ವಿಕೃತ ಕಾಮಿ ಸೈಕೋ ಜೈಶಂಕರ್ ಕುರಿತು ಸ್ಯಾಂಡಲ್'ವುಡ್'ನಲ್ಲಿ ನಿರ್ಮಾಣವಾಗಿತ್ತು ಸಿನಿಮಾ

ಮಹಿಳೆಯರ ಪಾಲಿನ ಆತಂಕವಾದಿಯಾಗಿದ್ದ ವಿಕೃತ ಕಾಮಿ ಸೈಕೋ ಜೈಶಂಕರ್ ಕುರಿತು ಸ್ಯಾಂಡಲ್ ವುಡ್ ನಲ್ಲಿ ಚಿತ್ರವೊಂದನ್ನು ನಿರ್ಮಾಣ ಮಾಡಲಾಗಿತ್ತು...
ವಿಕೃತ ಕಾಮಿ ಸೈಕೋ ಜೈಶಂಕರ್ ಕುರಿತು ಸ್ಯಾಂಡಲ್'ವುಡ್'ನಲ್ಲಿ ನಿರ್ಮಾಣವಾಗಿತ್ತು ಸಿನಿಮಾ
ವಿಕೃತ ಕಾಮಿ ಸೈಕೋ ಜೈಶಂಕರ್ ಕುರಿತು ಸ್ಯಾಂಡಲ್'ವುಡ್'ನಲ್ಲಿ ನಿರ್ಮಾಣವಾಗಿತ್ತು ಸಿನಿಮಾ
ಬೆಂಗಳೂರು: ಮಹಿಳೆಯರ ಪಾಲಿನ ಆತಂಕವಾದಿಯಾಗಿದ್ದ ವಿಕೃತ ಕಾಮಿ ಸೈಕೋ ಜೈಶಂಕರ್ ಕುರಿತು ಸ್ಯಾಂಡಲ್ ವುಡ್ ನಲ್ಲಿ ಚಿತ್ರವೊಂದನ್ನು ನಿರ್ಮಾಣ ಮಾಡಲಾಗಿತ್ತು. 
ಸೈಕೋ ಶಂಕರ್ ಎಂಬ ಅಪರಾಧಿ ಜೈಲಿನಿಂದ ತಪ್ಪಿಸಿಕೊಂಡ ನೈಜ ಘಟನೆಯನ್ನು ಆಧರಿಸಿ ನಿರ್ದೇಶಕ ಪುನೀತ್ ಆರ್ಯ ಸೈಕೋ ಶಂಕ್ರ ಎಂಬ ಹೆಸರಿನಲ್ಲಿ ಚಿತ್ರವನ್ನು ನಿರ್ದೇಶಿಸಿದ್ದರು. ಶಂಕರ್ ಜೈಲಿನಿಂದ ತಪ್ಪಿಸಿಕೊಂಡ ಅವಧಿಯಲ್ಲಿಯೇ ಎಸಗಿದ್ದ ಎರಡು ಅಪರಾಧ ಪ್ರಕರಣಗಳನ್ನು ನಿರ್ದೇಶಕ ಕಥೆಗೆ ಪೂರಕವಾಗಿ ಬಳಸಿಕೊಂಡು ಚಿತ್ರವನ್ನು ನಿರ್ಮಾಣ ಮಾಡಿದ್ದರು. 
ಚಿತ್ರದಲ್ಲಿ ವನರಸನ್, ಶರತ್ ಲೋಹಿತಾಶ್ವ, ಯಶಸ್ ಸೂರ್ಯ, ವಿಜಯ್ ಚೆಂಡೂರು, ಪ್ರಣವ್, ಅಮೃತಾ ರಾಮಮೂರ್ತಿ ಹಾಗೂ ರಿಷಿಕಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. 
ಫೆ.27ರ ಮಧ್ಯರಾತ್ರಿ 2.15ರ ಸುಮಾರಿಗೆ ಸೆಲ್ ನಲ್ಲಿ ಜೈಶಂಕರ ಬ್ಲೇಡ್ ನಿಂದ ಕತ್ತು ಕೊಯ್ಡುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಆಗ ರಾತ್ರಿ ಪಾಳಿಯ ಸಿಬ್ಬಂದಿ, ಸೆಲ್ ಗಳ ಪರಿಶೀಲನೆಗೆ ತೆರಳಿದಾಗ ರಕ್ತದ ಮಡುವಿನಲ್ಲಿ ಆತನನ್ನು ಕಂಡಿದ್ದಾನೆ. ಕೂಡಲೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಸಿಬ್ಬಂದಿ, ಜೈಶಂಕರ್ ನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಆತ ಕೊನೆಯುಸಿರೆಳೆದಿದ್ದ. 
