100 ಕೋಟಿ ಕ್ಲಬ್ ಆಯ್ತು, ಈಗ 150 ಕೋಟಿ ಕ್ಲಬ್ ಸೇರುವ ತಯಾರಿಯಲ್ಲಿ ಕೆಜಿಎಫ್!
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಭಾರತದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇನ್ನು ಆರನೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ್ದ ಕೆಜಿಎಫ್ ಚಿತ್ರ ಇದೀಗ 150 ಕೋಟಿ ಕ್ಲಬ್ ಸೇರುವ...
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಭಾರತದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇನ್ನು ಆರನೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ್ದ ಕೆಜಿಎಫ್ ಚಿತ್ರ ಇದೀಗ 150 ಕೋಟಿ ಕ್ಲಬ್ ಸೇರುವ ತಯಾರಿಯಲ್ಲಿದೆ.
ಹೌದು, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಿತ್ರ 100 ಕೋಟಿ ಗಳಿಸುವ ಮೂಲಕ ಕನ್ನಡ ಚಿತ್ರವೊಂದು ಈ ಕ್ಲಬ್ ಸೇರಿದ ಮೊದಲ ಚಿತ್ರವಾಗಿದೆ. ಚಿತ್ರ ಬಿಡುಗಡೆಯಾಗಿ 6 ದಿನ ಕಳೆದರೂ ಇನ್ನು ಚಿತ್ರವನ್ನು ನೋಡಲು ಥಿಯೇಟರ್ ಗಳತ್ತ ಪ್ರೇಕ್ಷಕರು ದಾಂಗುಡಿ ಹಿಡುತ್ತಿರುವುದರಿಂದ ಚಿತ್ರದ ಕಲೆಕ್ಷನ್ ಸಹ ಜೋರಾಗಿದೆ.
ಒಟ್ಟಿನಲ್ಲಿ 7 ದಿನದ ಮುಕ್ತಾಯಕ್ಕೆ ಕೆಜಿಎಫ್ ಚಿತ್ರ 113 ಕೋಟಿ ರುಪಾಯಿ ಗಳಿಸಿದೆ. ಇನ್ನು ವಾರಾಂತ್ಯದ ಈ ಮೂರು ದಿನಗಳಲ್ಲಿ ಕೆಜಿಎಫ್ ಚಿತ್ರ 150 ಕೋಟಿ ರುಪಾಯಿ ಕ್ಲಬ್ ಸೇರುವುದು ಪಕ್ಕಾ ಎಂಬುದು ಸಿನಿಮಾ ತಜ್ಞರ ಲೆಕ್ಕಾಚಾರವಾಗಿದೆ.
ಇನ್ನು ಬಿಡುಗಡೆಯಾದ 6 ದಿನಗಳಲ್ಲಿ ಹಿಂದಿ ಭಾಷೆಯಲ್ಲೇ ಇದುವರೆಗೂ 21.46 ಕೋಟಿ ರುಪಾಯಿ ಗಳಿಸಿರುವ ಕೆಜಿಎಫ್ ಹೊಸ ದಾಖಲೆ ನಿರ್ಮಿಸಿದೆ. ಒಟ್ಟಿನಲ್ಲಿ ಚಿತ್ರದ ಬಗ್ಗೆ ಪ್ರೇಕ್ಷಕರು ಸಹ ಒಳ್ಳೆಯ ಮಾತುಗಳನ್ನು ಆಡುತ್ತಿರುವುದರಿಂದ ಫ್ಯಾಮಿಲಿ ಆಡಿಯೇನ್ ಸಹ ಚಿತ್ರಮಂದಿರಗಳಿಗೆ ಬರುತ್ತಿದ್ದಾರೆ.
#KGF shows solid trending... Day 6 is higher than Day 1, which indicates that the positive word of mouth has come into play... Fri 2.10 cr, Sat 3 cr, Sun 4.10 cr, Mon 2.90 cr, Tue 4.35 cr, Wed 2.60 cr. Total: ₹ 19.05 cr. India biz. Note: HINDI version.