ಆರವ್ ತಮಿಳು ಬಿಗ್‌ಬಾಸ್‌ ಮೊದಲ ಸೀಸನ್ ವಿನ್ನರ್

ತೀವ್ರ ಕೂತುಹಲ ಕೆರಳಿಸಿದ್ದ ತಮಿಳಿನ ಬಿಗ್ ಬಾಸ್ ಫೈನಲ್ ನಲ್ಲಿ ತಿರುಚಿ ಮೂಲದ ಮಾಡೆಲ್ ಆರವ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ...
ಆರವ್
ಆರವ್
ತೀವ್ರ ಕೂತುಹಲ ಕೆರಳಿಸಿದ್ದ ತಮಿಳಿನ ಬಿಗ್ ಬಾಸ್ ಫೈನಲ್ ನಲ್ಲಿ ತಿರುಚಿ ಮೂಲದ ಮಾಡೆಲ್ ಆರವ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. 
ತಮಿಳು ನಟ ಕಮಲ್ ಹಾಸನ್ ನಡೆಸಿಕೊಟ್ಟ ಬಿಗ್‌ಬಾಸ್‌ ಮೊದಲ ಸೀಸನ್ ನಲ್ಲಿ ಸ್ನೇಹನ್ ಅವರನ್ನು ಹಿಂದಿಕ್ಕಿ ಆರವ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಆರವ್ ಬಿಗ್‌ಬಾಸ್‌ ಟ್ರೋಫಿ ಹಾಗೂ 50 ಲಕ್ಷ ರುಪಾಯಿ ನಗದು ಬಹುಮಾನ ಪಡೆದಿದ್ದಾರೆ. 
ಸ್ನೇಹನ್ ದ್ವಿತೀಯ ಸ್ಥಾನ ಪಡೆದರೇ ಗಣೇಶ್ ವೆಂಕಟ್ ರಾಮನ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಜೂನ್ 25ರಂದು ಆರಂಭವಾಗಿದ್ದು ತಮಿಳಿನ ಬಿಗ್ ಬಾಸ್ ನಿನ್ನೆಗೆ ಮುಕ್ತಾಯವಾಗಿದೆ. 
ತಮಿಳಿನ ಬಿಗ್ ಬಾಸ್ ಮನೆಯಲ್ಲಿ ಸ್ಫರ್ಧಿ ಓವಿಯಾ ಸ್ವಿಮ್ಮಿಂಗ್ ಪೂಲ್ ಗೆ ಬಿದ್ದು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದರು. ಈ ಸುದ್ದಿ ತಮಿಳುನಾಡಿನಲ್ಲಿ ತೀವ್ರ ಕೋಲಾಹಲ ಉಂಟು ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com