ತಮಿಳುನಾಡಿನ ಈಡಪ್ಪಾಡಿ ತಾಲ್ಲೂಕು ಕಟ್ಟುವಾಳ್ ಕನ್ನಿಯಾಪಟ್ಟಿ ಗ್ರಾಮದ ಜೈ ಶಂಕರ್, ವೃತ್ತಿಯಲ್ಲಿ ಚಾಲಕನಾಗಿದ್ದ. ಬಳಿಕ ತನ್ನ ಸಂಬಂಧಿಕ ಯುವತಿ ಜೊತೆಗೆ ವಿವಾಹವಾಗಿದ್ದ. ಆತನಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಕೌಟುಂಬಿಕ ಕಲಹದಿಂದ ಪತ್ನಿಯಿಂದ ಪ್ರತ್ಯೇಕವಾದ ಬಳಿಕ ಆವನ ಬದುಕು ದುಸ್ತರವಾಗಿತ್ತು. ತನ್ನನ್ನು ತಿರಸ್ಕರಿಸಿದ್ದ ಪತ್ನಿ ಮೇಲೆ ಆತನ ದ್ವೇಷಾಗ್ನಿಗೆ ಹಲವು ಮಹಿಳೆಯರು ಬಲಿಯಾಗಿದ್ದು ಮಾತ್ರ ದುರಂತವೇ ಸರಿ. 2009-11ರಲ್ಲಿ ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳ ಮಹಿಳೆಯರ ಪಾಲಿಗೆ ಸೈಕೋ ಜೈಶಂಕರ್ ಆತಂಕವಾದಿಯಾಗಿ ಪರಿಣಮಿಸಿದ್ದ. 
ಒಂಟಿ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಪಾತಕ ಕೃತ್ಯ ಎಸಗುತ್ತಿದ್ದ ಶಂಕರ, ತನ್ನ ಬಲೆಗೆ ಬಿದ್ದ ಮಹಿಳೆಯರ ಮೇಲಿನ ಕ್ರೌರ್ಯ ಹೇಳತೀರದಾಗಿತ್ತು. 2009ರ ಜುಲೈ3 ರಂದು ಹೊಸೂರಿನ ಪರಂಡಹಳ್ಳಿಯಲ್ಲಿ 45 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಂದಿದ್ದ, ಇದು ಜೈಶಂಕರನ ರಕ್ತಚರಿತ್ರೆಯ ಮೊದಲ ಅಧ್ಯಾಯವಾಗಿತ್ತು. 
ಪೆರಂಡಹಳ್ಳಿ ಘಟನೆ ನಡೆದ ಒಂದೂವರೆ ತಿಂಗಳುಗಳಲ್ಲಿ ಕಂಗೆಯಂ ಠಾಣೆಯ ಕರ್ತವ್ಯನಿರತ ಮಹಿಳಾ ಪೇದೆ ಅಪಹರಿಸಿ ಲೈಂಗಿಕವಾಗಿ ಹಿಂಸಿಸಿ ಹತ್ಯೆಗೈದಿದ್ದ. ಅಂದಿನ ತಮಿಳುನಾಡಿನ ಉಪಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಪೆರುಮನಲ್ಲೂರಿಗೆ ಭೇಟಿ ನೀಡಿದ್ದರು. ಈ ಹಿನ್ನಲೆಯಲ್ಲಿ ಬಂದೋಬಸ್ತ್ ಗೆ ಪೇದೆ ನಿಯೋಜನೆಗೊಂಡಿದ್ದರು. ಅಲ್ಲಿಂದಲೇ ಮಹಿಳಾ ಪೇದೆಯನ್ನು ಅಪಹರಿಸಿದ್ದ.
