ಕನ್ನಡದ ನಟಿಯರಾದ ಭಾವನ ರಾವ್, ಶಾನ್ವಿ ಶ್ರೀವಾತ್ಸವ್ ಮತ್ತು ಸಂಯುಕ್ತ ಹೊರನಾಡ್ ಸ್ಯಾಂಡಲ್ವುಡ್ ನ ಬಹುನಿರೀಕ್ಷಿತ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ...
ಶಿವರಾಜ್ ಕುಮಾರ್, ಭಾವನಾ ರಾವ್, ಶಾನ್ವಿ ಶ್ರೀವಾತ್ಸವ್, ಸಂಯುಕ್ತ ಹೊರನಾಡ್
ಕನ್ನಡದ ನಟಿಯರಾದ ಭಾವನ ರಾವ್, ಶಾನ್ವಿ ಶ್ರೀವಾತ್ಸವ್ ಮತ್ತು ಸಂಯುಕ್ತ ಹೊರನಾಡ್ ಸ್ಯಾಂಡಲ್ವುಡ್ ನ ಬಹುನಿರೀಕ್ಷಿತ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.
ದಿ ವಿಲನ್ ಚಿತ್ರದಲ್ಲಿನ ಹಾಡೊಂದರಲ್ಲಿ ಆರು ನಟಿಯರು ಹೆಜ್ಜೆ ಹಾಕಲಿದ್ದಾರೆ ಎಂದು ಈ ಹಿಂದೆ ಹೇಳಲಾಗಿತ್ತು. ಅಂತೆ ರಚಿತಾ ರಾಮ್, ಶ್ರದ್ಧಾ ಶ್ರೀನಾಥ್, ರಾಧಿಕಾ ಚೇತನ್, ಭಾವನ ರಾವ್, ಶಾನ್ವಿ ಶ್ರೀವಾತ್ಸವ್ ಮತ್ತು ಸಂಯುಕ್ತ ಹೊರನಾಡ್ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹೆಜ್ಜೆ ಹಾಕಲಿದ್ದಾರೆ.
ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ಮತ್ತು ಆ್ಯಮಿ ಜಾಕ್ಸನ್ ನಟಿಸುತ್ತಿದ್ದಾರೆ.