'ಜಿಎಸ್ ಟಿ' ಬಗ್ಗೆ ಪೊಲೀಸರ ವಿಚಾರಣೆ ಫೋಟೋ ಹಂಚಿಕೊಂಡು ಸಂಭ್ರಮಪಟ್ಟ ರಾಮ್ ಗೋಪಾಲ್ ವರ್ಮಾ!

'ಗಾಡ್, ಸೆಕ್ಸ್ ಅಂಡ್ ಟ್ರುತ್' ಸಿನಿಮಾವನ್ನು ಅಶ್ಲೀಲವಾಗಿ ತೋರಿಸಲಾಗಿದೆ ಎಂಬ ದೂರಿಗೆ ಸಂಬಂಧಪಟ್ಟಂತೆ ಮತ್ತು ಮಹಿಳಾ
ಸೈಬರ್ ಅಪರಾಧ ತಂಡದ ಪೊಲೀಸರು ಹೈದರಾಬಾದ್ ನಲ್ಲಿ ರಾಮ್ ಗೋಪಾಲ್ ವರ್ಮ ಅವರನ್ನು ವಿಚಾರಣೆಗೊಳಪಡಿಸಿರುವುದು
ಸೈಬರ್ ಅಪರಾಧ ತಂಡದ ಪೊಲೀಸರು ಹೈದರಾಬಾದ್ ನಲ್ಲಿ ರಾಮ್ ಗೋಪಾಲ್ ವರ್ಮ ಅವರನ್ನು ವಿಚಾರಣೆಗೊಳಪಡಿಸಿರುವುದು
ಹೈದರಾಬಾದ್: 'ಗಾಡ್, ಸೆಕ್ಸ್ ಅಂಡ್ ಟ್ರುತ್' ಸಿನಿಮಾವನ್ನು ಅಶ್ಲೀಲವಾಗಿ ತೋರಿಸಲಾಗಿದೆ ಎಂಬ ದೂರಿಗೆ ಸಂಬಂಧಪಟ್ಟಂತೆ ಮತ್ತು ಮಹಿಳಾ ಕಾರ್ಯಕರ್ತೆ ದೇವಿ ವಿರುದ್ಧ ನಿಂದನಕಾರಿ ಹೇಳಿಕೆಗೆ ಸಂಬಂಧಪಟ್ಟಂತೆ ಹೈದರಾಬಾದ್ ಪೊಲೀಸ್ ಠಾಣೆ ಮುಂದೆ ವಿಚಾರಣೆಗೆ ಚಿತ್ರನಿರ್ಮಾಪಕ ಹಾಗೂ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹಾಜರಾಗಿದ್ದರು.
 ಪೊಲೀಸ್ ಠಾಣೆಯಲ್ಲಿ ಸುಮಾರು ಮೂರೂವರೆ ಗಂಟೆಗಳ ಕಾಲ ರಾಮ್ ಗೋಪಾಲ್ ವರ್ಮಾ ಅವರನ್ನು ವಿಚಾರಣೆಗೊಳಪಡಿಸಲಾಯಿತು. ಅವರ ಲ್ಯಾಪ್ ಟಾಪ್ ಗಳನ್ನು ವಶಪಡಿಸಿಕೊಂಡು ಮುಂದಿನ ಶುಕ್ರವಾರ ಮತ್ತೆ ವಿಚಾರಣೆಗೆ ಪೊಲೀಸರ ಮುಂದೆ ಹಾಜರಾಗುವಂತೆ ನಿರ್ದೇಶಿಸಲಾಯಿತು. ಎರಡನೇ ಸಲ ನೊಟೀಸ್ ಬಂದ ಮೇಲೆ ವರ್ಮಾ ನಿನ್ನೆ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದರು.
ವಿಚಾರಣೆ ಮುಗಿಸಿ ಪೊಲೀಸ್ ಠಾಣೆಯಿಂದ ಹೊರಬರುತ್ತಿದ್ದಂತೆ ವರ್ಮಾ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಎರಡು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಒಂದು ಮೂವರು ಪೊಲೀಸ್ ಅಧಿಕಾರಿಗಳು ವಿಚಾರಣೆ ಮಾಡುತ್ತಿರುವುದು, ಮತ್ತೊಂದು ಪೊಲೀಸ್ ಠಾಣೆಯಿಂದ ಹೊರಬರುತ್ತಿರುವುದು. ಮೊದಲ ಫೋಟೋಗೆ ಸಿಸಿಎಸ್ ತಂಡದ ವೃತ್ತಿಪರತೆಯನ್ನು ಕಂಡು ಪುಳಕಿತಗೊಂಡಿದ್ದೇನೆ ಮತ್ತು ಖುಷಿಪಟ್ಟಿದ್ದೇನೆ ಎಂದಿದ್ದಾರೆ.
