ಕೆಜಿಎಫ್ ದೇಶ ಮತ್ತು ವಿಶ್ವದ ಎಲ್ಲಾ ಚಿತ್ರ ಪ್ರೇಮಿಗಳನ್ನು ತಲುಪಲಿದೆ: ಯಶ್

ತಮ್ಮ ಹುಟ್ಟುಹಬ್ಬವನ್ನು ಇಂದು ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಜೊತೆ ಆಚರಿಸಿಕೊಳ್ಳುತ್ತಿರುವ ನಟ ಯಶ್...
ಕೆಜಿಎಫ್ ನಲ್ಲಿ ನಟ ಯಶ್
ಕೆಜಿಎಫ್ ನಲ್ಲಿ ನಟ ಯಶ್
Updated on: 
ತಮ್ಮ ಹುಟ್ಟುಹಬ್ಬವನ್ನು ಇಂದು ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಜೊತೆ ಆಚರಿಸಿಕೊಳ್ಳುತ್ತಿರುವ ನಟ ಯಶ್ ಪ್ರತಿವರ್ಷದಂತೆ ಈ ವರ್ಷವನ್ನು ಕೂಡ ತಮ್ಮ ಹುಟ್ಟುಹಬ್ಬದ ದಿನವನ್ನು ರಾಜ್ಯದ ಹಲವು ಜಿಲ್ಲೆಗಳಿಂದ ತಮ್ಮನ್ನು ಭೇಟಿ ಮಾಡಲು ಬರುವ ಪ್ರೀತಿಯ ಅಭಿಮಾನಿಗಳಿಗಾಗಿ ಮೀಸಲಿಟ್ಟಿದ್ದಾರೆ.
ಈ ದಿನ ನಾನು ನನ್ನ ಅಭಿಮಾನಿಗಳನ್ನು ಖುದ್ದಾಗಿ ಭೇಟಿ ಮಾಡಬಹುದಾದ ದಿನ. ಅವರು ನನಗೆ ಬಹಳಷ್ಟು ಪ್ರೀತಿ, ಹಾರೈಕೆಗಳನ್ನು ತೋರಿಸುತ್ತಾರೆ ಎನ್ನುತ್ತಾರೆ ನಟ ಯಶ್.
ಈ ವರ್ಷ ಯಶ್ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬದ ವಿಶೇಷ ಗಿಫ್ಟ್ ಇದೆ. ಅದೇನೆಂದರೆ ಯಶ್ ಅವರ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ನ ಮೇಕಿಂಗ್ ಟೀಸರ್ ಬಿಡುಗಡೆಯಾಗುತ್ತಿದೆ. ಹೊಂಬಾಳೆ ಫಿಲ್ಮ್ಸ್ ನಡಿ ಅದ್ದೂರಿ ಬಜೆಟ್ ನಲ್ಲಿ ಚಿತ್ರ ತಯಾರಾಗಿದ್ದು ಪ್ರಶಾಂತ್ ನೀಲ್ ಇದರ ನಿರ್ದೇಶಕರು.
ತಮ್ಮ ಸಿನಿವೃತ್ತಿ ಹಾಗೂ ಜೀವನ ಪಯಣದ ಬಗ್ಗೆ ಹುಟ್ಟುಹಬ್ಬ ಸಂದರ್ಭದಲ್ಲಿ ಮಾತನಾಡಿದ ನಟ ಯಶ್, ತಾವು ಇಲ್ಲಿಯವರೆಗೆ ನಟಿಸಿರುವ ಪ್ರತಿಯೊಂದು ಚಿತ್ರಗಳೂ ಕೂಡ ಅದರದ್ದೇ ಆದ ರೀತಿಯಲ್ಲಿ ತಮ್ಮ ಬೆಳವಣಿಗೆಗೆ ಸಹಕಾರಿಯಾಗಿದೆ. ತಾವು ಎಲ್ಲಿಗೆ ತಲುಪಬೇಕೊ ಅಲ್ಲಿಗೆ ತಲುಪಲು ಪ್ರತಿ ಚಿತ್ರಗಳು ಕೂಡ ಸಹಾಯವಾಗಿದೆ. ಅದು ಕಿರಾತಕ ಆಗಿರಬಹುದು, ಮೊದಲಾ ಸಲ, ರಾಜಧಾನಿ, ಜಾನು ಮಿಸ್ಟರ್ ಅಂಡ್ ಮಿಸ್ಸಸ್ ರಾಮಚಾರಿಯಾಗಿರಬಹುದು ಎಲ್ಲಾ ಚಿತ್ರಗಳು ನನಗೆ ಒಂದಲ್ಲೊಂದು ವಿಷಯವನ್ನು ಕಲಿಸಿವೆ ಎನ್ನುತ್ತಾರೆ.
