ಕನ್ನಡ ರಾಜ್ಯೋತ್ಸವ: ಪುನೀತ್ ಹಾಡಿದ ಅಣ್ಣಾವ್ರ ಹಾಡು ವೈರಲ್

ಕನ್ನಡದ ಖ್ಯಾತ ನಟ ಡಾ. ರಾಜ್ ಕುಮಾರ್ ಅವರ ಪುತ್ರರಾದ ಪುನೀತ್ ರಾಜ್‍ ಕುಮಾರ್ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಹಾಡಿರುವ ಹಾಡಿನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪುನೀತ್ ರಾಜ್‍ ಕುಮಾರ್
ಪುನೀತ್ ರಾಜ್‍ ಕುಮಾರ್
Updated on: 
ಬೆಂಗಳೂರು: ಕನ್ನಡದ ಖ್ಯಾತ ನಟ ಡಾ. ರಾಜ್ ಕುಮಾರ್ ಅವರ ಪುತ್ರರಾದ ಪುನೀತ್ ರಾಜ್‍ ಕುಮಾರ್ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಹಾಡಿರುವ ಹಾಡಿನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
ಡಾ. ರಾಜ್ ಅಭಿನಯದ 'ಚಲಿಸುವ ಮೋಡಗಳು' ಚಿತ್ರದ "ಜೇನಿನ ಹೊಳೆಯೊ ಹಾಲಿನ ಮಳೆಯೊ..."  ಹಾಡನ್ನು ಹಾಡಿದ್ದ ಪುನೀತ್ ವೀಡಿಯೋವನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. 
"ಅಪ್ಪಾಜಿ ಹಾಡಿರುವ ಈ ಅದ್ಭುತ ಸಾಲುಗಳು ಕನ್ನಡ ರಾಜ್ಯೋತ್ಸವಕ್ಕೆ ನನ್ನದ್ದೊಂದು ಚಿಕ್ಕ ಉಡುಗೊರೆ! ಜೈ ಕರ್ನಾಟಕ ಮಾತೆ" ಎನ್ನುವ ಸಾಲುಗಳೊಂದಿಗೆ ವೀಡಿಯೋ ಹಾಕಿರುವ ಪುನೀತ್ ರ ಈ ವೀಡಿಯೋವನ್ನು ಇದುವರೆಗೆ 11 ಸಾವಿರಕ್ಕಿಂತಲೂ  ಹೆಚ್ಚು ಜನ ಲೈಕ್ ಮಾಡಿದ್ದಾರೆ. 4 ಸಾವಿರಕ್ಕೂ ಹೆಚ್ಚು ಜನ ಶೇರ್ ಮಾಡಿದ್ದಾರೆ.
ಇಂದು ಬೆಳಗ್ಗೆ 9ಕ್ಕೆ ಪುನೀತ್ ಈ ವೀಡಿಯೋವನ್ನು ಫೇಸ್ ಬುಕ್ ಗೆ ಹಾಕಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com