ವಿಶೇಷವೆಂದರೆ ಇಂದಿನ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಂದ ಅಟೀಸ ರ್ ವೀಕ್ಷಣೆಗಾಗಿ 500 ರು. ಪಡೆಯಲಾಗಿದೆ, ಸಂಗ್ರಹವಾದ ಹಣವನ್ನು ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಕನ್ನಡ ನಿರ್ದೇಶಕರಿಗೆ ಹಂಚಲಾಗಿದೆ. ಇಂದು ಕಾರ್ಯಕ್ರಮದಲ್ಲಿ ಸಂಗ್ರಹವಾಗಿದ್ದ ಹಣವನ್ನು ಕುಮಾರಸ್ವಾಮಿಯವರು ನಿರ್ದೇಶಕರಾದ ಬೂದಾಳ್ ಕೃಷ್ಣಮೂರ್ತಿ, ಹಿರೇಮಠ್, ಆನಂದ್ ಪಿ ರಾಜು, ಎ.ಟಿ.ರಘು ಅವರುಗಳಿಗೆ ಹಂಚಿಕೆ ಮಾಡಿದ್ದಾರೆ.