ನಾಗತಿಹಳ್ಳಿ ಚಂದ್ರಶೇಖರ್ ಮುಂದಿನ ಚಿತ್ರಕ್ಕೆ ಥೇಮ್ಸ್ ನದಿ ತೀರದಲ್ಲಿ ಮುಹೂರ್ತ

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಇನ್ನೂ ಹೆಸರಿಡದ ಚಿತ್ರದ ಶೂಟಿಂಗ್ ಗೆ ಚಿತ್ರತಂಡ ...
ನಾಗತಿಹಳ್ಳಿ ಚಂದ್ರಶೇಖರ್
ನಾಗತಿಹಳ್ಳಿ ಚಂದ್ರಶೇಖರ್
Updated on: 

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಇನ್ನೂ ಹೆಸರಿಡದ ಚಿತ್ರದ ಶೂಟಿಂಗ್ ಗೆ ಚಿತ್ರತಂಡ ಯುರೋಪ್ ಪ್ರವಾಸ ಕೈಗೊಳ್ಳಲಿದೆ. ಲಂಡನ್ ನ ಥೇಮ್ಸ್ ನದಿ ತೀರದಲ್ಲಿರುವ ಬಸವೇಶ್ವರ ಪ್ರತಿಮೆ ಎದುರು ಚಿತ್ರದ ಮುಹೂರ್ತ ನಡೆಯಲಿದೆ. ವಶಿಷ್ಟ ಸಿಂಹ ಮತ್ತು ಮಾನ್ವಿತಾ ಹರೀಶ್ ನಟಿಸುತ್ತಿರುವ ಚಿತ್ರದ ಶೂಟಿಂಗ್ ಆಗಸ್ಟ್ 4ರಂದು ಆರಂಭವಾಗಲಿದೆ.

ನಾಗತಿಹಳ್ಳಿಯವರ ಈ ಚಿತ್ರಕ್ಕೆ ಅವರ ಪುತ್ರಿ ಕನಸು ಕಥೆ ಬರೆದಿದ್ದು 90ರ ದಶಕದ ಅವರ ಸೂಪರ್ ಹಿಟ್ ಸಿನಿಮಾ ಅಮೆರಿಕಾ ಅಮೆರಿಕಾ ರೀತಿಯ ಕಥೆಯಾಗಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರು ಕೂಡ ಆಗಿರುವ ನಾಗತಿಹಳ್ಳಿ ಚಂದ್ರಶೇಖರ್ ಚಿತ್ರದಲ್ಲಿ ನಾಯಕನ ಪಾತ್ರಕ್ಕೆ ವಶಿಷ್ಟ ಸಿಂಹ ಅವರನ್ನು ಆಯ್ಕೆಮಾಡಿಕೊಂಡಿದ್ದಾರೆ.

ಚಿತ್ರದಲ್ಲಿ ಪ್ರಕಾಶ್ ಬೆಳವಾಡಿ, ಸುಮಲತಾ ಅವರು ಅನಿವಾಸಿ ಭಾರತೀಯರ ಪಾತ್ರ ನಿರ್ವಹಿಸಲಿದ್ದಾರೆ. ವೈ ಎನ್ ಶಂಕರೇ ಗೌಡ ನಿರ್ಮಿಸುತ್ತಿರುವ ಚಿತ್ರಕ್ಕೆ ಮತ್ತಿಬ್ಬರು ಅನಿವಾಸಿ ಭಾರತೀಯರು ಕೂಡ ಹಣ ಹೂಡಿಕೆ ಮಾಡುತ್ತಿದ್ದಾರೆ. ವೇಲ್ಸ್, ಸ್ಕಾಟ್ ಲ್ಯಾಂಡ್ ಮತ್ತು ಮ್ಯಾಂಚೆಸ್ಟರ್ ನಲ್ಲಿ ಶೂಟಿಂಗ್ ನಡೆಯಲಿದೆ.

ಬ್ರಿಟಿಷ್ ಛಾಯಾಗ್ರಾಹಕ ವಿಲ್ ಪ್ರೈಸ್ ಅವರ ಕ್ಯಾಮರಾ ಕೈಚಳಕವಿರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com