ಮಹಿಳೆಯರ ಸರಣಿ ಕೊಲೆಗಳಿಂದ ತಮಿಳುನಾಡಿನ ಕೆಲ ಭಾಗದ ನಾಗರೀಕರಿಗೆ ಸೈಕೋ ಕಿಲ್ಲರ್ ಭಯ ಸೃಷ್ಟಿಯಾಗಿತ್ತು. ಕೊನೆಗೆ 2009ರ ಆ.9ರಂದು ಮೊದಲ ಬಾರಿಗೆ ಶಂಕರನನ್ನು ಬಂಧನಕ್ಕೊಳಪಡಿಸುವಲ್ಲಿ ತಿರುಪೂರ್ ಪೊಲೀಸರ ತಂಡ ಯಶಸ್ಸು ಕಂಡಿತ್ತು. ಅಷ್ಟರಲ್ಲೇ 13 ಕಡೆ ಅಪರಾಧ ಕೃತ್ಯಗಳನ್ನು ಶಂಕರ ಎಸಗಿದ್ದ. 
ಬಳಿಕ ಕೊಯಮತ್ತೂರು ಸೆಂಟ್ರಲ್ ನಲ್ಲಿದ್ದ ಶಂಕರ್ ನನ್ನು 2011ರ ಮಾ.18ರಂದು ಸೇಲಂ ನ್ಯಾಯಾಲಯಕ್ಕೆ ಪೊಲೀಸರು ಕರೆದೊಯ್ದಿದ್ದರು. ಆಗ ಬೆಂಗಾವಲು ಸಿಬ್ಬಂದಿಗೆ ಚಳ್ಳೆ ಹಣ್ಣು ತಿನ್ನಿಸಿ ಸೇಲಂ ಬಸ್ ನಿಲ್ದಾಣದಿಂದ ತಪ್ಪಿಸಿಕೊಂಡಿದ್ದ. ಜೈಶಂಕರ್ ನನ್ನು ಕರೆದೊಯ್ಯಿತ್ತಿದ್ದ ಎಂ. ಚಿನ್ನಸ್ವಾಮಿ ಎಂಬುವವರು ತನಿಖೆಗೆ ಹೆದರಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. 
ಸೇಲಂನಿಂದ ಲಾರಿ ಹತ್ತಿ ಕರ್ನಾಟಕ ರಾಜ್ಯಕ್ಕೆ ಆಗಮಿಸಿದ್ದ ಜೈಶಂಕರ, ಒಂದೂವರೆ ತಿಂಗಳು ಅವಧಿಯಲ್ಲೇ ಚಿತ್ರದುರ್ಗ, ತುಮಕೂರು ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಐವರು ಮಹಿಳೆಯರ ಮೇಲೆ ಘೋರ ಕೃತ್ಯಗಳನ್ನು ಎಸಗಿದ್ದ. 
ಅದರಲ್ಲೂ ಚಿತ್ರದುರ್ಗದಲ್ಲಿ ಗಂಡನ ಎದುರೇ ಪತ್ನಿಯೇ ಮೇಲೆ ಅತ್ಯಾಚಾರ ನಡೆಸಿ ಕ್ರೌರ್ಯ ಮೆರೆದಿದ್ದ. 2011ರ ಮೇ. 5 ರಂದು ವಿಜಯಪುರದ ಏಳಗಿ ಗ್ರಾಮಕ್ಕೆ ಹೋಗಿದ್ದ ಜೈಶಂಕರ, ಅಲ್ಲಿ ಗದ್ದೆಯಲ್ಲಿ ಏಕಾಂಗಿಯಾಗಿ ಕೆಲಸ ಮಾಡುತ್ತಿದ್ದ ಚಂದ್ರಕಲಾ ಎಂಬುವವರ ಮೇಲೆ ಎರಗಿದ್ದ. ಆದರೆ, ಆ ವೇಳೆ ಆಕೆ ಚೀರಾಟ ಕೇಳಿ ರಕ್ಷಣೆಗೆ ಧಾವಿಸಿದ್ದ ಅಕ್ಕಪಕ್ಕದ ಜಮೀನಿನಲ್ಲಿದ್ದ ರೈತರು, ಶಂಕರನನ್ನು ಹಿಡಿದು ಮನಬಂದಂತೆ ಥಳಿಸಿದ್ದರು. ಆಗ ಆತನನ್ನು ವಶಕ್ಕೆ ಪಡೆದ ಪೊಲೀಸರು, ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾ ಆತನ ಇತಿಹಾಸ ಕೇಳಿ ಬೇಸ್ತು ಬಿದ್ದಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com