ಯಶ್ ಅವರ ಇತ್ತೀಚೆಗೆ ಬಿಡುಗಡೆಯಾದ ಕೊನೆಯ ಚಿತ್ರ 2016ರ ಅಕ್ಟೋಬರ್ ನಲ್ಲಿ ಬಿಡುಗಡೆಯಾದ ಸಂತು ಸ್ಟ್ರೈಟ್ ಫಾರ್ವರ್ಡ್. ಅಲ್ಲಿಂದ ನಂತರ ಅವರ ಕೆಜಿಎಫ್ ಚಿತ್ರ ಬಿಡುಗಡೆಗೆ ದೀರ್ಘ ಸಮಯ ಹಿಡಿದಿದೆ ಎಂಬುದನ್ನು ಒಪ್ಪುತ್ತಾರೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಬಗ್ಗೆ ಮಾತನಾಡಿದ ಯಶ್, ಕೆಜಿಎಫ್ ಬಹುದೊಡ್ಡ ಬಜೆಟ್ ನಲ್ಲಿ ತಯಾರಾಗುತ್ತಿರುವ ಚಿತ್ರವಾಗಿದ್ದು ಇದು ನನ್ನ ಸಿನಿ ಬದುಕಿನಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸುವ ವಿಶ್ವಾಸ ಹೊಂದಿದ್ದೇನೆ. ಅದನ್ನು ಕನ್ನಡ ಸಿನಿಮಾಗಳಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯಬೇಕೆಂಬ ಹುಮ್ಮಸ್ಸಿನಲ್ಲಿ ಕೆಜಿಎಫ್ ಚಿತ್ರತಂಡವಿದೆ. ಚಿತ್ರ ವಿಳಂಬವಾದರೂ ಕೂಡ ಉತ್ತಮವಾದ ಚಿತ್ರವೊಂದನ್ನು ನೀಡುತ್ತೇವೆ ಎಂಬ ಭರವಸೆಯಿದೆ ಎನ್ನುತ್ತಾರೆ.
ಹಾಗಾದರೆ ಸಿನಿಮಾ ಬಿಡುಗಡೆಗೆ ಇಷ್ಟೊಂದು ದೀರ್ಘ ವಿರಾಮ ತೆಗೆದುಕೊಂಡರೆ ಅದರಿಂದ ಯಾವ ರೀತಿ ಪರಿಣಾಮ ಬೀರಬಹುದು ಎಂಬುದಕ್ಕೆ ಯಶ್, ಇದು ಒಳ್ಳೆಯದಲ್ಲ ಎಂಬುದು ನನಗೆ ಗೊತ್ತು. ಆದರೂ ಕೂಡ ಚಿತ್ರೋದ್ಯಮದಲ್ಲಿ ಇನ್ನಷ್ಟು ನಟರು ಬರಬೇಕಿದೆ. ಇಲ್ಲಿ ಹೆಚ್ಚೆಚ್ಚು ಹೀರೊಗಳು ಬೆಳೆಯಬೇಕು. ಅದು ಆಗುತ್ತಿದೆ ಮತ್ತು ಪ್ರತಿ ನಟರು ವರ್ಷಕ್ಕೆ ಕನಿಷ್ಠ ಎರಡು ಸಿನಿಮಾ ಮಾಡಿದರೆ ಎಲ್ಲವೂ ಸಮತೋಲನವಾಗುತ್ತದೆ ಎನ್ನುತ್ತಾರೆ.
ಈ ಮಧ್ಯೆ ಜಯಣ್ಣ ಕಂಬೈನ್ಸ್ ನಡಿ ಮುಂದಿನ ದಿನಗಳಲ್ಲಿ ಎರಡು ಚಿತ್ರಗಳಲ್ಲಿ ಯಶ್ ನಟಿಸಲಿದ್ದು ರಾಕ್ ಲೈನ್ ಪ್ರೊಡಕ್ಷನ್ ನಡಿ ಕೂಡ ಒಂದು ಸಿನಿಮಾ ತಯಾರಾಗಲಿದೆ. ಆದರೆ ಉಳಿದ ಪ್ರಾಜೆಕ್ಟ್ ಗಳ ಬಗ್ಗೆ ಈಗ ಮಾತನಾಡುವುದು ಬೇಗ ಎನಿಸುತ್ತದೆ ಅವರಿಗೆ. ಸಂತೋಷ್ ಆನಂದ್ ರಾಮ್ ಅವರ ಜೊತೆ ಸೇರಿ ಮತ್ತೊಂದು ಸಿನಿಮಾ ಯಶ್ ಮಾಡಲಿದ್ದಾರೆ ಎಂಬುದಕ್ಕೆ, ಅವನು ನನ್ನ ಹುಡುಗ ಎಂಬ ಚಿತ್ರದಲ್ಲಿ ಸಂತೋಷ್ ಆನಂದ್ ರಾಮ್ ಜೊತೆ ಮಾಡಲಿದ್ದೇನೆ. ತಮಗೋಸ್ಕರ ಕಥೆ ರೂಪಿಸಿದ್ದಾರೆ ಎಂದು ಕೂಡ ಸಂತೋಷ್ ಹೇಳಿದ್ದಾರೆ. ಅವರೊಟ್ಟಿಗೆ ಸೇರಿ ಸಿನಿಮಾ ಮಾಡುವುದು ಹೌದು ಎನ್ನುತ್ತಾರೆ.
ಸದ್ಯ ಕೆಜಿಎಫ್ ಚಿತ್ರದ ಮೇಲೆ ಸಂಪೂರ್ಣ ಗಮನ ಹರಿಸಿರುವ ಯಶ್, ಇನ್ನೂ 25 ದಿನಗಳ ಶೂಟಿಂಗ್ ಬಾಕಿಯಿದೆ. ಚಿತ್ರದ ಬಹುತೇಕ ಗ್ರಾಫಿಕ್ಸ್ ಕೆಲಸ ಬಾಕಿ ಇವೆಯಂತೆ. ಇವೆಲ್ಲವೂ ಮುಗಿದ ನಂತರ ಚಿತ್ರ ತಯಾರಕರು ಬಿಡುಗಡೆಯ ದಿನಾಂಕವನ್ನು ಘೋಷಿಸಲಿದ್ದಾರೆ. 
ಕೆಜಿಎಫ್ ಚಿತ್ರ ಕೇವಲ ಕನ್ನಡಕ್ಕೆ ಮಾತ್ರ ಸೀಮಿತವಾದದ್ದಲ್ಲ. ದೇಶದ ಮತ್ತು ವಿಶ್ವದ ಎಲ್ಲಾ ಕಡೆಗೆ ತಲುಪುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎನ್ನುತ್ತಾರೆ ಯಶ್. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com