ಕನ್ನಡ ಬಿಗ್ ಬಾಸ್ ಸೀಸನ್ 5: ಬಿಗ್ ಬಾಸ್ ಮನೆಗೆ ಹೊರಟ ಸಂಭಾವ್ಯ ಸೆಲೆಬ್ರಿಟಿಗಳ ಪಟ್ಟಿ!

ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5 ಇದೇ 15ರಿಂದ ಆರಂಭವಾಗುತ್ತಿದೆ. ಯಾರು ಯಾರು ಈ ಸಲ ಬಿಗ್ ಬಾಸ್...
ಬಿಗ್ ಬಾಸ್ -ಸೀಸನ್ 5
ಬಿಗ್ ಬಾಸ್ -ಸೀಸನ್ 5
ಬೆಂಗಳೂರು: ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5 ಇದೇ 15ರಿಂದ ಆರಂಭವಾಗುತ್ತಿದೆ. ಯಾರು ಯಾರು ಈ ಸಲ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದುಕೊಳ್ಳುತ್ತಿದ್ದಾರೆ ಅನ್ನೊ ಕುತೂಹಲಕ್ಕೆ ಇಲ್ಲಿದೆ ಉತ್ತರ.ಬಿಗ್ ಬಾಸ್ ಮನೆಗೆ ಹೊರಟವರು ಯಾರು ಎಂಬ ಪ್ರಶ್ನೆಗೆ ತೆರೆ ಬಿದ್ದಿದ್ದು. ಬಿಗ್ ಬಾಸ್ ಸ್ಪರ್ಧಿಗಳ ಸಂಭಾವ್ಯರ ಹೆಸರು ಇಲ್ಲಿದೆ. 
ಹಿರಿಯ ನಟ ಸಿಹಿ ಕಹಿ ಚಂದ್ರು, ನಾಗ ಮಂಡಲ ಖ್ಯಾತಿಯ ನಟಿ ವಿಜಯಲಕ್ಷ್ಮಿ, ಕಿರುತೆರೆ ನಟಿ ವರ್ಷಿಣಿ ಕುಸುಮಾ, ಗಾಯಕಿಯರಾದ ಅನುರಾಧ ಭಟ್,  ಕಿರುತೆರೆ ನಟಿ ಕವಿತಾ ಗೌಡ, ಹಾಗೂ ರಾಜೇಶ್ ನಟರಂಗ ಭಾಗವಹಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಸಲದ ಬಿಗ್ ಬಾಸ್ ಸ್ವಲ್ಪ ಭಿನ್ನವಾಗಿದೆ, ಏಕೆಂದರೇ ಸೆಲೆಬ್ರಿಟಿಗಳ ಜೊತೆಗೆ ಜನ ಸಾಮಾನ್ಯರು ಕೂಡ ಈ ರಿಯಾಲಿಟಿ ಶೋನಲ್ಲಿ ಪಾಲ್ಗೋಳ್ಳುತ್ತಿದ್ದಾರೆ. ಈ ಸೆಲೆಬ್ರಿಟಿಗಳು ಮತ್ತು ಜನ ಸಾಮಾನ್ಯರ ನಡುವಿನ ಹೊಂದಾಣಿಕೆ ಹೇಗಿರುತ್ತದೆ ಎಂಬ ಕುತೂಹಲ ಮೂಡಿದೆ.
ಸೀಸನ್ 4ಕ್ಕಿಂತಲೂ ಈ ಬಾರಿಯ ಬಿಗ್ ಬಾಸ್ ಮನೆ ಸಖತ್ ಕಲರ್ ಫುಲ್ ಆಗಿರಲಿದೆಯಂತೆ. ಅಕ್ಟೋಬರ್ 15 ರಿಂದ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com