ನಿಖಿಲ್ ಮತ್ತು ಅಂಬರೀಷ್
ನಿಖಿಲ್ ಮತ್ತು ಅಂಬರೀಷ್

ಕುರುಕ್ಷೇತ್ರ ಅದ್ಭುತ ಮಹಾಕಾವ್ಯವಾಗಲಿದೆ: ನಿಖಿಲ್ ಕುಮಾರ್

ಹೈದರಾಬಾದ್ ನಲ್ಲಿ ನಡೆಯುತ್ತಿರುವ ಮುನಿರತ್ನ ನಿರ್ಮಾಣದ ಅದ್ಧೂರಿ ಚಿತ್ರ ಕುರುಕ್ಷೇತ್ರ ಶೂಟಿಂಗ್ ನಲ್ಲಿ ನಟ ನಿಖಿಲ್ ಭಾಗವಹಿಸಿದ್ದಾರೆ. ತಮ್ಮ ಪಾತ್ರದ ಪ್ರತಿಯೊಂದು ...
ಬೆಂಗಳೂರು: ಹೈದರಾಬಾದ್ ನಲ್ಲಿ ನಡೆಯುತ್ತಿರುವ ಮುನಿರತ್ನ ನಿರ್ಮಾಣದ ಅದ್ಧೂರಿ ಚಿತ್ರ ಕುರುಕ್ಷೇತ್ರ ಶೂಟಿಂಗ್ ನಲ್ಲಿ  ನಟ ನಿಖಿಲ್ ಭಾಗವಹಿಸಿದ್ದಾರೆ. ತಮ್ಮ ಪಾತ್ರದ ಪ್ರತಿಯೊಂದು ದೃಶ್ಯದ ಚಿತ್ರೀಕರಣವನ್ನು ಅವರು ಎಂಜಾಯ್ ಮಾಡುತ್ತಿದ್ದಾರೆ,.
ಶೂಟಿಂಗ್ ಗೂ ತೆರಳುನ ಮುನ್ನ ಹೇಗೆ ಕ್ಯಾಮೆರಾ ಎದುರಿಸಬೇಕು ಎನ್ನುವ ಬಗ್ಗೆ 4 ವಾರಗಳ ತರಬೇತಿ ಪಡೆದಿದ್ದಾರೆ. ಫೈಟಿಂಗ್ ಸೀನ್ ಮೂಲಕ ಶೂಟಿಂಗ್ ಆರಂಭವಾಗಿದ್ದು 12 ದಿನಗಳ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು ತಮ್ಮ ತಂದೆಯ ಆರೋಗ್ಯ ನೋಡಿಕೊಳ್ಳಲು ಬ್ರೇಕ್  ತೆಗೆದುಕೊಂಡಿದ್ದಾಗಿ ಹೇಳಿರುವ ನಿಖಿಲ್  ಉಳಿದ ದೃಶ್ಯಗಳ ಚಿತ್ರೀಕರಣಕ್ಕಾಗಿ 25 ದಿನ ಮತ್ತೆ ಹೈದರಾಬಾದ್ ಗೆ ಶೂಟಿಂಗ್ ಗಾಗಿ ತೆರಳಲಿದ್ದಾರೆ.
ಈ ಮೊದಲು ಅಭಿಮನ್ಯು ಪಾತ್ರವನ್ನು 20 ನಿಮಿಷಕ್ಕೆ ನಿಗದಿಗೊಳಿಸಲಾಗಿತ್ತು. ಆದರೆ ಈಗ ಅದು 32 ನಿಮಿಷಕ್ಕೆ ಏರಿಸಲಾಗಿದೆ. ಈ ದೃಷ್ಯದಲ್ಲಿ ಅಂಬರೀಷ್ ಮತ್ತು ನಿಖಿಲ್ ಕುಮಾರ್ ಜೊತೆಯಾಗಿರುವುದೇ ಹೈಲೈಟ್ ಅಗಿದೆ. ಅದು ಒಂದು ಅದ್ಭುತ ದೃಶ್ಯವಾಗಲಿದೆ ಎಂದು ಅಂಬರೀಶ್ ಅಂಕಲ್ ಹೇಳಿದ್ದಾಗಿ ನಿಖಿಲ್ ತಿಳಿಸಿದ್ದಾರೆ. ಬಾಲ್ಯದಿಂದಲೂ ಅಂಬರೀಷ್ ಅಂಕಲ್ ನನ್ನನ್ನು ನೋಡಿದ್ದಾರೆ ಎಂದು ನಿಖಿಲ್ ತಿಳಿಸಿದ್ದಾರೆ.
