ಸಿನಿಮಾದ ಯಶಸ್ಸು- ವೈಫಲ್ಯ ನಿರ್ಧರಿಸುವುದು ನಾನಲ್ಲ: ಸೂರಿ

ನಿರ್ದೇಶಕ ಸೂರಿ ತಮ್ಮ ಹೆಚ್ಚಿನ ಸಮಯವನ್ನೆಲ್ಲಾ ಟಗರು ಸೆಟ್ ನಲ್ಲಿಯೇ ಕಳೆಯುತ್ತಿದ್ದಾರೆ. ಸಿನಿಮಾಗೆ ಸೂಕ್ತ...
ಟಗರು ಸಿನಿಮಾ ಸ್ಟಿಲ್
ಟಗರು ಸಿನಿಮಾ ಸ್ಟಿಲ್
Updated on: 
ಬೆಂಗಳೂರು: ನಿರ್ದೇಶಕ ಸೂರಿ ತಮ್ಮ ಹೆಚ್ಚಿನ ಸಮಯವನ್ನೆಲ್ಲಾ ಟಗರು ಸೆಟ್ ನಲ್ಲಿಯೇ ಕಳೆಯುತ್ತಿದ್ದಾರೆ.  ಸಿನಿಮಾಗೆ ಸೂಕ್ತ ನ್ಯಾಯ ಒದಗಿಸಲು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿರುವ ಸೂರಿ ಹೆಕ್ಟಿಕ್ ಷೆಡ್ಯೂಲ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.
ಎಷ್ಟು ಬೇಗ ಸಾದ್ಯವೋ ಅಷ್ಟು ಶೀಘ್ರವಾಗಿ ಶೂಟಿಂಗ್ ಮುಗಿಸಲು ಬಯಸಿರುವ ಸೂರಿ, ಉಡುಪಿಯಲ್ಲಿ ಕೊನೆ ಹಂತದ ಶೂಟಿಂಗ್ ನಡೆಸುತ್ತಿದ್ದಾರೆ.  ಮೊದಲು ಗೋವಾದಲ್ಲಿ ಶೂಟಿಂಗ್ ಮಾಡಲು ನಿರ್ಧರಿಸಲಾಗಿತ್ತು, ಆದರೆ ಆ ಪ್ಲ್ಯಾನ್ ಕೈ ಬಿಡಲಾಗಿದೆ. ಇತ್ತೀಚೆಗೆ ನಟ ದೇವರಾಜ್, ಶಿವಣ್ಣ ಮತ್ತು ಮಾನ್ವಿತಾ ಹರೀಶ್ ಅಭಿನಯದ ಮಹತ್ವದ ಸನ್ನಿವೇಶಗಳನ್ನು ಬೆಂಗಳೂರಿನಲ್ಲಿ ಚಿತ್ರೀಕರಿಸಿಲಾಗಿದೆ.  ಬೆಂಗಳೂರಿನ ಮತ್ತೊಂದು ಲೋಕೇಶನ್ ನಲ್ಲಿ ಶೂಟಿಂಗ್ ಮಾಡಲಾಗುವುದು ಎಂದು ಹೇಳಿದ್ದಾರೆ.
ಉಡುಪಿಯ ಕಲಾ ವಿಭಾಗದಲ್ಲಿ ಮುಂದಿನ ಮೂರು ದಿನಗಳಲ್ಲಿ ಮತ್ತಷ್ಟು  ಶೂಟಿಂಗ್ ನಡೆಸಲಾಗುವುದು,  ಬೆಂಗಳೂರಿನಲ್ಲಿ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯಲಿದೆ, ಸೂರಿ ಮೊದಲು 95 ದಿನಗಳ ಕಾಲ ಚಿತ್ರೀಕರಣ ನಡೆಸಲು ಯೋಜಿಸಿದ್ದರು. ಈಗಾಗಲೇ 80 ದಿನ ಶೂಟಿಂಗ್ ಮುಗಿದಿದ್ದು, ಚಿತ್ರೀಕರಣ ಪೂರ್ಣಗೊಳ್ಳಲು ಇನ್ನೂ 10-15 ದಿನಗಳು ಬೇಕಿದೆ ಎಂದು ಹೇಳಿದ್ದಾರೆ. ಜೊತೆಗೆ ಭಾವನಾ ಅವರ ಒಂದು ಹಾಡಿನ ಶೂಟಿಂಗ್ ಬಾಕಿಯಿರುವುದಾಗಿ ತಿಳಿಸಿದ್ದಾರೆ.
ಟಗರು ಸಿನಿಮಾ ಸಾಕಷ್ಟು ಸಮಯ ಹಿಡಿದಿದೆ. ಕಲಾವಿದರು, ತಂತ್ರಜ್ಞರು, ಹಾಗೂ ಕಥೆಗೆ ಇದು ಅಗತ್ಯವಿತ್ತು ಎಂದು ಹೇಳಿದ್ದಾರೆ. ಚಿತ್ರದ ಯಶಸ್ಸು ಮತ್ತು ವೈಫಲ್ಯದ ಬಗ್ಗೆ ನಿರ್ಧರಿಸಲು ನಾನಿಲ್ಲಿಲ್ಲ, ನಾನು ಕಲಿಯುವುದರಲ್ಲಿ ತುಂಬಾ ಸಂತೋಷ ಪಡುತ್ತೇನೆ ಎಂದು ಹೇಳಿದ್ದಾರೆ,.
ಶಿವರಾಜ್ ಕುಮಾರ್, ಭಾವನಾ, ಮಾನ್ವಿತಾ ಹರೀಶ್, ಹಾಗೂ ವಿಲ್ಲನ್ ಪಾತ್ರದಲ್ಲಿ ವಶಿಷ್ಟ ಸಿಂಹ ಮತ್ತು ಧನಂಜಯ್ ಅಭಿನಯಿಸಿದ್ದಾರೆ. ಕೆ.ಪಿ ಶ್ರೀಕಾಂತ್ ನಿರ್ಮಾಪಕರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com