ದರ್ಶನ್ , ಸುದೀಪ್
ಸಿನಿಮಾ ಸುದ್ದಿ
ಪ್ರವಾಹ ಪೀಡಿತ ಸಂತ್ರಸ್ತರ ನೆರವಿಗಾಗಿ ಸ್ಯಾಂಡಲ್ ವುಡ್ ನಟರಿಂದ ಮನವಿ
ಮಳೆಯ ರೌದ್ರವತಾರಕ್ಕೆ ಕೊಡಗು ಜಿಲ್ಲೆ ಅಕ್ಷರಶ : ನಲುಗಿ ಹೋಗಿದ್ದು, ಮನೆ ಮಠ ಕಳೆದುಕೊಂಡು ಸಂತ್ರಸ್ತರಾಗಿರುವವರಿಗೆ ನೆರವು ನೀಡುವಂತೆ ಸ್ಯಾಂಡಲ್ ವುಡ್ ನಟರು ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕೊಡಗು: ಮಳೆಯ ರೌದ್ರವತಾರಕ್ಕೆ ಕೊಡಗು ಜಿಲ್ಲೆ ಅಕ್ಷರಶ : ನಲುಗಿ ಹೋಗಿದ್ದು, ಮನೆ ಮಠ ಕಳೆದುಕೊಂಡು ಸಂತ್ರಸ್ತರಾಗಿರುವವರಿಗೆ ನೆರವು ನೀಡುವಂತೆ ಸ್ಯಾಂಡಲ್ ವುಡ್ ನಟರು ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮಳೆಯಿಂದ ಹಾನಿಯಾದ ಮಡಿಕೇರಿ ಮತ್ತು ಕರಾವಳಿಯ ನೆರವಿಗೆ ದೊಡ್ಮನೆ ಸದಾ ಸಿದ್ಧ ಎಂದು ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಹೇಳಿದ್ದಾರೆ.
ಮತ್ತೊಂದೆಡೆ ಸಂತ್ರಸ್ತರಿಗೆ ಅಗತ್ಯ ನೆರವು ನೀಡುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಅವರು ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
I request all my fans associations to please look into what best could be done to the rain affected areas of Karnataka. This is the best gift u all wil be giving me. Please please do ur best .. these are our people .. I also plead th government to do their best.

