ಬೆಂಗಳೂರು: ಆರ್ ಚಂದ್ರು ನಿರ್ದೇಶನದ ಐ ಲವ್ ಯೂ ಚಿತ್ರದ ಶೂಟಿಂಗ್ ಆರಂಭವಾಗಿದೆ, ಇದೇ ವೇಳೆ ನಿರ್ದೇಶಕರು ಆಡಿಯೋಲ ಬಿಡುಗಡೆಗೆ ಯೋಜನೆ ರೂಪಿಸುತ್ತಿದ್ದಾರೆ.
ಸೆಪ್ಟಂಬರ್ 18 ರಂದು ನಟ ಉಪೇಂದ್ರ ಅವರ ಹುಟ್ಟುಹಬ್ಬವಿದ್ದು, ಅಂದೇ ಆಡಿಯೋ ರಿಲೀಸ್ ಗೆ ಸಿದ್ಧತೆ ನಡೆಸಲಾಗುತ್ತಿದೆ, ಕಿರಣ್ ತೋಟಂಬೈಲೆ ಸಿನಿಮಾಗೆ ಸಂಗೀತ ನೀಡಿದ್ದಾರೆ. ಐ ಲವ್ ಯು ಸಿನಿಮಾ ಮೂಲಕ ನಿರ್ದೇಶಕರಾಗಿದ್ದವರು ಮೊದಲ ಬಾರಿಗೆ ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ.
ಉಪೇಂದ್ರ ಅಭಿನಯಜ ಈ ಸಿನಿಮಾದಲ್ಲಿ ರಚಿತ ರಾಮ್ ಮತ್ತು ಸೋನು ಗೌಡ ಮತ್ತು ತ್ರಿವ ನಟಿಸಿದ್ದಾರೆ.