ಮತ್ತೊಂದು ಫೋಟೋಗೆ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಲು ನಾನು ನಿಜಕ್ಕೂ ಇಷ್ಟಪಡುತ್ತೇನೆ, ನನ್ನನ್ನು ಪೊಲೀಸ್ ಪಾತ್ರಕ್ಕೆ ಪರಿಗಣಿಸುವಂತೆ ಎಲ್ಲಾ ನಿರ್ದೇಶಕರಿಗೆ ಮನವಿ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಆರೋಪಿಯನ್ನು ವಿಚಾರಣೆ ನಡೆಸುವಾಗ ಫೋಟೋ ತೆಗೆಯಲು ಬಿಡಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಹೆಚ್ಚುವರಿ ಡಿಸಿಪಿ ರಘುವೀರ್, ಸಾಮಾಜಿಕ ಮಾಧ್ಯಮದಲ್ಲಿ ಅಂತಹ ಫೋಟೋಗಳನ್ನು ಪೋಸ್ಟ್ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಕೆಲವು ಮಾಧ್ಯಮ ಪ್ರತಿನಿಧಿಗಳು ಫೋಟೋ ತೆಗೆದು ಅದನ್ನು ರಾಮ್ ಕೋಪಾಲ್ ವರ್ಮಾ ಜೊತೆಗೆ ಹಂಚಿಕೊಂಡಿದ್ದಾರೆ. ಅದನ್ನವರು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ ಎಂದಿದ್ದಾರೆ. 
ಈ ಮಧ್ಯೆ ಟ್ವಿಟ್ಟರ್ ನಲ್ಲಿ ರಾಮ್ ಗೋಪಾಲ್ ವರ್ಮಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಪುರಿ ಜಗನ್ನಾಥ್, ಸರ್, ಚಿತ್ರಕಥೆ ಸಿದ್ದವಾಗಿದೆ. ನಿಮ್ಮ ದಿನಾಂಕಕ್ಕಾಗಿ ಕಾಯುತ್ತಿದ್ದೇನೆ ಎಂದು ಬರೆದಿದ್ದಾರೆ. ಈ ಎರಡೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಚಾರಣೆ ವೇಳೆ ಪೊಲೀಸರು ಅಮೆರಿಕನ್ ಪೋರ್ನ್ ಸ್ಟಾರ್ ಮಿಯಾ ಮಿಲ್ಕೊವಾ ಹೇಗೆ ಸಂಪರ್ಕಕ್ಕೆ ಸಿಕ್ಕಿದರು, ಅವರನ್ನಿಟ್ಟುಕೊಂಡು ವಯಸ್ಕರ ಚಿತ್ರ ಹೇಗೆ ಮಾಡಿದಿರಿ, ಏಕೆ ಮಾಡಿದಿರಿ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ರಾಮ್ ಗೋಪಾಲ್ ವರ್ಮಾ, ಇಂಟರ್ನೆಟ್ ಗಾಗಿ ಪೊಲೆಂಡ್ ನಲ್ಲಿ ಗಾಡ್, ಸೆಕ್ಸ್ ಅಂಡ್ ಟ್ರುತ್ ಎಂಬ ಸಿನಿಮಾ ಮಾಡಿದೆನು ಎಂದರು. ಮಹಿಳಾ ಕಾರ್ಯಕರ್ತೆ ದೇವಿ ವಿರುದ್ಧ ಉದ್ದೇಶಪೂರ್ವಕವಾಗಿ ಯಾವುದೇ ನಿಂದನಕಾರಿ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವರ್ಮ ವಿರುದ್ಧ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 67ರಡಿಯಲ್ಲಿ ಕೇಸು ದಾಖಲಿಸಲಾಗಿದ್ದು ಮುಂದಿನ ಶುಕ್ರವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com