ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ: ಚಿನ್ನೇಗೌಡ ಜಯಭೇರಿ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ವರನಟ ಡಾ. ರಾಜ್‍ ಕುಟುಂಬದ ಚಿನ್ನೇಗೌಡ ಜಯ ಗಳಿಸಿದ್ದಾರೆ.
ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ: ಚಿನ್ನೇಗೌಡ ಜಯಭೇರಿ
ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ: ಚಿನ್ನೇಗೌಡ ಜಯಭೇರಿ

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ವರನಟ ಡಾ. ರಾಜ್‍ ಕುಟುಂಬದ ಚಿನ್ನೇಗೌಡ ಜಯ ಗಳಿಸಿದ್ದಾರೆ.

ನೂತನ ಅಧ್ಯಕ್ಷರಾಗಲಿರುವ ಎಸ್.ಎ.ಚಿನ್ನೇಗೌಡ ಅವರಿಗೆ 552 ಮತಗಳು ಲಭಿಸಿದೆ.
ಪ್ರತಿ ವರ್ಷವೂ ನಡೆಯಬೇಕಾಗಿದ್ದ ಚುನಾವಣೆ ಕಾರಣಾಂತಗಳಿಂದಾಗಿ ಕಳೆದ ಎರಡೂವರೆ ವರ್ಷಗಳಿಂದಲೂ ನಡೆದಿರಲಿಲ್ಲ. ಇನ್ನು ಈ ಬಾರಿ ವಿದ್ಯುನ್ಮಾನ ಮತಯಂತ್ರ ಬಳಸಿ ಮತದಾನ ನಡೆಸಿರುವುದು ವಿಶೇಷವಾಗಿದೆ.
ಚಲನಚಿತ್ರ ವಿತರಕರ ಕುಟುಂಬಕ್ಕೆ ಈ ಭಾರಿ ಅಧ್ಯಕ್ಷ ಸ್ಥಾನ ಒಲಿದಿದ್ದು ಖ್ಯಾತ ನಿರ್ಮಾಪಕಿ ಪಾರ್ವತಮ್ಮ ರಾಜ್‍ಕುಮಾರ್ ಅವರ ಸೋದರರಾದ ಚಿನ್ನೇಗೌಡರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ರಾಜ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಇದೇ ವೇಳೆ  ಮಾರ್ಸ್ ಸುರೇಶ್ ಈ ಚುನಾವಣೆಯಲ್ಲಿ ಚಿನ್ನೇಗೌಡರ ಎದುರು ಪರಾಜಯ ಅನುಭವಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com