ಶೂಟಿಂಗ್ ವೇಳೆ ಬಿಗ್ ಬಿ ಅಸ್ವಸ್ಥ: ಜೋಧ್ ಪುರ್ ಆಸ್ಪತ್ರೆಗೆ ದಾಖಲು

ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾ ಶೂಟಿಂಗ್ ವೇಳೆ ನಟ ಅಮಿತಾಬ್ ಬಚ್ಚನ್ ಅಸ್ವಸ್ಥರಾದ ಕಾರಣ ಅವರನ್ನು ಜೋಧ್ ಪುರ ಆಸ್ಪತ್ರೆಗೆ ದಾಖಲಿಸಲಾಗಿದೆ....
ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್
ಜೋಧ್ ಪುರ: ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾ ಶೂಟಿಂಗ್ ವೇಳೆ ನಟ ಅಮಿತಾಬ್ ಬಚ್ಚನ್ ಅಸ್ವಸ್ಥರಾದ ಕಾರಣ ಅವರನ್ನು ಜೋಧ್ ಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳವಾರ ಬೆಳಗ್ಗೆ ತಮ್ಮ ಬ್ಲಾಗ್ ನಲ್ಲಿ   ಸ್ವತಃ ಅಮಿತಾಬ್ ಬಚ್ಚನ್ ಅವರೇ ಬರೆದುಕೊಂಡಿದ್ದಾರೆ, ಶೂಟಿಂಗ್ ವೇಳೆ ಏನಾಯಿತು ಎಂಬುದರ ಬಗ್ಗೆ ಬಿಗ್ ಯಾವುದೇ ವಿವರ ನೀಡಿಲ್ಲ, 
ಅಲ್ಲಿಯೇ ಇದ್ದ ವೈದ್ಯರ ತಂಡ ಪರೀಕ್ಷಿಸಿ ಜೋಧ್ ಪುರ ಆಸ್ಪತ್ರೆಗೆ ದಾಖಲಿಸಿತು, ನಾನು ಸದ್ಯ ವಿಶ್ರಾಂತಿ ತೆಗೆದುಕೊಳ್ಳಬೇಕು, ಮತ್ತಷ್ಟು ಮಾಹಿತಿಯನ್ನು ಹಂಚಿಕೊಳ್ಳುತ್ತಿರುತ್ತೇನೆ ಎಂದು ಹೇಳಿದ್ದಾರೆ.
ಏನನ್ನಾದರೂ ಸಾಧನೆ ಮಾಡಬೇಕು ಎಂದಾಗ ಇಂಥಹ ಹೋರಾಟ ನಡೆಯುವ ಅವಶ್ಯಕತೆಯಿದೆ. ಯಾವುದೇ ಹೋರಾಟವಿಲ್ಲದೇ ನೋವಿಲ್ಲದೇ ಕಣ್ಣೀರು ಹಾಗೂ ಬೆವರು ಹನಿಯಿಲ್ಲದೇ ಏನನ್ನೂ ಸಾಧಿಸಲಾಗದು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com