೆಯನ್ನು ನೀಡಿದ್ದರು ಎಂದು ಧ್ರುವ ಸರ್ಜಾ ಹೇಳಿದರು. 
ಚಿತ್ರವನ್ನು ನಂದ ಕಿಶೋರ್ ನಿರ್ದೇಶಿಸುತ್ತಿದ್ದು ಗಂಗಾಧರ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ಶಾನ್ವಿ ಶ್ರೀವಾತ್ಸವ್ ನಾಯಕಿಯರ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com