ಸುದೀಪ್ ಜೊತೆ ಅಭಿನಯಿಸುವ ನನ್ನ ಕನಸು ನನಸಾಗಿದೆ: ಅಕ್ಷಿತಾ

2017ರಲ್ಲಿ ‘ರಿಯಲ್ ಪೊಲೀಸ್’ ಚಿತ್ರದಲ್ಲಿ ಸಾಯಿಕುಮಾರ್​ಗೆ ನಾಯಕಿ ಆಗಿ ನಟಿಸಿದ್ದ ಅಕ್ಷಿತಾ ಭೋಪಯ್ಯ ಈಗ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದಲ್ಲಿ ...
ಅಕ್ಷಿತಾ ಭೋಪಯ್ಯ
ಅಕ್ಷಿತಾ ಭೋಪಯ್ಯ
Updated on
ಬೆಂಗಳೂರು: 2017ರಲ್ಲಿ ‘ರಿಯಲ್ ಪೊಲೀಸ್’ ಚಿತ್ರದಲ್ಲಿ ಸಾಯಿಕುಮಾರ್​ಗೆ ನಾಯಕಿ ಆಗಿ ನಟಿಸಿದ್ದ ಅಕ್ಷಿತಾ ಭೋಪಯ್ಯ  ಈಗ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.
‘ರಿಯಲ್ ಪೊಲೀಸ್’ ಚಿತ್ರದ ಟ್ರೇಲರ್ ನೋಡಿದ ನಿರ್ದೇಶಕ ಗುರುದತ್ ಗಾಣಿಗ ಅವರು ‘ಅಂಬಿ..’ ಬಳಗದಲ್ಲಿ ಸೇರಿಕೊಳ್ಳುವಂತೆ ಅಕ್ಷಿತಾಗೆ ಆಫರ್ ನೀಡಿದರು.ಖುಷಿಯಿಂದಲೇ ಒಪ್ಪಿಕೊಂಡ ಅವರಿಗೆ ಸುದೀಪ್ ಬ್ಯಾನರ್​ನಲ್ಲಿ ಅಂಬರೀಷ್ ಜತೆ ನಟಿಸುತ್ತಿರುವುದು ಹೆಮ್ಮೆ ವಿಷಯವಾಗಿದೆ ಎಂದು ಹೇಳಿದ್ದಾರೆ.
ಈ ಚಿತ್ರದಲ್ಲಿ ಸಹಾಯಕ ನಿರ್ದೇಶಕಿಯ ಪಾತ್ರ ಮಾಡಿದ್ದಾರೆ. ಚಿತ್ರದ ದೃಶ್ಯಗಳಲ್ಲಿ ರಿಷಭ್ ಶೆಟ್ಟಿ ಜತೆಯೂ ಅವರು ಕಾಣಿಸಿಕೊಳ್ಳಲಿದ್ದಾರಂತೆ.ಚಿಕ್ಕ ವಯಸ್ಸಿನಿಂದಲೂ ನಟಿಸುವ ಹಂಬಲ ಇತ್ತು. ಜತೆಗೆ ನೃತ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ಹರಿಸಿದ್ದೆಎಂದು ಹೇಳಿದ್ದಾರೆ.
ಸಿನಿಮಾ ಮತ್ತು ಕಿರುತೆರೆಯ ಒಡನಾಟ ಇಟ್ಟುಕೊಂಡಿರುವ ಅಕ್ಷಿತಾಗೆ ಬೇರೆ ಭಾಷೆಗಳಿಂದಲೂ ಆಫರ್ ಬರುತ್ತಿವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com