ಕುರುಕ್ಷೇತ್ರದಲ್ಲಿನ ಕ್ಲೈಮ್ಯಾಕ್ಸ್ ಪೂರ್ವ ದೃಶ್ಯ ಉತ್ತಮವಾಗಿದ್ದು, ಅಲ್ಲಿ, ಕತ್ತಿ, ಭರ್ಜಿ,ಚಕ್ರ ಸೇರಿದಂತೆ ಸಾವಿರಾರು ಆಯುಧಗಳು ಹಾಗೂ ಸೈನಿಕರಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಯಾವಾಗಲು ಭಾವನಾತ್ಮಕ ಸನ್ನಿವೇಶಗಳು ಅವಶ್ಯಕತೆಯಿರುತ್ತದೆ, ಆದರೆ ಇದರಲ್ಲಿ ಅಭಿಮನ್ಯುವಿಗೆ, ಕುದುರೆ ಜೊತೆ ಭಾವನಾತ್ಮಕ ಸಂಬಂಧವಿರುತ್ತದೆ.  ಕುದುರೆ ಸವಾರಿ ಕಲಿತುಕೊಳ್ಳಲು ನಾನು ಬಹಳಷ್ಟು ತಯಾರಿ ತೆಗೆದುಕೊಂಡೆ, ಅನಂತರ ಪ್ರಾಣಿಯ ಜೊತೆ ಒಂದು ಬಂಧ ಬೆಸೆಯಿತು ಎಂದು ಹೇಳಿದ್ದಾರೆ.
ಕುರುಕ್ಷೇತ್ರ ಒಂದು ಮಹಾಕಾವ್ಯವಾಗಲಿದೆ ಎಂದು ನಿಖಿಲ್ ಭರವಸೆ ವ್ಯಕ್ತ ಪಡಿಸಿದ್ದಾರೆ. ಏಕೆಂದರೆ  ಕಂಪ್ಯೂಟರ್ ಗ್ರಾಫಿಕ್ಸ್ ನಲ್ಲಿ ಪರಿಣಿತಿ ಹೊಂದಿರುವ ದುರ್ಗಾ ಪ್ರಸಾದ್ ಅವರಂತ  ತಂತ್ರಜ್ಞರಿದ್ದಾರೆ, ಬಾಹುಬಲಿ ಸಿನಿಮಾದಲ್ಲಿ ಕೆಲಸ ಮಾಡಿರುವ ಅವರ ಅನುಭವ ಕುರುಕ್ಷೇತ್ರ ಉತ್ತಮವಾಗಿ ಮೂಡಿ ಬರಲು ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.
ಹಾಡಿಗಾಗಿ ಸೆಟ್ ನಿರ್ಮಾಣ ಮಾಡಲು ಕಿರಣ್ ರಾಜ್ ಸುಮಾರು ಒಂದೂವರೆ ತಿಂಗಳು ಸಮಯ ತೆಗೆದುಕೊಂಡಿದ್ದಾರೆ. ಪ್ರೇಕ್ಷಕರಿಗೆ ಕುರುಕ್ಷೇತ್ರದ ಕಥೆ ಬಗ್ಗೆ ಈಗಾಗಲೇ ತಿಳಿದಿದೆ.ಆದರೆ ಅದನ್ನು ಹೇಳುವ ರೀತಿ ವಿಭಿನ್ನವಾಗಿರುತ್ತದೆ. ಈ ಒಂದು ವಿಷಯಕ್ಕಾಗಿಯೇ ಬಾಹುಬಲಿಗೆ 400 ಕೋಟಿ ರು. ವೆಚ್ಚವಾಗಿರುವುದು, ಇಂದಿನಿ ಸಿನಿಮಾಗಳಿಗೆ ಹಣ ವ್ಯಯಿಸುವುದಷ್ಟೇ ಮುಖ್ಯವಾಗುವುದಿಲ್ಲ, ಅದನ್ನು ನಿರೂಪಿಸುವ ರೀತಿಯ ಕೂಡ ಮಹತ್ವ ಪಡೆದಿದೆ ಎಂಬುದು ನಿಖಿಲ್ ಅಭಿಪ್ರಾಯ.
ಸಿನಿಮಾಗಾಗಿ ನಿರ್ಮಾಪಕ ಮುನಿರತ್ನ ಹೆಚ್ಚು ಶ್ರಮ ವಹಿಸುತ್ತಿದ್ದಾರೆ.ಎಲ್ಲವೂ ಸರಿಯಾಗಿಯೇ ನಡೆಯಲಿದೆ ಎಂಬುದು ಅಭಿಮನ್ಯು ಪಾತ್ರಧಾರಿ  ನಿಖಿಲ್ ಆಶಯ, ಫೈಟಿಂಗ್ ಸನ್ನಿವೇಶಗಳಲ್ಲಿ ಡ್ಯೂಪ್ ಅನ್ನು ಹೊರಗಿಡಲು ಪ್ರಯತ್ನಿಸಿದ್ದೇನೆ, ಈ ಪಾತ್ರಕ್ಕಾಗಿ ನಾನು ತುಂಬಾ ಶ್ರಮ ವಹಿಸಿದ್ದೇನೆ ಎಂದು ಹೇಳಿದ್ದಾರೆ. ಕುರುಕ್ಷೇತ್ರ ನಂತರ ನಿಖಿಲ್ ನವೆಂಬರ್ ನಲ್ಲಿ ಮತ್ತೊಂದು ಸಿನಿಮಾ ಶೂಟಿಂಗ್ ಆರಂಭವಾಗಲಿದೆ.

Related Stories

No stories found.

Advertisement

X
Kannada Prabha
www.kannadaprabha.com