1961ರಲ್ಲಿ ಯಯಾತಿ ನಾಟಕ ರಚನೆ ಮಾಡಿದ್ದ ಕಾರ್ನಾಡರು, ಬಳಿಕ 1964ರಲ್ಲಿ "ತುಘಲಕ್" ಬರೆದಿದ್ದರು. 1971ರಲ್ಲಿ ರಚನೆಯಾದ ಹಯವದನ ಕಾರ್ನಾಡರಿಗೆ ಸಾಕಷ್ಚು ಹೆಸರು ತಂದುಕೊಟ್ಟಿತು. 1988ರಲ್ಲಿ ಅವರು ಬರೆದಿದ್ದು ನಾಗ-ಮಂಡಲ ಮತ್ತು 1990ರಲ್ಲಿ ಮೂಡಿಬಂದ "ತಲೆದಂಡ" ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿತ್ತು. ಸಾಹಿತ್ಯ ಮತ್ತು ಇತರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಕಾರ್ನಾಡ್ ಅವರು, ಪದ್ಮಶ್ರೀ ಮತ್ತು ಪದ್ಮ ಭೂಷಣ ಪ್ರಶಸ್ತಿ ಸ್ವೀಕರಿಸಿದ್ದಾರೆ.