ನಟ ಕಿಚ್ಚಾ ಸುದೀಪ್ ಮತ್ತು ಪತ್ನಿ ಪ್ರಿಯಾ (ಸಂಗ್ರಹ ಚಿತ್ರ)
ಸಿನಿಮಾ ಸುದ್ದಿ
ಪತ್ನಿ ಪ್ರಿಯಾ ಜನ್ಮದಿನಕ್ಕೆ ಕಿಚ್ಚಾ ಸುದೀಪ್ ಶುಭಾಶಯ; ಶುಭ ಸುದ್ದಿ ಏನಾದ್ರು ಇದೆಯಾ?
ಪ್ರೀತಿಯ ಮಡದಿ ಪ್ರಿಯಾ ಹುಟ್ಟುಹಬ್ಬಕ್ಕೆ ನಟ ಕಿಚ್ಚಾ ಸುದೀಪ್ ವಿಶೇಷವಾಗಿ ಶುಭ ಕೋರಿದ್ದು, ಮಡದಿ ಜೊತೆಗಿರುವ ಫೋಟೋವನ್ನು ಟ್ವೀಟ್ ಮಾಡಿ ಜನ್ಮ ದಿನದ ಶುಭ ಕೋರಿದ್ದಾರೆ.
ಬೆಂಗಳೂರು: ಪ್ರೀತಿಯ ಮಡದಿ ಪ್ರಿಯಾ ಹುಟ್ಟುಹಬ್ಬಕ್ಕೆ ನಟ ಕಿಚ್ಚಾ ಸುದೀಪ್ ವಿಶೇಷವಾಗಿ ಶುಭ ಕೋರಿದ್ದು, ಮಡದಿ ಜೊತೆಗಿರುವ ಫೋಟೋವನ್ನು ಟ್ವೀಟ್ ಮಾಡಿ ಜನ್ಮ ದಿನದ ಶುಭ ಕೋರಿದ್ದಾರೆ.
ಜನವರಿ 6 ಸುದೀಪ್ ಪತ್ನಿ ಪ್ರಿಯಾ ಅವರ ಜನ್ಮ ದಿನವಾಗಿದ್ದು, ಇಂದು ಮುಂಜಾನೆಯೇ ಅಂದರೆ ಮಧ್ಯರಾತ್ರಿ 1.49ರಲ್ಲಿ ನಟ ಸುದೀಪ್ ಟ್ವೀಟ್ ಮಾಡಿ, ಪ್ರಿಯಾ @iampriya06 ತಾಳ್ಮೆ ಮತ್ತು ಘನತೆಯ ಪ್ರತೀಕ ಎಂದು ಬಣ್ಣಿಸಿದ್ದಾರೆ. ಸುದೀಪ್ @KicchaSudeep ಟ್ವೀಟ್ ಗೆ ಅವರ ಪತ್ನಿ ಪ್ರಿಯಾ ಕೂಡ ಪ್ರೀತಿಯಿಂದ ಥ್ಯಾಂಕ್ಸ್ ಹೇಳಿದ್ದು, 'ಪ್ರೀತಿಯ ಪತಿಗೆ ಥ್ಯಾಂಕ್ಸ್' ಎಂದು ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗಷ್ಟೇ ಪ್ರಿಯಾ ಅವರು ತಮ್ಮ ಹಿಮಾಲಯ ಯಾತ್ರೆಯನ್ನು ಪೂರ್ಣಗೊಳಿಸಿ ವಾಪಸ್ ಆಗಿದ್ದರು. ಅವರ ಯಾತ್ರೆಯ ಫೋಟೋಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೂ ಮೊದಲು ನವರಸ ನಾಯಕ ಜಗ್ಗೇಶ್ ಮಾಡಿದ್ದ ಟ್ವೀಟ್ ವೊಂದು ಸ್ಯಾಂಡಲ್ ವುಡ್ ನಲ್ಲಿ ವ್ಯಾಪಕ ಸುದ್ದಿಗೆ ಕಾರಣವಾಗಿತ್ತು. ನಟ ಸುದೀಪ್ ಮತ್ತು ಪ್ರಿಯಾ ಅವರ ಹೊಸ ವರ್ಷಾಚರಣೆ ಕುರಿತ ಸುದ್ದಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದ ಜಗ್ಗೇಶ್ Lovely pic.ಗಂಡು ಮಗು ಪ್ರಾಪ್ತಿರಸ್ತು:) ಕರುನಾಡು ಕಾಯುತ್ತಿದೆ ಜೂ.ಕಿಚ್ಚನಿಗೆ.. ಎಂದು ಟ್ವೀಟ್ ಮಾಡಿದ್ದರು.
ಜಗ್ಗೇಶ್ ಅವರ ಈ ಟ್ವೀಟ್ ವ್ಯಾಪಕ ವೈರಲ್ ಆಗಿ, ಸುದೀಪ್ ದಂಪತಿ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆಯೇ ಎಂಬ ಚರ್ಚೆಯನ್ನು ಹುಟ್ಟು ಹಾಕಿತ್ತು. ಈ ಬಗ್ಗೆ ಸುದೀಪ್-ಪ್ರಿಯಾ ದಂಪತಿ ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲವಾದರೂ ಈ ಚರ್ಚೆ ಮಾತ್ರ ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಮುಂದುವರೆಯುತ್ತಲೇ ಇದೆ. ಪ್ರಸ್ತುತ ಸುದೀಪ್-ಪ್ರಿಯಾ ದಂಪತಿಗೆ 11 ವರ್ಷದ ಸಾನ್ವಿ ಎಂಬ ಹೆಣ್ಣು ಮಗಳಿದ್ದಾಳೆ.
Thank you darling husband
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