

ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಸ್ಯಾಂಡಲ್ ವುಡ್ ಪ್ರವೇಶಿಸುತ್ತಿದ್ದು, ಅವರನ್ನು ಸ್ವಾಗತಿಸಲು ಕನ್ನಡ ಚಿತ್ರರಂಗ ಸಜ್ಜಾಗಿದೆ. ಶೀಘ್ರದಲ್ಲಿಯೇ ಅವರು ತಮ್ಮ ಚೊಚ್ಚಲ ಸಿನಿಮಾಕ್ಕೆ ಬಣ್ಣ ಹಚ್ಚಲಿದ್ದಾರೆ.
ಅಮರ್ ಹೆಸರಿನ ಈ ಚಿತ್ರಕ್ಕೆ ನಾಗಶೇಖರ್ ನಿರ್ದೇಶಕರಾಗಿದ್ದು, ಸಂದೇಶ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.ಅರ್ಜುನ್ ಜನ್ಯಾ, ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದು, ಸತ್ಯ ಹೆಗ್ಡೆ ಅವರ ಛಾಯಾಗ್ರಹಣವಿರಲಿದೆ. ಸಂಪಾದಕ ವಿಭಾಗದಲ್ಲಿ ಯಾರು ಇರಲಿದ್ದಾರೆ ಎಂಬುದನ್ನು ಚಿತ್ರ ನಿರ್ಮಾಪಕರು ಇನ್ನೂ ಬಹಿರಂಗಪಡಿಸಿಲ್ಲ.
ಈ ನಡುವೆ ಮೇ 29 ರಂದು ಚಿತ್ರದ ಅದ್ದೂರಿ ಮುಹೂರ್ತ ಸಮಾರಂಭವನ್ನು ಚಿತ್ರತಂಡ ಆಯೋಜಿಸಿದೆ. ಅಂಬರೀಷ್ ಹುಟ್ಟುಹಬ್ಬದ ದಿನದಿಂದೇ ಅಭಿಷೇಕ್ ಚಿತ್ರ ದ ಮುಹೂರ್ತ ನಡೆಯುತ್ತಿರುವುದು ವಿಶೇಷವಾಗಿದೆ.
ನಿರ್ದೇಶಕರೊಂದಿಗೆ ನಿರಂತರವಾಗಿ ಚರ್ಚೆ ನಡೆಸುತ್ತಿದ್ದು, ಕ್ಯಾಮರಾ ಮುಂದೆ ನಿಲ್ಲಲು ಸಿದ್ಧವಿರುವುದಾಗಿ ಅಭಿಷೇಕ್ ಹೇಳಿದ್ದಾರೆ. ನಾಯಕಿ ನಟಿ , ಪ್ರಸಾದನ ಸೇರಿದಂತೆ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿವೆ.