ತಮಿಳುನಾಡಿನ ತೂತುಕುಡಿ ಮೂಲದ ಜವಹಾರ್ ತಂದೆ ತಿರವಯಾಮ್ ನಡಾರ್ 1957ರಲ್ಲಿ ಮುಂಬೈಗೆ ಬಂದು ನೆಲೆಸಿದ್ದರಂತೆ. ಬೆಲ್ಲ ಮತ್ತು ಕಬ್ಬಿನ ವ್ಯಾಪಾರಿ ಆಗಿದ್ದ ಅವರನ್ನು 'ಗೂಡ್‌ವಾಲಾ ಸೇಠ್' ಮತ್ತು 'ಕಾಳಾ ಸೇಠ್' ಎಂದು ಕರೆಯುತ್ತಿದ್ದರಂತೆ. ಇತ್ತ, ಈ ಬಗ್ಗೆ ಮಾಧ್ಯಮಗಳು 'ಕಾಳಾ' ಚಿತ್ರ ತಂಡವನ್ನು ಸಂಪರ್ಕಿಸಿದ್ದು, ನೋಟಿಸ್ ತಮ್ಮ ಕೈ ಸೇರಿದ ಬಳಿಕ ಪ್ರತಿಕ್ರಿಯೆ ನೀಡುವುದಾಗಿ ಚಿತ್ರ ತಂಡ ಹೇಳಿದೆ.