'ದಿ ವಿಲನ್' ಹಾಲಿವುಡ್ ಚಿತ್ರ ಫೇಸ್ ಆಫ್ ರಿಮೇಕ್?: ಅಲ್ಲ ಎಂದ ಜೋಗಿ ಪ್ರೇಮ್

ಅಭಿನಯ ಚಕ್ರವರ್ತಿ ಸುದೀಪ್ ಹುಟ್ಟು ಹಬ್ಬ ಪ್ರಯುಕ್ತ ದಿ ವಿಲನ್ ಚಿತ್ರದ ಮೋಷನ್ ಪೋಸ್ಟರ್ ವಿಡಿಯೋವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಈ ವಿಡಿಯೋ...
ಆ್ಯಮಿ ಜಾಕ್ಸನ್-ಪ್ರೇಮ್
ಆ್ಯಮಿ ಜಾಕ್ಸನ್-ಪ್ರೇಮ್
Updated on: 
ಅಭಿನಯ ಚಕ್ರವರ್ತಿ ಸುದೀಪ್ ಹುಟ್ಟು ಹಬ್ಬ ಪ್ರಯುಕ್ತ ದಿ ವಿಲನ್ ಚಿತ್ರದ ಮೋಷನ್ ಪೋಸ್ಟರ್ ವಿಡಿಯೋವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಈ ವಿಡಿಯೋ ಯೂಟ್ಯೂಬ್ ನಲ್ಲಿ ಸಂಚಲನ ಸೃಷ್ಟಿಸುತ್ತಿದ್ದಂತೆ ಟೀಕೆಗೆ ಗುರಿಯಾಗಿದೆ. 
ಚಿತ್ರದ ಮೋಷನ್ ಪೋಸ್ಟರ್ ವಿಡಿಯೋ ನೋಡುತ್ತಿದ್ದರೆ 1997ರಲ್ಲಿ ಬಿಡುಗಡೆಯಾಗಿದ್ದ ಹಾಲಿವುಡ್ ನ ಬ್ಲಾಕ್ ಬಸ್ಟರ್ ಫೇಸ್ ಆಫ್ ಚಿತ್ರದ ಅವತರಿಣಿಕೆ ಎಂಬಂತೆ ಗೋಚರಿಸುತ್ತಿದೆ ಎಂದು ಕೆಲವರು ಟೀಕಿಸುತ್ತಿದ್ದಾರೆ. ಸದ್ಯ ದಿ ವಿಲನ್ ಚಿತ್ರ ತಂಡ ಚಿಕ್ಕಮಗಳೂರಿನಲ್ಲಿ ಬಿಡು ಬಿಟ್ಟಿದ್ದು ಚಿತ್ರದ ಮೋಷನ್ ಪೋಸ್ಟರ್ ವಿಡಿಯೋ ಕುರಿತಂತೆ ನಿರ್ದೇಶಕ ಪ್ರೇಮ್ ಅವರನ್ನು ಪ್ರಶ್ನಿಸಿದ್ದಾಗ ಅವರು, ಈ ಆರೋಪವನ್ನು ತಳ್ಳಿಹಾಕಿದ್ದಾರೆ. 
ನಾವು ತಾಯಿಯನ್ನು ಅಮ್ಮ ಎಂದು ಕರೆಯುತ್ತೇವೆ. ಅದೇ ರೀತಿ ಜಗತ್ತಿನಲ್ಲಿ ವಿವಿಧ ಜನಾಂಗದವರು ವಿವಿಧ ರೀತಿಯಲ್ಲಿ ತಾಯಿಯನ್ನು ಬೇರೆ ಪದಗಳಿಂದ ಕರೆಯುತ್ತಾರೆ. ಹಾಗಂತ ತಾಯಿ ಅನ್ನೋ ಪದ ಬೇರೆಯದ್ದರಿಂದ ಕಾಫಿ ಮಾಡಿದಂತಾಗುತ್ತಾ? ಎಂದು ಪ್ರಶ್ನಿಸಿದ್ದಾರೆ. ಅದೇ ರೀತಿ ನನ್ನ ಚಿತ್ರದ ಮೋಷನ್ ಪೋಸ್ಟರ್ ನಲ್ಲಿ ವ್ಯಕ್ತಿಯೊಳಗಿನ ವ್ಯಕ್ತಿತ್ವವನ್ನು ತೋರಿಸಲು ನಾನು ಬಯಸಿದ್ದೇ ಅದೇ ರೀತಿ ತೋರಿಸಿದ್ದೇನೆ ಎಂದು ಹೇಳಿದ್ದಾರೆ. 
ಇನ್ನು ಚಿತ್ರೀಕರಣದಲ್ಲಿ ಪಾಲ್ಗೋಳ್ಳುವ ಸಲುವಾಗಿ ಬ್ರಿಟನ್ ಮೂಲದ ಬೆಡಗಿ ಆ್ಯಮಿ ಜಾಕ್ಸನ್ ಕೂಡ ಚಿಕ್ಕಮಗಳೂರಿಗೆ ಆಗಮಿಸಿದ್ದಾರೆ. ಚಿಕ್ಕಮಗಳೂರಿನ ಸುಂದರ ತಾಣಗಳಲ್ಲಿ ಇಂದು ಸುದೀಪ್ ಮತ್ತು ಆ್ಯಮಿ ಜಾಕ್ಸನ್ ಜತೆಗಿರುವ ಹಾಡಿನ ದೃಶ್ಯಗಳನ್ನು ಸೆರೆಹಿಡಿಯುವ ಸಾಧ್ಯತೆ ಇದೆ. ಈಗಾಗಲೇ ಬಾಲಿವುಡ್ ನ ಹಿರಿಯ ನಟ ಮಿಥುನ್ ಚಕ್ರವರ್ತಿ ಶೂಟಿಂಗ್ ನಲ್ಲಿ ಪಾಲ್ಗೊಂಡು ತಮ್ಮ ಪಾಲಿನ ಕೆಲಸ ಮುಗಿಸಿಕೊಟ್ಟಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com