ಈ ಹಿಂದೆಯೇ ಮಾಧವನ್ ಜೊತೆಯಲ್ಲಿ ನಟಿಸಿರುವ ಶ್ರದ್ದಾ ಶ್ರೀನಾಥ್, ಇಬ್ಬರು ಮತ್ತೊಂದು ಚಿತ್ರದಲ್ಲಿ ಒಟ್ಟಾಗಿದ್ದು, ತೆರೆ ಮೇಲೆ ಚೆನ್ನಾಗಿ ಮೂಡಿಬರುವ ವಿಶ್ವಾಸದಲ್ಲಿದ್ದಾರೆ. ಮಾರಾದಲ್ಲಿನ ಕಥೆ ವಿವರಿಸಿದ ಅವರು, ಇದೊಂದು ಯುವತಿ ಹಾಗೂ ಹಿರಿಯ ವಯಸ್ಸಿನ ವ್ಯಕ್ತಿ ನಡುವಿನ ಪ್ರೇಮ ಕಥೆಯಾಗಿದ್ದು, ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಹೇಳಿದರು.