ಹೌದು ಕೆಜಿಎಫ್ ಚಿತ್ರ ಬಿಡುಗಡೆಗೂ ಮುನ್ನವೇ ಲೀಕ್ ಆಗಿದೆ ಎನ್ನಲಾಗುತ್ತಿದೆ. ಲೀಕ್ ದೃಶ್ಯಗಳ ಸ್ಕ್ರಿನ್ ಶಾಟ್ ಹರಿದಾಡುತ್ತಿದೆ. ಹಿರಿಯ ನಟ ಅನಂತ್ ನಾಗ್ ಕುಳಿತ್ತಿರುವ ದೃಶ್ಯ ಹಾಗೂ ದಗ ದಗಿಸುತ್ತಿರುವ ಬೆಂಕಿಯ ಮುಂದೆ ಯಶ್ ನಡೆದುಕೊಂಡು ಬರುತ್ತಿರುವ ದೃಶ್ಯಗಳು ಸೋರಿಕೆಯಾಗಿವೆ ಎಂದು ಹೇಳಲಾಗುತ್ತಿದೆ. ಇನ್ನು ಪೈರಸಿಗಳ ವಿರುದ್ಧ ಹೋರಾಡಲು ಒಂದು ತಂಡವನ್ನೇ ಕೆಜಿಎಫ್ ಚಿತ್ರತಂಡ ಸಿದ್ಧಪಡಿಸಿದೆ ಎನ್ನಲಾಗಿದೆ.