ಪ್ರಿಯಾಂಕಾ ಉಪೇಂದ್ರ ಮುಂದೆ ಯಾವಾಗಲೂ ಸವಾಲೇ ಇರುತ್ತದೆ. ಎಲ್ಲಾ ವೇಳೆಯಲ್ಲೂ ಆಕೆಯ ಉತ್ಸಾಹಕ್ಕೆ ಮಾತ್ರ ಬೆಲೆ ದೊರೆಯುತ್ತಿದೆ. ಮುಂಬರುವ 2nd Half ಚಿತ್ರದಲ್ಲಿ ಆಕೆ ಪೊಲೀಸ್ ಕಾನ್ಸ್ ಟೇಬಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಪ್ರಿಯಾಂಕಾ ಉಪೇಂದ್ರ ಮುಂದೆ ಯಾವಾಗಲೂ ಸವಾಲೇ ಇರುತ್ತದೆ. ಎಲ್ಲಾ ವೇಳೆಯಲ್ಲೂ ಆಕೆಯ ಉತ್ಸಾಹಕ್ಕೆ ಮಾತ್ರ ಬೆಲೆ ದೊರೆಯುತ್ತಿದೆ. ಮುಂಬರುವ 2nd Half ಚಿತ್ರದಲ್ಲಿ ಆಕೆ ಪೊಲೀಸ್ ಕಾನ್ಸ್ ಟೇಬಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರದಲ್ಲಿ ಆಕೆ ಅತ್ಯುತ್ಸಾಹದಿಂದ ನಟಿಸಿದ್ದು, ಹೊಸ ಕಥೆಯೊಂದಿಗೆ ಹೇಗೆ ಹೊಸ ಅಲೆಯ ಚಿತ್ರವನ್ನು ನಿರ್ದೇಶಕರು ನಿರ್ದೇಶಿಸಿದ್ದಾರೆ ಎಂಬ ಬಗ್ಗೆ ಪ್ರಿಯಾಂಕ ಉಪೇಂದ್ರ ಸಿಟಿ ಎಕ್ಸ್ ಪ್ರೆಸ್ ಜೊತೆ ತಮ್ಮ ಅನಿಸಿಕೆ ಹಂಚಿಸಿಕೊಂಡಿದ್ದಾರೆ.
ಸಿನಿಮಾದಲ್ಲಿನ ತನ್ನ ಪಾತ್ರದ ಬಗ್ಗೆ ವಿವರಿಸಿದ ಪ್ರಿಯಾಂಕ ಉಪೇಂದ್ರ, ತಮ್ಮ ತಂದೆ ಪೊಲೀಸ್ ಆಗಿರುತ್ತಾರೆ. ಮಹಿಳೆಯರು ಹಾಗೂ ಸಮಾಜದ ರಕ್ಷಣೆಗಾಗಿ ಪೊಲೀಸ್ ಹುದ್ದೆ ಸೇರುತ್ತೇನೆ. ಪೊಲೀಸ್ ವೃತ್ತಿ ಹಾಗೂ ಹಿರಿಯ ಅಧಿಕಾರಿಗಳು ಕಿರಿಯರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದು ಈ ಚಿತ್ರದ ತಿರುಳಾಗಿದೆ.
ಪೊಲೀಸ್ ಆಗಿ ಅದನ್ನು ಕೇಳಲು ಕಷ್ಟವಾಗುತ್ತದೆ. ಶಾಲಿನಿ ಮತ್ತು ನಾನು ಸಿಸಿಟಿವಿ ನಿರ್ವಹಣೆ ಮಾಡುತ್ತೇವೆ ಹಾಗೂ ಆ ಪ್ರದೇಶದಲ್ಲಿ ಏನು ನಡೆಯುತ್ತದೆ ಎಂಬುದನ್ನು ಗಮನ ಹರಿಸಲಾಗುತ್ತದೆ. ಪೊಲೀಸ್ ಪಾತ್ರ ಅತಿ ಮುಖ್ಯವಾಗಿದ್ದು , ಆ ಪಾತ್ರದಿಂದ ತುಂಬಾ ಅನುಭವ ಪಡೆದಿರುವುದಾಗಿ ಹೇಳಿದರು.
ಸಿನಿಮಾದಲ್ಲಿನ ಪಾತ್ರಕ್ಕಾಗಿ ಪೊಲೀಸ್ ಠಾಣೆಗೆ ತೆರಳಿ ಮಹಿಳಾ ಪೊಲೀಸರನ್ನು ಗಮನಿಸುತ್ತಿದೆ. ಅವರ ದೇಹ ಭಾಷೆ,ಮತ್ತಿತರ ದೈನಂದಿನ ಚಲನವಲನಗಳನ್ನು ಅನುಕರಿಸುತ್ತದೆ. ಹೆಚ್ಚಿಗೆ ಮೇಕಪ್ ಮಾಡಿಲ್ಲ ಎಂದು ಪ್ರಿಯಾಂಕ ತಿಳಿಸಿದರು.